ಶ್ರೀರಂಗಪಟ್ಟಣ:
ಪಟ್ಟಣದ ಕುವೆಂಪು ವೃತ್ತದಲ್ಲಿ ಸೇರಿದ ಒಕ್ಕೂಟದ ಸದಸ್ಯರು, ಖರ್ಗೆ ಅವರು ಭಾಷಣ ಮಾಡಿದ ವೇದಿಕೆ ಬಳಿ ಹೋಮ-ಹವನ ನಡೆಸಿ ಶುದ್ಧೀಕರಿಸಿ ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಸಂವಿಧಾನ ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ ಮತ್ತು ಗೌರವದ ಹಕ್ಕನ್ನು ನೀಡಿದೆ. ಆದರೆ, ಜಾತಿ ಆಧಾರದ ಮೇಲೆ ವ್ಯಕ್ತಿಯನ್ನು ಅವಮಾನಿಸಿ ಬಳಸಿದ ಸ್ಥಳವನ್ನು ಶುದ್ಧೀಕರಿಸುವಂತಹ ಆಚರಣೆಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿವೆ. ಇದಕ್ಕೆ ಸಂಬಂಧಪಟ್ಟವರ ವಿರುದ್ಧ ಕಾನೂನು ಬದ್ಧಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ತಾಲೂಕು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರವಿಚಂದ್ರ, ಶೆಟ್ಟಹಳ್ಳಿ ಕುಬೇರಪ್ಪ, ಅಪ್ಪಾಜಿ, ಅರಕೆರೆ ಶಿವಯ್ಯ, ಮುಂಡುಗದೊರೆ ಮೋಹನ ಕುಮಾರ್, ಹೊನ್ನಯ್ಯ, ಶ್ರೀಕಂಠು ಸೇರಿದಂತೆ ಇತರ ಮುಖಂಡರು ಇದ್ದರು.ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಸ್ಪರ್ಧೆ, ಅರ್ಜಿ ಆಹ್ವಾನ
ಮೂರು ವಿಭಾಗದ ಸ್ಪರ್ಧೆಯಲ್ಲಿ ಪ್ರತಿ ವಿಭಾಗಕ್ಕೆ ಗರಿಷ್ಠ 15 ಅರ್ಹ ವಿದ್ಯಾರ್ಥಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗುವುದು. ಪ್ರಬಂಧಕ್ಕೆ ತಲಾ 2 ಸಾವಿರ, ಓದು-ವ್ಯಾಖ್ಯಾನಕ್ಕೆ ತಲಾ 1 ಸಾವಿರ, ವೈಚಾರಿಕ ಭಾಷಣಕ್ಕೆ ತಲಾ 1 ಸಾವಿರ ರು. ಬಹುಮಾನ ನೀಡಲಾಗುವುದು. ಪ್ರತಿ ಜಿಲ್ಲೆಯಲ್ಲಿ ಸಂಚಾಲಕರನ್ನು ಆಯ್ಕೆ ಮಾಡಲಾಗಿದೆ. ಈ ಎಲ್ಲಾ ಸ್ಪರ್ಧೆಯನ್ನು ಆಯಾಯ ಜಿಲ್ಲೆಯ ಸಂಚಾಲಕರು ಸ್ಥಳೀಯ ಕಾಲೇಜಿನ ಸಹಕಾರದಿಂದ ನಿರ್ವಹಿಸುತ್ತಾರೆ. ಈ ಸುತ್ತಿನಲ್ಲಿ ಮಂಡ್ಯ ಜಿಲ್ಲೆ ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ರಚನೆ, ಓದು-ವ್ಯಾಖ್ಯಾನ ಮತ್ತು ವೈಚಾರಿಕ ಭಾಷಣ ಈ ಮೂರು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.ಈ ಜಿಲ್ಲೆಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸೆ.5 ಕೊನೆ ದಿನ. ಪ್ರಬಂಧವನ್ನು ಕಳುಹಿಸಲು ಸೆ.12 ಕೊನೆ ದಿನ. ಮೂರು ವಿಭಾಗಗಳ ಸ್ಪರ್ಧೆಯ ನಿಯಮಗಳು ಮತ್ತು ಅರ್ಜಿ ನಮೂನೆಯನ್ನು ವೆಬ್ ಸೆಟ್ ನಲ್ಲಿ ಅಪ್‌ಲೋಡ್ ಮಾಡಿ, ಪ್ರಿಂಟ್ ತೆಗೆದುಕೊಂಡು, ಭರ್ತಿ ಮಾಡಿ ಅಧ್ಯಯನ ಕೇಂದ್ರಕ್ಕೆ ಮೇಲ್ ಮಾಡಬಹುದು. ಖುದ್ದಾಗಿ ಅಥವಾ ಕೊರಿಯರ್ ಮೂಲಕವೂ ತಲುಪಿಸಬಹುದು ಎಂದು ಮಂಡ್ಯ ಜಿಲ್ಲಾ ಸಂಚಾಲಕ ಕೆ.ಎಂ.ಕೃಷ್ಣೇಗೌಡ ಕೀಲಾರ ತಿಳಿಸಿದ್ದಾರೆ.