ವಿಶ್ವಗುರು ಬಸವ ಸಮಿತಿ ಹಾಗೂ ಬಸವಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ನಗರದ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ (ಕೋರ್ಟ್ ಸರ್ಕಲ್) ಬಳಿ ಪ್ರತಿಭಟಿಸಿ ತಹಸೀಲ್ದಾರ್ ಆರ್.ಎಚ್.ಭಾಗವಾನ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಣಿಬೆನ್ನೂರು: ಮಹಾನ್ ಮಾನವತಾವಾದಿ ಹಾಗೂ ದಾರ್ಶನಿಕ ಬಸವಣ್ಣನವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಬಸವ ಮಂಟಪ ಪುಸ್ತಕದ ಲೇಖಕ ರವಿ ಹಂಜ್ ಹಾಗೂ ಅದನ್ನು ಪ್ರಕಟಿಸಿದ ವಿಶ್ವೇಶರ ಭಟ್ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ವಿಶ್ವಗುರು ಬಸವ ಸಮಿತಿ ಹಾಗೂ ಬಸವಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ನಗರದ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ (ಕೋರ್ಟ್ ಸರ್ಕಲ್) ಬಳಿ ಪ್ರತಿಭಟಿಸಿ ತಹಸೀಲ್ದಾರ್ ಆರ್.ಎಚ್.ಭಾಗವಾನ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಹಾಕಿದರು. ಆ ಸಮಯದಲ್ಲಿ ಬಸವಾದಿ ಶರಣರು ನಿರಂತರ ಹೋರಾಟ ಮಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅಂದಿನ ಶರಣರ ಜೀವನ ತೆರೆದಿಟ್ಟ ಪುಸ್ತಕದಂತಿದೆ. ಇಂತಹ ಶ್ರೇಷ್ಠ ಇತಿಹಾಸವನ್ನು ತಿರುಚಲು ಹೊರಟ ದುಷ್ಟ ಕೂಟಕ್ಕೆ ಪ್ರೇರಣೆಯಾಗಿರುವ ರವಿ ಹಂಜ್ ಬಸವ ಮಂಟಪ ಪುಸ್ತಕ ಬರೆದು ಅದರಲ್ಲಿ ಬಸವಣ್ಣನವರ ತೇಜೋವಧೆ ಮಾಡಿದ್ದು ಅದನ್ನು ವಿಶ್ವೇಶ್ವರ ಭಟ್ ಪ್ರಕಟಿಸಿದ್ದಾರೆ. ಈ ಪುಸ್ತಕ ಪ್ರಕಟಣೆಯಿಂದ ಲಿಂಗಾಯತ ಸಮಾಜ ಮಾತ್ರವಲ್ಲದೆ ಎಲ್ಲ ಸಮಾಜಗಳಿಗೂ ಅತಿಯಾದ ನೋವುಂಟು ಮಾಡಿದ್ದಾರೆ. ಆದ್ದರಿಂದ ಅವರಿಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಂಡು ಭಾರತದಿಂದ ಗಡಿಪಾರು ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಬಸವ ಸೇವಾ ಸಮಿತಿ ಅಧ್ಯಕ್ಷ ಯು.ಎಂ. ಗುರುಲಿಂಗಪ್ಪಗೌಡ್ರ, ಪ್ರಭುಲಿಂಗ ಹಲಗೇರಿ, ಆರ್.ಎನ್. ಬಾಳಿಕಾಯಿ, ಕಿರಣ ಗುಳೇದ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.