ಸುಟ್ಟ ಟಿಸಿ ಬದಲಿಸಲು ಬೆಸ್ಕಾಂ ನಿರ್ಲಕ್ಷ್ಯ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

KannadaprabhaNewsNetwork |  
Published : Jan 22, 2025, 12:35 AM IST
ಪೋಟೋ20ಸಿಎಲ್ಕೆ4 ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮದ ಬೆಸ್ಕಾಂ ಕಚೇರಿ ಮುಂಭಾಗದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪ್ರೊ.ಬಣ) ಸೋಮವಾರ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ತಾಲೂಕಿನ ತಳಕು ಹೋಬಳಿಯ ಘಟಪರ್ತಿ, ವಲಸೆ, ಚನ್ನಗಾನಹಳ್ಳಿ, ಹೊನ್ನೂರು ಗ್ರಾಮಗಳ ವ್ಯಾಪ್ತಿಯಲ್ಲಿ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ತಿಂಗಳು ಕಳೆಯುತ್ತಿದೆ. ಆದರೂ ಅವುಗಳನ್ನು ಬದಲಿಸದೇ ಬೆಸ್ಕಾಂನ ತಳಕು ಕಚೇರಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪ್ರೊ.ಬಣ) ವತಿಯಿಂದ ಸೋಮವಾರ ಚಳ್ಳಕೆರೆಯಲ್ಲಿ ಪ್ರತಿಭಟನೆ ನಡೆಯಿತು.

- ಸಮಸ್ಯೆ ಪರಿಹರಿಸಿ, ಬೆಳೆಗಳ ಉಳಿಸಲು ಮುಖಂಡರ ಮನವಿ- - - ಚಳ್ಳಕೆರೆ: ತಾಲೂಕಿನ ತಳಕು ಹೋಬಳಿಯ ಘಟಪರ್ತಿ, ವಲಸೆ, ಚನ್ನಗಾನಹಳ್ಳಿ, ಹೊನ್ನೂರು ಗ್ರಾಮಗಳ ವ್ಯಾಪ್ತಿಯಲ್ಲಿ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ತಿಂಗಳು ಕಳೆಯುತ್ತಿದೆ. ಆದರೂ ಅವುಗಳನ್ನು ಬದಲಿಸದೇ ಬೆಸ್ಕಾಂನ ತಳಕು ಕಚೇರಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪ್ರೊ.ಬಣ) ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.

ಸಂಘದ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ತಳಕು ಹೋಬಳಿ ವ್ಯಾಪ್ತಿಯಲ್ಲಿ ಕಳೆದೊಂದು ವಾರದಿಂದ ಘಟಪರ್ತಿ, ವಲಸೆ ಗ್ರಾಮಗಳ ರೈತರ ಜಮೀನುಗಳಿಗೆ ವಿದ್ಯುತ್ ಸಂಪರ್ಕ ನೀಡುವ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟುಹೋಗಿವೆ. ಇದರಿಂದ ರೈತರು ಜಮೀನುಗಳಲ್ಲಿ ಹಾಕಿರುವ ಕಲ್ಲಂಗಡಿ, ದಾಳಿಂಬೆ, ಜೋಳ, ಈರುಳ್ಳಿ, ಶೇಂಗಾ, ರಾಗಿ, ಭತ್ತ ಮತ್ತಿತರ ಬೆಳೆಗಳು ನೀರು ಪೂರೈಕೆ ಇಲ್ಲದೇ ಒಣಗುತ್ತಿವೆ ಎಂದು ದೂರಿದರು.

ಬೆಸ್ಕಾಂ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿ, ಶೀಘ್ರ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಲಾಗಿದೆ. ಆದರೂ ಸಹ ಸ್ಪಂದಿಸುತ್ತಿಲ್ಲ. ರೈತರ ಜಮೀನುಗಳತ್ತ ತಿರುಗಿಯೂ ನೋಡದೇ ನಿರ್ಲಕ್ಷ್ಯೆ ವಹಿಸುತ್ತಿದ್ದಾರೆ. ರೈತರು ಪ್ರತಿನಿತ್ಯ ಕಚೇರಿಗೆ ಬಂದಾಗ ಸಬೂಬು ಹೇಳಿ ಕಳಿಸುವ ಅಧಿಕಾರಿಗಳು ರೈತರ ಜಮೀನಿಗೆ ಸಂಪರ್ಕ ನೀಡುವ ಟ್ರಾನ್ಸ್‌ಫಾರ್ಮರ್‌ಗಳನ್ನು ಶೀಘ್ರ ಬದಲಿಸಿ, ವಿದ್ಯುತ್ ಕಲ್ಪಿಸಲು ಮುಂದಾಗಿಲ್ಲ. ಈ ಕೂಡಲೇ ರೈತರ ಸಮಸ್ಯೆಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು.

ಘಟಪರ್ತಿ ಗ್ರಾಮದ ರೈತ ಅಜ್ಜಣ್ಣ ಮಾತನಾಡಿ, ಸುಟ್ಟ ಟ್ರಾನ್ಸ್‌ಫಾರ್ಮರ್‌ಗಳನ್ನು ತೆಗೆದುಕೊಂಡು ಹೋಗುವ ಬೆಸ್ಕಾಂ ಅಧಿಕಾರಿಗಳು, ಮತ್ತೆ ಎರಡ್ಮೂರು ವಾರಗಳು ಕಳೆದರೂ ಟಿಸಿ ತಂದು ಅಳವಡಿಸುವುದಿಲ್ಲ. ಇದರಿಂದ ನೀರು ಕಾಣದ ಬೆಳೆಗಳೂ ಒಣಗಿ ನೆಲಕಚ್ಚುತ್ತಿವೆ. ಈ ಬಗ್ಗೆ ಬೆಸ್ಕಾಂ ಹಿರಿಯ ಅಧಿಕಾರಿಗಳು ಕೂಡಲೇ ಗಮನಹರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರೈತರಾದ ಸುರೇಶ್, ನಾಗರಾಜು, ಬೋಮಣ್ಣ, ತಿಪ್ಪೇಶ್, ರಾಜಣ್ಣ ಮುಂತಾದವರು ಉಪಸ್ಥಿತರಿದ್ದರು.

- - - -20ಸಿಎಲ್ಕೆ4.ಜೆಪಿಜಿ:

ತಳಕು ಗ್ರಾಮದ ಬೆಸ್ಕಾಂ ಕಚೇರಿ ಮುಂಭಾಗದ ರೈತ ಸಂಘ- ಹಸಿರು ಸೇನೆ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?