ಲಚ್ಚಪ್ಪ ಜಮಾದಾರ ನಿಂದನೆ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Sep 11, 2026, 01:15 AM IST
ಲಚ್ಚಪ್ಪ | Kannada Prabha

ಸಾರಾಂಶ

ಕೋಲಿ ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪದಡಿ ಸಾಮಾಜಿಕ ಕಾರ್ಯಕರ್ತ ಸಿದ್ದು ಹಿರೇಮಠ ಹಾಗೂ ಶಿವಸೇನಾ ಪಕ್ಷದ ರಾಜ್ಯಾಧ್ಯಕ್ಷ ಆಂದೋಲಾ ಸಿದ್ಧಲಿಂಗ ಸ್ವಾಮೀಜಿ ವಿರುದ್ಧ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಅಫಜಲಪುರ: ಕೋಲಿ ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಆರೋಪದಡಿ ಸಾಮಾಜಿಕ ಕಾರ್ಯಕರ್ತ ಸಿದ್ದು ಹಿರೇಮಠ ಹಾಗೂ ಶಿವಸೇನಾ ಪಕ್ಷದ ರಾಜ್ಯಾಧ್ಯಕ್ಷ ಆಂದೋಲಾ ಸಿದ್ಧಲಿಂಗ ಸ್ವಾಮೀಜಿ ವಿರುದ್ಧ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಲಚ್ಚಪ್ಪ ಅಭಿಮಾನಿ ಬಳಗ, ದಲಿತಪರ ಮತ್ತು ಕೋಲಿ ಸಮಾಜದ ಮುಖಂಡರು ರಸ್ತೆಗಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಸಾಗಿದ ವೇಳೆ ಟೈರ್‌ಗೆ ಬೆಂಕಿ ಹಚ್ಚಿ ಘೋಷಣೆ ಕೂಗಲಾಯಿತು. ಡಿಎಸ್‌ಎಸ್ ಮುಖಂಡ ಭೀಮಾಶಾ ಖನ್ನಾ, ರಾಮಲಿಂಗ ನಾಟೀಕಾರ ಬಸವರಾಜ ಜಮಾದಾರ ಮಾತನಾಡಿ, ಸಮಾಜದಲ್ಲಿ ಗಣ್ಯರ ತೇಜೋವಧೆ ಮಾಡಿ ಶಾಂತಿ ಕದಡುವ ದುರುದ್ದೇಶದಿಂದ ಇಂಥ ಕೃತ್ಯ ಎಸಗಲಾಗುತ್ತಿದೆ. ಸರ್ಕಾರ ತಕ್ಷಣ ಇಬ್ಬರನ್ನೂ ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು. ​ಎಪಿಎಂಸಿ ಸದಸ್ಯ ಶರಣು ಕುಂಬಾರ ಮತ್ತು ಮಹಾಂತೇಶ ಬಳೂಂಡಗಿ, ಭೀಮರಾಯ ಗೌರ, ಮಹಾಂತೇಶ ಬಡಿಗೇರ, ಮಹಾನಿಂಗ ಅಂಗಡಿ, ಸತೀಶ, ದುಂಡಪ್ಪ, ಬಸವರಾಜ ಬಿಲ್ಕರ್, ಸಿದ್ದಪ್ಪ ಸಿನ್ನೂರ, ಪಾಂಡುರಂಗ, ಉಮೇಶ್, ರಾಮು, ದೇವಿಂದ್ರ, ಗುರುಶಾಂತ್, ಹಣಮಂತ ಆನೂರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭವಿಷ್ಯದ ಸವಾಲುಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ: ಸಂಸದ ರಾಧಾಕೃಷ್ಣ ದೊಡ್ಡಮನಿ
ಸರ್ಜನ್‌ ಡಾ. ಕಿರಣ ದೇಶಮುಖ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