ಈ ಯೂನಿಟ್‌ನಲ್ಲಿ ಮಾಲಾ ಎಂಬುವವರು ಯಾವ ಹುದ್ದೆಯಲ್ಲಿದ್ದಾರೆಂಬುದು ನಮಗೆ ಸರಿಯಾಗಿ ತಿಳಿದಿಲ್ಲ, ಕೆಲವರು ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಾರೆಂದು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರದ ಹೊರವಲಯದಲ್ಲಿರುವ ರೇಮಂಡ್ಸ್ ಸಿಲ್ವರ್ ಪಾರ್ಕ್ ಅಪರೇಲ್ ಲಿಮಿಟೆಡ್ ಯೂನಿಟ್- 2 ಕಾರ್ಖಾನೆಯ ಸೂಪರ್‌ವೈಸರ್ ಮಾಲಾ ಎಂಬ ಸಹೊದ್ಯೋಗಿ ಮಹಿಳಾ ಕಾರ್ಮಿಕರಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸುತ್ತಾರೆ ಎಂದು ಆರೋಪಿಸಿ ಕಾರ್ಮಿಕರು ಒಗ್ಗಟ್ಟಿನಿಂದ ಕಾರ್ಖಾನೆಯ ಮುಂಭಾಗ ಬಿರುಬಿಸಿಲಿನಲ್ಲಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.ಕಾರ್ಮಿಕರಿಗೆ ಶನಿವಾರ ಮತ್ತು ಭಾನುವಾರ ರಜೆ ನೀಡಬೇಕು. ಕಾರ್ಖಾನೆಯವರು ಮನಸೋಯಿಚ್ಚೆ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಪ್ರತಿದಿನ 8ರಿಂದ 6ರವರೆಗೆ ಕೆಲಸ ಮಾಡುತ್ತೇವೆ ಇದು ನಮಗೆ ಸರಿಯಾಗಿದೆ, ಶನಿವಾರ ಮತ್ತು ಭಾನುವಾರ ರಜೆ ನೀಡಬೇಕು, ಒಂದುವಾರ ರಜೆ ನೀಡಿದರೆ ಮತ್ತೊಂದು ಶನಿವಾರ ಕೆಲಸ ಇಟ್ಟುಕೊಳ್ಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಯೂನಿಟ್‌ನಲ್ಲಿ ಮಾಲಾ ಎಂಬುವವರು ಯಾವ ಹುದ್ದೆಯಲ್ಲಿದ್ದಾರೆಂಬುದು ನಮಗೆ ಸರಿಯಾಗಿ ತಿಳಿದಿಲ್ಲ, ಕೆಲವರು ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಾರೆಂದು ತಿಳಿಸಿದ್ದಾರೆ. ಕಾರ್ಮಿಕರು ಪ್ರೊಡಕ್ಷನ್ ನೀಡುವುದಿಲ್ಲ ಎಂದು ನಮಗೆ ಅವಾಚ್ಯ ಶಬ್ದಗಳಿಂದ ಮನಸ್ಸಿಗೆ ನೋವುಂಟುಮಾಡುವ ರೀತಿಯಲ್ಲಿ ಬೈದು ನಿಂದಿಸುತ್ತಾರೆ. ಅವರ ಮೇಲೆ ಕ್ರಮಜರುಗಬೇಕು ನಮಗೆ ಮತ್ತು ಶನಿವಾರ ಮತ್ತು ಭಾನುವಾರ ರಜೆ ನೀಡಬೇಕು ಎಂದು ಪ್ರತಿಭಟನೆ ವೇಳೆ ಕಾರ್ಮಿಕರು ಆಗ್ರಹಿಸಿದರು. ಕಾರ್ಖಾನೆಯ ಡಿ.ಜಿಎಂ. ನಾರಾಯಣಪ್ಪ ಮಾತನಾಡಿ, ನಮಗೆ ಸಮಸ್ಯೆ ಏನೆಂದು ತಿಳಿಯದೇನೆ ಕುಳಿತಿದ್ದರು, ಸೂಪರ್‌ವೈಸರ್ ಮಾಲಾ ಅಸಭ್ಯವಾಗಿ ಮಾತನಾಡುತ್ತಾರೆ ಎಂಬುದನ್ನು ತಿಳಿದು ಅವರನ್ನು ಕರೆಸಿ ಎಲ್ಲರಿಗೂ ಕ್ಷಮಾಪಣೆ ಕೇಳಿಸಲಾಗಿದೆ. ಸಮಯ ವ್ಯತ್ಯಾಸಎಂದು ತಿಳಿಸಿದ್ದಾರೆ. ಕರ್ನಾಟಕ ಲೇಬರ್-ಲಾ ಪ್ರಕಾರ ಬೆಳಗ್ಗೆ 8:30ಗಂಟೆಯಿಂದ ಸಂಜೆ 5ರವರೆಗೂ ಕೆಲಸ ಮಾಡಬೇಕು. ಸೋಮವಾರದಿಂದ ಶನಿವಾರದ ತನಕ ಕೆಲಸ ಮಾಡುತ್ತಾರೆ. ಕಂಪನಿಗೆ ಅವಶ್ಯಕತೆ ಇದ್ದರೆ ಮಾತ್ರ ಹೆಚ್ಕೆಚುವರಿ ಕೆಲಸ ಮಾಡಿಸಿ ವೇತನ ಕೊಡುತ್ತೇವೆ.
