9ರಂದು ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Jan 07, 2025, 12:16 AM IST
ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ  ಮುಖಂಡರು  | Kannada Prabha

ಸಾರಾಂಶ

ಕಳೆದ 40 ವರ್ಷದ ಹಿಂದೆ ನಿವೇಶನ ರಹಿತರಿಗೆ ಮಂಜೂರಾದ ಭೂಮಿಯಲ್ಲಿ ಕಾನೂನು ಬದ್ದ 48 ನಿವೇಶನ ಹೊರತುಪಡಿಸಿ ಉಳಿದ ನಿವೇಶನ ಹಂಚಿಕೆ ಮಾಡಲು ವಿಳಂಬ ಅನುಸರಿಸುತ್ತಿರುವ ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜ.9 ರಂದು ಕಲ್ಲೂರು ಗ್ರಾಪಂ ಮುಂದೆ ನಡೆಸಲಾಗುವುದು ಎಂದು ದಲಿತ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕನ್ನಡ ಪ್ರಭ ವಾರ್ತೆ ಗುಬ್ಬಿ

ಕಳೆದ 40 ವರ್ಷದ ಹಿಂದೆ ನಿವೇಶನ ರಹಿತರಿಗೆ ಮಂಜೂರಾದ ಭೂಮಿಯಲ್ಲಿ ಕಾನೂನು ಬದ್ದ 48 ನಿವೇಶನ ಹೊರತುಪಡಿಸಿ ಉಳಿದ ನಿವೇಶನ ಹಂಚಿಕೆ ಮಾಡಲು ವಿಳಂಬ ಅನುಸರಿಸುತ್ತಿರುವ ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜ.9 ರಂದು ಕಲ್ಲೂರು ಗ್ರಾಪಂ ಮುಂದೆ ನಡೆಸಲಾಗುವುದು ಎಂದು ದಲಿತ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ದಲಿತರಿಗೆ ನಿವೇಶನ ನೀಡಲು ಅಲ್ಲಿನ ಕೆಲ ಸವರ್ಣೀಯ ಗ್ರಾಮ ಪಂಚಾಯಿತಿ ಸದಸ್ಯರು ಅಡ್ಡಿಪಡಿಸಿದ್ದಾರೆ. ನಿಯಮಾನುಸಾರ ದಲಿತರಿಗೆ ನೀಡಬೇಕಾದ ನಿವೇಶನ ನೀಡಲು ಅಲ್ಲಿನ ಪಿಡಿಒ ಮಂಜುನಾಥ್ ಸಹ ಸ್ಪಂದಿಸಿಲ್ಲ. ಈ ವಿಳಂಬ ನೀತಿ ಹಾಗೂ ದಲಿತ ವಿರೋಧನೀತಿ ಖಂಡಿಸಿ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮುಖಂಡ ರುದ್ರಪ್ರಕಾಶ್ ಮಾತನಾಡಿ ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ನಿವೇಶನವನ್ನು ಬೇರೆ ಸಮುದಾಯಕ್ಕೆ ಹಕ್ಕುಪತ್ರ ನೀಡಿದ ಹಿಂದಿನ ಅಧ್ಯಕ್ಷರು ಹಾಗೂ ಪಿಡಿಒ ವಿರುದ್ಧ ಕಾನೂನು ನ್ಯಾಯಕ್ಕೆ ಮೊರೆ ಹೋಗಿದ್ದೇವೆ. ಆದರೆ ಬಡವರಿಗೆ ಅರ್ಹರಿಗೆ ನಿವೇಶನ ನೀಡುವಲ್ಲಿ ಅಧಿಕಾರಿಗಳು ಮೀನಾಮೇಷ ಎಣಿಸಿರುವುದು ಬಲಾಢ್ಯರ ಕುಮ್ಮಕ್ಕು ಎನಿಸುತ್ತಿದೆ. ಕೆಲ ಸದಸ್ಯರ ಒತ್ತಡಕ್ಕೆ ಮಣಿಯದೆ ಕೆಲಸ ಮಾಡಬೇಕಾದ ಪಿಡಿಒ ಕರ್ತವ್ಯಲೋಪ ಕಾಣುತ್ತಿದೆ. ಮೀಸಲಿಟ್ಟ ನಿವೇಶನ ಕೂಡಲೇ ಹಂಚಿಕೆ ಮಾಡಬೇಕು. ಈ ಜೊತೆಗೆ ಎಸ್ಸಿ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಮೀಸಲಿಟ್ಟ ನಿವೇಶನ ಅದಕ್ಕೆ ಎರಡು ಕೋಟಿ ನೀಡುವ ಭರವಸೆ ಶಾಸಕ ಕೃಷ್ಣಪ್ಪನವರು ನೀಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶಗೊಂಡ ದಲಿತರು ಇದೇ ತಿಂಗಳ 9ರಂದು ಪ್ರತಿಭಟನೆ ನಡೆಸಲಿದ್ದಾರೆ. ಎಲ್ಲರೂ ಸಾಥ್ ನೀಡುವಂತೆ ಮನವಿ ಮಾಡಿದರು. ಈ ವೇಳೆ ದಸಂಸ ಮಾಜಿ ಸಂಚಾಲಕ ಪಾಂಡುರಂಗಯ್ಯ, ದಸಂಸ ಸಂಚಾಲಕ ಚೇಳೂರು ಶಿವನಂಜಪ್ಪ, ಡಿ.ಮಂಜುನಾಥ್. ಶಾಂತರಾಜು, ಶಿವಲಿಂಗಯ್ಯ, ಗೋವಿಂದರಾಜು, ಬಾರೆಮನೆ ವೆಂಕಟೇಶ್, ನಾರಾಯಣ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