ಅಕ್ರಮ ಗೋ ಸಾಗಾಟ, ಗೋ ಹತ್ಯೆ ತಡೆಗೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : May 22, 2026, 02:15 AM IST
ಸವಣೂರು ಪಟ್ಟಣದ ಕಂದಾಯ ಇಲಾಖೆ ಕಚೇರಿ ಎದುರಲ್ಲಿ ವಿಶ್ವ ಹಿಂದೂ ಪರಿಷದ್- ಭಜರಂಗದಳ ಗೋ ರಕ್ಷಾ ವಿಭಾಗದ ಕರ್ನಾಟಕದ ಪ್ರಾಂತ ಪದಾಧಿಕಾರಿಗಳು ಗುರುವಾರ ಸಾಂಕೇತಿಕ ಪ್ರತಿಭಟಿಸಿ ಗ್ರೇಡ್‌-2 ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಸವಣೂರು ಪಟ್ಟಣದ ಕಂದಾಯ ಇಲಾಖೆ ಕಚೇರಿ ಎದುರಲ್ಲಿ ವಿಶ್ವ ಹಿಂದೂ ಪರಿಷದ್- ಭಜರಂಗದಳ ಗೋ ರಕ್ಷಾ ವಿಭಾಗದ ಕರ್ನಾಟಕದ ಪ್ರಾಂತ ಪದಾಧಿಕಾರಿಗಳು ಗುರುವಾರ ಸಾಂಕೇತಿಕ ಪ್ರತಿಭಟಿಸಿ ಗ್ರೇಡ್‌-2 ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಸವಣೂರು: ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆ ಆಗದಂತೆ ಕಟ್ಟು ನಿಟ್ಟಿನ ಆದೇಶ ನೀಡುವ ಮೂಲಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ವಿಶ್ವ ಹಿಂದೂ ಪರಿಷದ್- ಭಜರಂಗದಳ ಗೋ ರಕ್ಷಾ ವಿಭಾಗದ ಕರ್ನಾಟಕದ ಪ್ರಾಂತ ಪದಾಧಿಕಾರಿಗಳು ಗುರುವಾರ ಸವಣೂರಿನ ಕಂದಾಯ ಇಲಾಖೆ ಕಚೇರಿ ಎದುರಲ್ಲಿ ಸಾಂಕೇತಿಕ ಪ್ರತಿಭಟನೆಯೊಂದಿಗೆ ತಹಸೀಲ್ದಾರ್ ಹಾಗೂ ಪಿಐ ಅವರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆ ನಿರಂತರವಾಗಿ ಎಗ್ಗಿಲದೇ ನಡೆಯುತ್ತಲೇ ಇದೆ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ 2020 (2020ರ ವಿಧಾನಸಭೆಯ ವಿಧೇಯಕ ಸಂಖ್ಯೆ-69) ಸರ್ಕಾರದ ಆದೇಶವಿದ್ದರೂ ಸಹ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಗೋ ಹತ್ಯೆ ನಿರಂತರವಾಗಿ ನಡೆಯುತ್ತಲೇ ಇದೆ. ಹಿಂದು ಸಂಪ್ರದಾಯದ ಪ್ರಕಾರ ಗೋವನ್ನು 33 ಕೋಟಿ ದೇವಾನು ದೇವತೆಗಳ ಸಮಾನವೆಂದು ಪೂಜಿಸಿ, ಆರಾಧಿಸುವ ಸಂಸ್ಕೃತಿ ನಮ್ಮದು. ಗೋ ಹತ್ಯೆಯಿಂದ ಹಿಂದೂಗಳ ಭಾವನೆಗೆ ಅಪಾರವಾದ ಹಾನಿಯಾಗುತ್ತಿದ್ದು ಮತ್ತು ನಮ್ಮ ಅಸ್ಮಿತೆಗೆ ಧಕ್ಕೆಯಾಗುತ್ತಿದೆ.