ಒಳ ಮೀಸಲಾತಿ ಇಲ್ಲದೇ ನೇಮಕಾತಿ ಆದೇಶವ ಬೇಡ

KannadaprabhaNewsNetwork |  
Published : Mar 06, 2026, 01:15 AM IST
55 | Kannada Prabha

ಸಾರಾಂಶ

ಕೇವಲ ಬಲಗೈ ಸಮಾಜದ ಪ್ರತಿನಿಧಿಯಂತೆ ವರ್ತಿಸುತ್ತಿರುವ ಅಪ್ಪಟ ಜಾತಿವಾದಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹಾದೇವಪ್ಪ

ಕನ್ನಡಪ್ರಭ ವಾರ್ತೆ ಟಿ. ನರಸೀಪುರಒಳ ಮೀಸಲಾತಿ ಇಲ್ಲದೇ ನೇಮಕಾತಿ ಆದೇಶವನ್ನುತಕ್ಷಣ ಹಿಂಪಡೆಯುವಂತೆ ಒತ್ತಾಯಿಸಿ ತಾಲೂಕು ಮಾದಿಗ ಸಂಘಟನೆಗಳ ಒಕ್ಕೂಟದ ಸದಸ್ಯರು ಪಟ್ಟಣದಲ್ಲಿ ಪ್ರತಿಭಟಿಸಿದರು.ಪಟ್ಟಣದ ಬೈರಾಪುರ ಗ್ರಾಮದ ಮುಖ್ಯದ್ವಾರದಲ್ಲಿರುವ ಬಾಬು ಜಗಜೀವನರಾಂ ಪುತ್ಥಳಿಯ ಬಳಿ ಜಮಾವಣೆಗೊಂಡ ಮಾದಿಗ ಸಮುದಾಯದ ಮುಖಂಡರು, ಅಲ್ಲಿಂದ ಮೆರವಣಿಗೆ ಮೂಲಕ ಮೈಸೂರು ರಸ್ತೆ, ಕಾಲೇಜು ರಸ್ತೆ ಮೂಲಕ ತಾಲೂಕು ಆಡಳಿತ ಭವನಕ್ಕೆ ತೆರಳಿ ಅಲ್ಲಿ ಧರಣಿ ಆರಂಭಿಸಿದರು.ತಾಲೂಕು ಮಾದರ ಮಹಾಸಭಾ ಅಧ್ಯಕ್ಷ ಬಲ್ಲಯ್ಯ ಮಾತನಾಡಿ, ಪ. ಜಾತಿ, ಸಮುದಾಯಗಳ ಹಿತ ಕಾಪಾಡಲು ಅಸಮರ್ಥರಾದ ಮತ್ತು ಎಲ್ಲಾ ಸಮುದಾಯಗಳ ಹಿತ ಕಾಪಾಡುವುದಾಗಿ ಸಂವಿಧಾನದ ಮೇಲೆ ಪ್ರಮಾಣ ಮಾಡಿ, ಕೇವಲ ಬಲಗೈ ಸಮಾಜದ ಪ್ರತಿನಿಧಿಯಂತೆ ವರ್ತಿಸುತ್ತಿರುವ ಅಪ್ಪಟ ಜಾತಿವಾದಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹಾದೇವಪ್ಪ ರಾಜೀನಾಮೆ ಪಡೆಯಲು ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಗೂ ಡಿಪಿಎಆರ್ ಇಲಾಖೆಯ ಐ.ಎ.ಎಸ್/ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.ತಹಸೀಲ್ದಾರ್ ಸುರೇಶಾಚಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಮಾದಿಗ ಸಂಘಟನೆಯ ರಾಜ್ಯ ಹೋರಾಟಗಾರ ರಾಚಪ್ಪ ಹುಣಸೂರು, ರವಿಕುಮಾರ್, ಜಿಲ್ಲಾ ದಸಂಸ ಜಿಲ್ಲಾ ಸಂಚಾಲಕ ಶಂಕರ್, ತಾಲೂಕು ಅರುಂಧತಿ, ಸಹಕಾರ ಸಂಘದ ತಾಲೂಕು ಅಧ್ಯಕ್ಷ ಕೆಂಚಪ್ಪ, ಮಾಜಿ ಅಧ್ಯಕ್ಷ ಪುಟ್ಟಯ್ಯ, ಪುಟ್ಟಸ್ವಾಮಿ, ಗ್ರಾಪಂ ಮಾಜಿ ಸದಸ್ಯ ಸುನಿಲ್, ಚಿನ್ನಸ್ವಾಮಿ, ಮಂಜುನಾಥ್, ಗೋಪಿ, ಆನಂದ್, ಭಾಸ್ಕರ್, ಜವರಪ್ಪ, ರಾಜು, ಕೆ ಆರ್ ಎಸ್ ಪಕ್ಷದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗುರುಸಿದ್ದಯ್ಯ, ಕುಮಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ರಕ್ಷಣಾ ನೀತಿ ಸಮರ್ಪಕ ಅನುಷ್ಠಾನದಲ್ಲಿ ಉದಾಸೀನ
ಮಿಡ್ಲ್‌.. 8 ಚದರ ಅಡಿ ಸಿದ್ದರಾಮಯ್ಯ ಭಾವಚಿತ್ರ ಅನಾವರಣ