ನರಗುಂದ: ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಪ್ರದೇಶದಲ್ಲಿ ನಡೆದ ಪ್ರವಾಸಿಗರ ಮೇಲಿನ ಉಗ್ರರರ ದಾಳಿ ಖಂಡನೀಯ ಎಂದು ಕನ್ನಡಪರ ಸಂಘಟನೆ ಮುಖಂಡ ರಾಘವೇಂದ್ರ ಗುಜಮಾಗಡಿ ಹೇಳಿದರು.
ಕನ್ನಡಪರ ಸಂಘಟನೆ ಮುಖಂಡ ಚನ್ನು ನಂದಿ ಮಾತನಾಡಿ, ಕಳೆದ 2 ದಶಕಗಳಿಂದ ಜಮ್ಮ-ಕಾಶ್ಮೀರ ಉಗ್ರರಿಂದ ಮುಕ್ತವಾಗಿತ್ತು. ಆದರೆ ಮಂಗಳವಾರ ಮತ್ತೇ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ಮಾಡಿ 30 ಪ್ರವಾಸಿಗರನ್ನು ಕೊಂದಿದ್ದು ನೋವಿನ ಸಂಗತಿ, ಕೇಂದ್ರ ಸರ್ಕಾರ ಯಾವುದೇ ಮುಲಾಜಿಲ್ಲದೇ ಭಯೋತ್ಪಾದಕರನ್ನು ಕೊಂದು ಹಾಕಿ, ಇಲ್ಲವೇ ಜೀವಂತ ಸೆರೆ ಸಿಕ್ಕರೆ ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಮನವಿ ಮಾಡಿದರು.
ಶಿರಸ್ತೇದಾರ ಸುನಂದಾ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಸರ್ಕಾರಕ್ಕೆ ಮನವಿ ರವಾನೆ ಮಾಡಲಾಗುವುದು ಎಂದರು.ಈ ಸಂದರ್ಭದಲ್ಲಿ ಬಸವರಾಜ ತಾವರೆ, ವಿಕಾಶ ಮುಧೋಳೆ, ಬಸವರಾ ಸತ್ತಿಗೇರ, ಶಿವಯೋಗಿ ಬೆಂಡಿಗೇರಿ, ನಬಿಸಾಬ್ ಕಿಲ್ಲೇದಾರ, ಶಂಕರಪ್ಪ ಜಾಲಗಾರ, ನಾಗರಾಜ, ಶರಣಪ್ಪ ಗುದಗಿ ಸೇರಿದಂತೆ ಮುಂತಾದವರು ಇದ್ದರು.