ಆದಕಾರಣ, ತಾಲೂಕು ಮತ್ತು ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯೆಯಾಗದಂತೆ ಸರ್ಕಾರದ ಕಟ್ಟುನಿಟ್ಟಿನ ಆದೇಶವನ್ನು ಪೊಲೀಸ್ ಇಲಾಖೆಯವರಿಗೆ, ಸಾರಿಗೆ ಇಲಾಖೆಯವರಿಗೆ, ಇನ್ನು ಸಂಬಂಧಪಟ್ಟಂತಹ ಇಲಾಖೆಯವರಿಗೆ ತಾವು ಆದೇಶವನ್ನು ಮಾಡಬೇಕು. ತಮ್ಮ ಮತ್ತು ಸರ್ಕಾರದ ಆದೇಶವನ್ನು ಪಾಲಿಸದ ಗೋ ಹಂತಕರಿಗೆ ಕಾನೂನಿನ ಪ್ರಕಾರ ಕಟ್ಟುನಿಟ್ಟಿನ ಕ್ರಮವನ್ನು ತಗೆದುಕೊಳ್ಳಬೇಕು ಮತ್ತು ನಮ್ಮ ಅಸ್ಮಿತಿಯ ಸಂಕೇತವಾದ ತಾಯಿ ಸ್ವರೂಪಿ ಗೋ ಮಾತೆಯ ರಕ್ಷಣಿಗೆ ತಾವು ಪ್ರಮುಖ ಕೇಂದ್ರಗಳಲ್ಲಿ ಪರಿಶೀಲನಾ ತಂಡವನ್ನು ನೇಮಿಸಿ, ಪೊಲೀಸ್ ಇಲಾಖೆಯಿಂದ ಚೆಕ್ ಪೋಸ್ಟ್ ನಿರ್ಮಾಣ ಮಾಡಬೇಕು ಮತ್ತು ಬರುವ ಮೇ29 ರ ವರಿಗೆ ಗೋ ಮಾರಾಟವನ್ನು ಮತ್ತು ಜಾನುವಾರು ಸಂತೆಯನ್ನು ನಿಷೇಧಿಸಿ ಆದೇಶ ಹೊರಡಿಸಬೇಕು ಮತ್ತು ಕಾನೂನಿನ ಅಡಿಯಲ್ಲಿ ಗೋರಕ್ಷಕರಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಗ್ರೇಡ್-2 ತಹಸೀಲ್ದಾರ್ ಗಣೇಶ ಸವಣೂರ ಅವರು ಮನವಿ ಸ್ವೀಕರಿಸಿದರು. ಗೋ ರಕ್ಷಾ ವಿಭಾಗದ ಕರ್ನಾಟಕದ ಪ್ರಾಂತ ಪದಾಧಿಕಾರಿಗಳಾದ ಅರುಣ ಬಗರೆ, ಹನುಮಂತಗೌಡ ಮುದಿಗೌಡ್ರ, ಮಹೇಶ ಮುದಗಲ್, ಸಮೀತ ಕೆಮ್ಮಣಕೇರಿ, ದುರಗಪ್ಪ ಗಡೇದ, ವಿನಾಯಕ ಕುಲಕರ್ಣಿ, ವೀರೇಶ ಕಳಪ್ಪನವರ, ಪ್ರವೀಣ ಬಾಲೇಹೊಸೂರ, ಸುನೀಲ ಹೊಸೂರ, ವಿನಾಯಕ ಹಲಸೂರ, ಕಾತೀಕ ಹಿರೇಮಠ, ಮಾಂತೇಶ ಮಾನೇಗಾರ, ದೇವರಾಜ ಭಜಂತ್ರಿ, ಪವನ ರಸಾಳಕರ, ರವಿ ತೋಟದ, ಪ್ರವೀಣ ಚೌವ್ಹಾಣ, ಸಂತೋಷ ಆಲೂರ, ಶಿವಾನಂದ ಹಣಗಿ ಹಾಗೂ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೃದ್ಯ ಪುಸ್ತಕ ಪ್ರೀತಿ ಬೆಳೆಸಿ ಪುಸ್ತಕ ಸಂಸ್ಕೃತಿ ಬೆಳೆಸಿ ಉತ್ತೇಜಿಸುವ ಅಗತ್ಯವಿದೆ
ಬಂಗಾರಪ್ಪ ನಗರ, ಗಾಂಧಿನಗರ ನಿವಾಸಿಗಳ ಮನೆಗಳ ತೆರವಿಗೆ ತಡೆ