ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ

KannadaprabhaNewsNetwork |  
Published : Jul 29, 2026, 02:15 AM IST
ಹಿರೇಕೆರೂರ, ರಟ್ಟೀಹಳ್ಳಿ ತಾಲೂಕು ಬಣಜಿಗ ಸಮಾಜ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಪಟ್ಟಣದಲ್ಲಿ ತಹಸೀಲ್ದಾರ್ ಕಚೇರಿಯ ಎದುರು ಶಿರಸ್ತೇದಾರ ಎಮ್.ಎಸ್. ಬೆನ್ನೂರಮಠ ಅವರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಉದ್ಯೋಗಕ್ಕಾಗಿ ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ಆದೇಶ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಟ್ಟಣದಲ್ಲಿ ತಹಸೀಲ್ದಾರ್ ಕಚೇರಿಯ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಶಿರಸ್ತೇದಾರ ಎಮ್.ಎಸ್. ಬೆನ್ನೂರಮಠ ಅವರಿಗೆ ಮನವಿ ಸಲ್ಲಿಸಲಾಯಿತು.

ಹಿರೇಕೆರೂರು: ಉದ್ಯೋಗಕ್ಕಾಗಿ ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ಆದೇಶ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಟ್ಟಣದಲ್ಲಿ ತಹಸೀಲ್ದಾರ್ ಕಚೇರಿಯ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಶಿರಸ್ತೇದಾರ ಎಮ್.ಎಸ್. ಬೆನ್ನೂರಮಠ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕು ಸಂಘದ ಅಧ್ಯಕ್ಷ ಕಲ್ಯಾಣಪ್ಪ ಹಂಚಿನ ಮಾತನಾಡಿ, ರಾಜ್ಯದ ಹಲವು ಜಿಲ್ಲೆಗಳು ಮತ್ತು ತಾಲೂಕುಗಳಲ್ಲಿ ಈಗಾಗಲೇ ನಮ್ಮ ಸಮಾಜದವರಿಗೆ ಉದ್ಯೋಗಕ್ಕಾಗಿ ಪ್ರವರ್ಗ 2ಎ ಮಿಸಲಾತಿ ಆದೇಶ ನೀಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೈಸೂರು ಜಿಲ್ಲೆಯ ಕೊಳ್ಳೆಗಾಲದ ನಮ್ಮ ಸಮುದಾಯದ ಶಿಕ್ಷಕಿ ಸುನಿತಾ ವಿ.ಎಸ್. ಅವರು ಕೋರ್ಟ್‌ ಮೆಟ್ಟಿಲೆರಿದ್ದರು. ರಾಜ್ಯದ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜು ಅವರು ಇರುವ ನ್ಯಾಯಾಲಯದ ಏಕಪೀಠವು, ಬಣಜಿಗ ಸಮುದಾಯವನ್ನು ಉದ್ಯೋಗ ಉದ್ದೇಶಕ್ಕಾಗಿ ಪ್ರವರ್ಗ 2ಎ ಹಾಗೂ ಶಿಕ್ಷಣ ಉದ್ದೇಶಕ್ಕಾಗಿ ಪ್ರವರ್ಗ 2ಬಿ ಅಡಿಯಲ್ಲಿ ವರ್ಗಿಕರಿಸುವುದು ಪರಿಚ್ಛೇದದ ಉಲ್ಲಂಘನೆಯಾಗುತ್ತದೆ. ಅದಕ್ಕಾಗಿ ಈ ಸಮುದಾಯವನ್ನು ಪರಿಚ್ಛೇದ 16{4} ರ ಅಡಿಯಲ್ಲಿ ಗ್ರೂಪ್ ಡಿ ಬದಲಿಗೆ ಗ್ರೂಪ್ ಡಿ ಅಡಿಯಲ್ಲಿ ಮರು ವರ್ಗಿಕರಿಸಬೇಕು ಎಂದು ನ್ಯಾಯಾಲಯ ಪೀಠವು ಆದೇಶ ನೀಡಿದೆ. ನಮ್ಮ ಬಣಜಿಗ ಸಮಾಜ ಶೈಕ್ಷಣಿಕವಾಗಿ ಹಿಂದುಳಿದಿರುವುದರಿಂದ ಸರ್ಕಾರಿ ನೇಮಕಾತಿಗಳಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಇನ್ನು ಮುಂದೆ ನ್ಯಾಯಾಲಯದ ಆದೇಶ ಪ್ರಕಾರ ನಮ್ಮ ಸಮುದಾಯಕ್ಕೆ ಉದ್ಯೋಗಕ್ಕಾಗಿ ಪ್ರವರ್ಗ 2ಎ ಮಿಸಲಾತಿ ಆದೇಶ ನೀಡುವಂತೆ ಮನವಿ ಮಾಡಿದರು.

ತಾಲೂಕು ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ವೀರಪ್ಪ ಎಣ್ಣಿ, ಉಪಾಧ್ಯಕ್ಷ ಚಂದ್ರಪ್ಪ ಹಲವಾಲದ, ಸಹಕಾರ್ಯದರ್ಶಿ ಈರಣ್ಣ ಹಾದ್ರಿಹಳ್ಳಿ, ಸಿದ್ದಲಿಂಗೇಶ ಶೆಟ್ಟರ, ಬಸವರಾಜ ಶೆಟ್ಟರ, ಇಂದುಧರ ಶೆಟ್ಟರ, ಶಿವಲಿಂಗಪ್ಪ ಕಲ್ಯಾಣಿ, ಜಿ.ಕೆ.ಶೆಟ್ಟರ, ಸಂತೋಷ ಹಂಚಿ, ರಮೇಶ ದಂದೂರ, ಸೋಮಶೇಖರ ಎಣ್ಣಿ, ರಮೇಶ ದಂದೂರ, ಸಂತೋಷ ಕುಂಸಿ, ಪವನ್ ಮುಗಳಗೇರಿ, ವೀರೇಶ ವಾಲಿಶೆಟ್ಟರ, ಮುರಗೇಶ ಲಂಗೋಟಿಶೆಟ್ಟರ, ಗುರುಶಾಂತ ಬಿಳಿಗಿ, ನಾಗರಾಜ ಅಣಜಿ, ಪವನ್ ಮುಗಳಗೇರಿ, ಕವಿತಾ ಕಲ್ಯಾಣಿ, ಮಹದೇವಕ್ಕ ಹಾದ್ರಿಹಳ್ಳಿ, ಕವಿತಾ ಹಲವಾಗಿಲ, ಕವಿತಾ ಕಂಪ್ಲಿ, ಆಶಾ ಕಲ್ಯಾಣಿ, ದಯಾನಂದ ಕಲ್ಯಾಣಿ, ಮಲ್ಲಿಕಾರ್ಜುನ ಹಳಕಟ್ಟಿ, ರವಿ ಶೆಟ್ಟರ, ಸಂತೋಷ ವಾಲಿ, ರಾಕೇಶ ಶೆಟ್ಟರ, ಮಾಲತೇಶ ಕೋರಿ, ರುದ್ರೇಶ ಬೇತೂರ, ಮಂಜುನಾಥ ಕಂಪ್ಲಿ, ಹಾಗೂ ಸಮಾಜದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶಕ್ಕಾಗಿ ಸೇವೆ ಮಾಡಲು ಸದಾ ಸಿದ್ಧರಾಗಿ: ಎ.ಬಿ. ಹೆಸರೂರ
ಸೂಡಿ ಗ್ರಾಮ ಪಂಚಾಯಿತಿ ಎದುರು ಕಸ ಸುರುವಿ ಆಕ್ರೋಶ