ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ನೀಡಿದೆ ವಂಚಿಸಿ ಇದೀಗ ನಾವು ವಾಸಿಸುತ್ತಿರುವ ಮನೆಗಳನ್ನು ದ್ವಂಸಗೊಳಿಸಿ ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮೊಗರಹಳ್ಳಿ ಮಂಟಿ ನಿವಾಸಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣ ತಾಲೂಕು ಕಚೇರಿಗೆ ಮೊಗರಹಳ್ಳಿ ಮಂಟಿ ಗ್ರಾಮದ ಪರಿಶಿಷ್ಟ ಜನಾಂಗದ ಜನರು ಮುತ್ತಿಗೆ ಹಾಕಿ ತಾಲೂಕು ಆಡಳಿತ, ಹೊಸಹಳ್ಳಿ ಗ್ರಾಪಂ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರ ಹಾಕಿದರು.
ನಾವು ವಾಸಿಸುತ್ತಿರುವ ಅಂಬೇಡ್ಕರ್ ಬಡಾವಣೆಗೆ ನಿವಾಸಿಗಳಿಗೆ ಮೂಲ ಸೌಕರ್ಯ ನೀಡದೆ ವಂಚಿಸುತ್ತಿದ್ದಾರೆ. ಅಲ್ಲದೇ, ತಹಸೀಲ್ದಾರ್ ಚೇತನಾಯಾದವ್, ಕಂದಾಯ ನಿರೀಕ್ಷಕ ಪ್ರಸನ್ನ ಹಾಗೂ ಹೊಸಹಳ್ಳಿ ಗ್ರಾಪಂ ಪಿಡಿಒ ಶಶಿಕಲಾ ಅವರು ಅಕ್ರಮವಗಿ ನಮ್ಮ ಮನೆಗಳನ್ನ ಪ್ರವೇಶಿಸಿ ದಬ್ಬಾಳಿಕೆಯಿಂದ ನಮಗೆ ಯಾವುದೇ ನೋಟಿಸ್ ನೀಡದೆ ಪೊಲೀಸ್ ಮುಖಾಂತರ ಬೆದರಿಕೆ ಹಾಕಿ ನಮ್ಮ ವಾಸದ ಮನೆಗಳನ್ನು ಜೆಸಿಬಿ ಮುಖಾಂತರ ದ್ವಂಸಗೊಳಿಸಿದ್ದಾರೆ ಎಂದು ಕಿಡಿಕಾರಿದರು.ಸ್ಥಳ ಪರಿಶೀಲನೆ ನಡೆಸಿ ನ್ಯಾಯ ದೊರಕಿಸಿಕೊಡುವಂತೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಮುದಾಯದ ಮುಖಂಡರಾದ ಶ್ರೀನಿವಾಸ್, ಜ್ಞಾನೇಂದ್ರ, ಕುಮಾರ್, ಶಶಿಕಲಾ, ಸುಧಾಮಣಿ, ಗೀತಾ ಸೇರಿದಂತೆ ಇತರರು ಇದ್ದರು. ಈ ಸಂಬಂಧ ತಹಸೀಲ್ದಾರ್ ಚೇತನಾ ಯಾದವ್ ಅವರನ್ನ ಸಂಪರ್ಕಿಸಲು ಮುಂದಾದರೆ ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ.ಶ್ರೀರಂಗನಾಥಸ್ವಾಮಿಗೆ 66 ಲಕ್ಷ ರು. ಮೌಲ್ಯದ ಬಂಗಾರದ ಕಳಶದ ಚಂಬು ನೀಡಿದ ದಾನಿಶ್ರೀರಂಗಪಟ್ಟಣ:ಪಟ್ಟಣದ ಪ್ರಸಿದ್ಧ ಶ್ರೀರಂಗನಾಥಸ್ವಾಮಿಗೆ ದಾನಿ, ಉದ್ಯಮಿಯೊಬ್ಬರು ಸುಮಾರು 66 ಲಕ್ಷ ರು. ಬೆಲೆ ಬಾಳುವ ಬಂಗಾರದ ಕಳಶದ ಚಂಬನ್ನು ಸಮರ್ಪಣೆ ಮಾಡಿದ್ದಾರೆ.
ಶುದ್ಧ ಬಂಗಾರದಿಂದ ತಯಾರಿಸಿರುವ 400 ಗ್ರಾಂ ತೂಕದ ಅಷ್ಟ ಲಕ್ಷ್ಮೀ ಕಳಶದ ಚಂಬಿನಂತಿರುವ ಈ ಕಳಸವನ್ನು ಟಿವಿಎಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ವೇಣು ಶ್ರೀನಿವಾಸನ್ ಅವರು ದೇವಾಲಯಕ್ಕೆ ಕೊಡುಗೆಯಾಗಿ ಸಮರ್ಪಿಸಿದ್ದಾರೆ.ಹೆಸರಾಂತ ಮೋಟಾರ್ ಟಿವಿಎಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ವೇಣು ಶ್ರೀನಿವಾಸನ್ ಅವರು ಸುಮಾರು 66 ಲಕ್ಷ ಬೆಲೆ ಬಾಳುವ, ಶುದ್ಧ ಬಂಗಾರದಿಂದ ತಯಾರಿಸಲಾದ ಕಳಶವನ್ನು ದೇವಾಲಯದ ಕಾರ್ಯನಿರ್ವಹಣ ಅಧಿಕಾರಿ ಉಮಾ ಅವರಿಗೆ ಹಸ್ತಾಂತರಿದ್ದಾರೆ.