ಇನ್ನೇನಾದರೂ ಸಮಸ್ಯೆ ಇದ್ದರೆ ಕಮಿಟಿಯ ಗಮನಕ್ಕೆ ಬಂದರೆ ಕಾನೂನು ರೀತಿಯ ಕ್ರಮಜರುಗಿಸುತ್ತೇವೆ. ಕಾರ್ಖಾನೆಯಿಂದ ಮೊದಲ ಬಾರಿಗೆ ವೇತನವು ತಡವಾಗಿದೆ, ಈಗಾಗಲೇ ಅವರ ಖಾತೆಗಳಿಗೆ ವೇತನ ಜಮೆ ಮಾಡಲಾಗಿದೆ. ಕಾರ್ಮಿಕರು ಕಾರ್ಖಾನೆಯ ಜೊತೆಯಲ್ಲಿ ಕೈಜೋಡಿಸಿದಲ್ಲಿ ಮಾತ್ರ ಕಾರ್ಖಾನೆಯು-ಕಾರ್ಮಿಕರ ಜೊತೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ. ಈ ಒಂದು ರೇಮೇಂಡ್ಸ್ ಕಾರ್ಖಾನೆ ಈ ಕ್ಷೇತ್ರಕ್ಕೆ ಅವಶ್ಯಕತೆ ಇದೆ, ಸೂಪರ್‌ವೈಸರ್ ಮಾಲಾ ಮೇಲೆ ಈಗಾಗಲೇ ಕ್ರಮವನ್ನು ತೆಗೆದುಕೊಂಡಿದ್ದೇವೆ. ಸತ್ಯ-ಅಸತ್ಯತೆಗಳನ್ನು ತಿಳಿದು. ಮುಂದಿನ ಕ್ರಮ ಕೈಕೊಳ್ಳಲಾಗುವುದೆಂದು ತಿಳಿಸಿದರು.ಸ್ಥಳಕ್ಕೆ ತಹಸೀಲ್ದಾರ್ ಅರವಿಂದ್ ಕೆ.ಎಂ., ವೃತ್ತ ನಿರೀಕ್ಷಕ ಕೆ.ಪಿ ಸತ್ಯನಾರಾಯಣ್, ನಗರ ಠಾಣೆಯ ಪಿಎಸ್ಐ ಗೋಪಾಲ್, ಗ್ರಾಮಾಂತರ ಠಾಣೆಯ ಪಿಎಸ್ಐ ರಮೇಶ್ ಗುಗ್ಗರಿ, ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಶಬಾನಅಜೀಂ, ತಾಲೂಕು ಕಾರ್ಮಿಕ ಇಲಾಖೆಯ ಅಧಿಕಾರಿ ಸತೀಶ್, ಸಿಡಿಪಿಓ ರವಿ, ಸಿಐಟಿಯು ಸಂಘಟನೆಯ ಸಿದ್ಧಗಂಗಪ್ಪ, ಹಲವು ಸಂಘಟನೆಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.