- ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿಕೆ । ಮಹೇಶ್ ಮನೆಯಲ್ಲಿ ಕಾಫಿ ಸಭೆ
- - -ಕನ್ಕಡಪ್ರಭ ವಾರ್ತೆ ಹೊನ್ನಾಳಿ
ಜಿಪಂ ಮಾಜಿ ಸದಸ್ಯ ಮಹೇಶ್ ಇಂದಿನಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಲು ತೀರ್ಮಾನಿಸಿದ್ದು ಒಳ್ಳೆಯ ನಿರ್ಧಾರವಾಗಿದೆ. ಎಲ್ಲ ವೈಮನಸ್ಸುಗಳ ಮರೆತು ಹಾಗೂ ವ್ಯತ್ಯಾಸಗಳನ್ನು ಸರಿ ಮಾಡಿಕೊಂಡು ಮುಂದೆ ಸಾಗುವುದು ನಮ್ಮಗಳ ಉದ್ದೇಶವಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಭಾನುವಾರ ಪಟ್ಟಣದ ಎಂ.ಆರ್.ಮಹೇಶ ಅವರ ಮನೆಗೆ ತೆರಳಿ ಸಭೆ ನಡೆಸಿದ ಸಂದರ್ಭ ಅವರು ಮಾತನಾಡಿದರು. ಬಿಜೆಪಿ ಕೆಲ ಪದಾಧಿಕಾರಿಗಳಲ್ಲಿ ಸ್ವಲ್ಪ ವ್ಯತ್ಯಾಸವಾಗಿರುವುದು ನಿಜ. ಇದು ಕಾರ್ಯಕರ್ತರಲ್ಲಿ ಗೊಂದಲ ಹಾಗೂ ಅಸಮಾಧಾನ ಮೂಡಿಸಿತ್ತು. ರಾಜ್ಯ ಬಿಜೆಪಿ ಉಸ್ತುವಾರಿ ಅಗರವಾಲ್ ಸಭೆ ಕರೆದು ಎಲ್ಲ ವೈಮನಸ್ಸು ಮರೆತು ಪಕ್ಷ ಸಂಘಟನೆ ಮಾಡಿ ಎಂದು ಸೂಚಿಸಿರುವ ಪ್ರಯುಕ್ತ ಹಿಂದಿನ ವ್ಯತ್ಯಾಸ ಮರೆತು ಪಕ್ಷ ಸಂಘಟನೆಗೆ ನಮ್ಮೊಂದಿಗೆ ಮಹೇಶ್ ಅವರು ಕೈ ಜೋಡಿಸಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು.
ದೇಶದಲ್ಲಿ ನರೇಂದ್ರ ಮೋದಿ ಉತ್ತಮ ಕೆಲಸ ಮಾಡುತ್ತಿದ್ದು, ಇದು ವಿಶ್ವ ನಾಯಕರಾಗಿದ್ದಾರೆ. ಹೊನ್ನಾಳಿ ತಾಲೂಕು ಪಕ್ಷ ಸಂಘಟನೆಯಲ್ಲಿ ಮುಂಚುಣಿಯಲ್ಲಿದೆ. ಅನಾವಶ್ಯಕ ಗೊಂದಲ ಸೃಷ್ಠಿ ಮಾಡಿಕೊಂಡು ಅಪಾರ್ಥಕ್ಕೆ ಈಡಾಗುವುದು ಯಾರಿಗೂ ಸಲ್ಲದು. ಆ ನಿಟ್ಟಿನಲ್ಲಿ ಇಂದು ಮಹೇಶ್ ಮನೆಗೆ ನಾವೇ ಕಾಫಿಗೆಂದು ಸೇರಿ ಸಭೆ ಮಾಡಿದ್ದೇವೆ ಎಂದು ಸ್ಪಷ್ಠೀಕರಣ ನೀಡಿದರು.
ಜಿಪಂ ಮಾಜಿ ಸದಸ್ಯ ಎಂ.ಆರ್.ಮಹೇಶ್ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ಪಕ್ಷದ ಸಂಘಟನೆ ಮುಖ್ಯ ವೈಯಕ್ತಿಕ ಪ್ರತಿಷ್ಠೆಗೆ ಹೋಗದೇ ಎಲ್ಲರೂ ಸೇರಿ ಪಕ್ಷ ಸಂಘಟನೆ ಮಾಡಿ ಎಂದು ಬಹಳ ನೋವಿನಿಂದ ಹೇಳಿರುವ ಸಂದೇಶದಿಂದ, ನನ್ನ ಹಾಗೂ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯರ ಮಧ್ಯ ಇದ್ದ ಸಣ್ಣಪುಟ್ಟ ವ್ಯತ್ಯಾಸಗಳನ್ನು ಮರೆತು ಮಾಜಿ ಸಚಿವರ ಕೈ ಬಲಬಡಿಸಲು ನಿರ್ಧಾರ ಮಾಡಿದ್ದೇನೆ ಎಂದು ಹೇಳಿದರು.
ಬಿಜೆಪಿ ಮಂಡಲದ ಅಧ್ಯಕ್ಷ ಅರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ,ಸುರೇಶ್, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಕುಬೇರಪ್ಪ, ಪ್ರಧಾನ ಕಾರ್ಯದರ್ಶಿ ಮಾರುತಿನಾಯ್ಕ, ಮುಖಂಡರಾದ ದೊಡ್ಡೇರಿ ಗಿರೀಶ್, ರಂಗಪ್ಪ ಹಾಗೂ ಇತರರು ಇದ್ದರು.- - -
-12ಎಚ್.ಎಲ್.ಐ1: