ಕನ್ನಡಪ್ರಭ ವಾರ್ತೆ, ರಾಮನಾಥಪುರ
ವಸತಿ ಹೀನರಿಗೆ ಆಶ್ರಯ ನಿವೇಶನ ಕೊಟ್ಟು ಮೂರು ವರ್ಷಗಳಾದರೂ ಖಾತೆ ಮಾಡಿಕೊಡದಿರುವುದನ್ನು ಖಂಡಿಸಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಡಾ ಸರೋಜಿನಿ ಮಹಿಷಿ ಚಳವಳಿ ಹೋರಾಟಗಾರರಾದ ಡಾ.ಎಸ್ ರಾಘವೇಂದ್ರ ಗೌಡ ನೇತೃತ್ವದಲ್ಲಿ ಇಲ್ಲಿನ ಗ್ರಾಮ ಪಂಚಾಯ್ತಿ ಮುಂದೆ ಪ್ರತಿಭಟನೆ ನಡೆಸಲಾಯಿತು.ರಾಮನಾಥಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕೋಟವಾಳು ಗ್ರಾಮದ ಸರ್ವೆ ನಂಬರ್ 12 ರಲ್ಲಿ 6 ಎಕರೆ ಜಮೀನನ್ನು ವಸತಿ ರಹಿತರು ಅಂದರೆ ಸ್ವಂತ ಮನೆ ಇಲ್ಲದ ಹಾಗೂ ಮನೆ ಕಟ್ಟಿಕೊಳ್ಳಲು ಜಾಗವಿಲ್ಲದ ಬಡವರಿಗೆ ಮನೆ ಕಟ್ಟಿಕೊಳ್ಳಲು ರಾಮನಾಥಪುರ ಗ್ರಾಮ ಪಂಚಾಯತಿ ವತಿಯಿಂದ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನ ಯೋಜನೆಯಲ್ಲಿ ರಾಮನಾಥಪುರ ಗ್ರಾಮದ ಬಡ ಜನರಿಗೆ ಸುಮಾರು 59 ಜನರಿಗೆ ದಿನಾಂಕ 10/10/2022 ರಂದು ಖಾಲಿ ನಿವೇಶನ ಗುರುತಿಸಿಕೊಟ್ಟು ಹಕ್ಕು ಪತ್ರಗಳನ್ನು ಅಂದಿನ ಶಾಸಕರು ಮತ್ತು ಸಚಿವರು ಹಾಗೂ ತಾಲೂಕಿನ ತಹಸೀಲ್ದಾರರು ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ರಾಮನಾಥಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಂದಿನ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳ ಸಮ್ಮುಖದಲ್ಲಿ ವಿತರಣೆ ಮಾಡಿಕೊಟ್ಟಿರುತ್ತಾರೆ.
ಆದರೆ ಖಾಲಿ ನಿವೇಶನ ಕೊಟ್ಟು ಮೂರು ವರ್ಷಗಳಾದರೂ ಹಕ್ಕು ಪತ್ರ ಪಡೆದಂತ ಜನರಿಗೆ ಖಾತೆ ಮಾಡಿಕೊಡದೆ ಖಾಲಿ ನಿವೇಶನ ಪಡೆದಂತ ಬಡ ಜನರು ಮನೆ ಕಟ್ಟಿಕೊಳ್ಳಲು ಯಾವುದೇ ಸಂಘ ಸಂಸ್ಥೆಗಳಲ್ಲಿ ಸಾಲ ಪಡೆಯಲು ಆಗದೆ ಹಾಗೂ ಜನರು ಮನೆ ಕಟ್ಟಿಕೊಳ್ಳಲು ಅವರಿಗೆ ಸರ್ಕಾರದಿಂದ ಸವಲತ್ತುಗಳನ್ನು ಪಡೆಯಲು ಆಗುತ್ತಿಲ್ಲ.ಕೊಟ್ಟಿರುವ ಖಾಲಿ ನಿವೇಶನದ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ ಚರಂಡಿ ಕುಡಿಯುವ ನೀರು ವಿದ್ಯುತ್ ವಿಚಾರವಾಗಿ ಮನವಿ ಮಾಡಿರುತ್ತೇವೆ. ಈ ವಿಚಾರವಾಗಿ ಈಗಾಗಲೇ ಸಾಕಷ್ಟು ಬಾರಿ ಅಧಿಕಾರಗಳ ಬಳಿ ಜನಪ್ರತಿನಿಧಿಗಳ ಬಳಿ ಮನವಿ ಮಾಡಿದರೂ ಸಮಸ್ಯೆ ಬಗೆಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಎಸ್ ರಾಘವೇಂದ್ರ ಗೌಡ್ರು, ರಾಜ್ಯ ಮಹಿಳಾ ಅಧ್ಯಕ್ಷರಾದ ಮಧುಶ್ರೀ, . ಸನ್ನಿಧಿ, ಚೈತನ್ಯ, ರಾಜಮ್ಮ, ಧನ ಪಾಲ್ ಗೌಡ್ರು, ಹಾಸನ ರೈತ ಘಟಕ ಜಿಲ್ಲಾಧ್ಯಕ್ಷರಾದ ಸುದೀಪ್ ಗೌಡ, ಮೆಕಾನಿಕ್ ರಮೇಶ್, ಗಿರೀಶ್, ಮಂಜು, ಮಣಿ, ಮಲ್ಲೇಶ್, ಪ್ರಮೋದ್, ಸಿದ್ದಾಪುರ ಸ್ವಾಮಿ ಗೌಡ್ರು, ಸುದರ್ಶನ್ , ದರ್ಶನ್, ಶಶಾಂಕ್, ಆನಂದ ಆಚಾರ್, ಬೇಕರಿ ರಮೇಶ್, ಬಾನುಗುಂದಿ ಆನಂದ್ ಗೌಡ, ಸಿದ್ದಾಪುರ ಸತೀಶ್, ದಿನೇಶ್ ಗೌಡ, ಮಂಜು ಶೆಟ್ಟಿ, ಮಂಜೇಗೌಡ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕಾಳೇ ಗೌಡ್ರು, ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಎಸ್ .ದಿವಾಕರ್, ರಾಮನಾಥಪುರ ವಿಜಯ್ ರಾಜು, ಯಾಸಿನ್, ಅಬ್ಬು, ಮಂಜುನಾಥ್, ಶಿವಕುಮಾರ್, ವೇದಾವತಿ, ಲತಾ, ಶೈಲಾ, ಸುಜಾತ, ಪಾರ್ವತಿ, ಮಂಜುಳಾ, ಲಕ್ಷ್ಮಿ, ವಸಂತ್ ಕುಮಾರಿ, ಅಂಬಿಕಾ, ವೀಣಾ, ದೀಪು, ಕಲಾವತಿ, ಶೀಲಾ ಇನ್ನೂ ಹೆಚ್ಚಿನ ನೊಂದ ಕುಟುಂಬದವರು ಭಾಗವಹಿಸಿದ್ದರು.