ಗೋ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork |  
Published : Jan 22, 2025, 12:35 AM IST
ಗೋ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ | Kannada Prabha

ಸಾರಾಂಶ

ಗೋ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿ ನಗರದಲ್ಲಿ ಗೋ ಸಂರಕ್ಷಣಾ ವತಿಯಿಂದ ಗೋ ಪೂಜೆ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗೋ ಹಂತಕರನ್ನು ಬಂಧಿಸುವಂತೆ ಒತ್ತಾಯಿಸಿ ಗೋ ಸಂರಕ್ಷಣಾ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಚಾಮರಾಜೇಶ್ಚರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಗೋ ಮಾತೆಗೆ ಪೂಜೆ ಸಲ್ಲಿಸಿ ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಮಾನವ ಸರಪಳಿ ನಿರ್ಮಿಸಿ, ಗೋ ಹಂತಕರನ್ನು ಬಂಧಿಸುವಂತೆ ಆಗ್ರಹಿಸಿದರು. ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಪ್ರಕಾಶ್ ಮಾತನಾಡಿ, ರೈತ ದೇಶದ ಬೆನ್ನೆಲುಬಾದರೆ ರೈತನ ಬೆನ್ನೆಲುಬು ಗೋವು. ಗೋವಿಲ್ಲದ ಮನಷ್ಯನ ಜೀವನ ಶೂನ್ಯ ಮನುಷ್ಯನ ಹುಟ್ಟಿನಿಂದ ಸಾಯುವವರೆಗೂ ಗೋವಿನ ಉತ್ಪನ್ನಗಳು ಮನುಷ್ಯನಿಗೆ ಸಂಜೀವಿನಿ ಇದ್ದಂತೆ ಎಂದರು.

ಇಂತಹ ಗೋವುಗಳನ್ನ ವಿಕೃತವಾಗಿ ಹಿಂಸಿಸುತ್ತಿರುವುದು ಖಂಡನೀಯ. ಇಂತಹ ದುಷ್ಕೃತ್ಯಗಳನ್ನು ಖಂಡಿಸಿ ಪ್ರತಿಭತಿಸುತ್ತಿಸಲಾಗುತ್ತಿದೆ. ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಸಂಯೋಜಕ ಮಹೇಶ್ ಕಡಗದಾಳು ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಹಿಂದೂ ಭಾವನೆಗಳ ಜೊತೆ ಚಲ್ಲಾಟವಾಡುತ್ತಿದೆ. ಕೆಲವು ದಿನಗಳ ಹಿಂದೆ ಚಾಮರಾಜಪೇಟೆಯ ವಿನಾಯಕನಗರದಲ್ಲಿ ೩ ಹಸುಗಳ ಕೆಚ್ಚಲನ್ನು ಕೊಯ್ದು ವಿಕೃತಿ ಮೆರೆದ ರಾಕ್ಷಸಿ ಮನಸ್ಥಿತಿಯ ವ್ಯಕ್ತಿಯನ್ನು ಮಾನಸಿಕ ಅಸ್ವಸ್ಥ ಎಂದು ಹೇಳುವ ಮೂಲಕ ಗೃಹಮಂತ್ರಿ ತಮ್ಮ ಅಸಮರ್ಥತೆಯನ್ನು ಹೊರಹಾಕಿದ್ದಾರೆ ಎಂದರು.

ನಂಜನಗೂಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನಕ್ಕೆ ಭಕ್ತಾಧಿಗಳು ಕಾಣಿಕೆ ರೂಪದಲ್ಲಿ ನೀಡಿದ್ದ ಗೋವಿನ ಬಾಲವನ್ನು ಕತ್ತರಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಗೋಶಾಲೆ ನಿರ್ಮಾಣ ಮಾಡುವ ಮೂಲಕ ಗೋವುಗಳನ್ನು ರಕ್ಷಿಸುವ ಹೊಣೆಯನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗ ಅಲ್ಪಸಂಖ್ಯಾತರು ತಮ್ಮ ದುಷ್ಕೃತ್ಯಗಳನ್ನು ಹೆಚ್ಚು ಮಾಡುತ್ತಿದ್ದಾರೆ. ವಕ್ಫ್ ಮೂಲಕ ರಾಜ್ಯದಲ್ಲಿ ನೂರಾರು ರೈತರ ಸಹಸ್ರಾರು ಎಕರೆ ಭೂಮಿಗಳನ್ನು ವಶಪಡಿಸಿಕೊಂಡು ಎಲ್ಲ ಜಿಲ್ಲೆಗಳಲ್ಲಿ ಅಲ್ಪ ಸಂಖ್ಯಾತರನ್ನು ಒಲೈಸಿಕೊಳ್ಳುವ ಮಟ್ಟಕ್ಕೆ ನೀಚ ರಾಜಕಾರಣ ಮಾಡುತ್ತಿದ್ದಾರೆ ಎಂಂದರು. ಮೂರು ಹಸುಗಳ ಕೆಚ್ಚಲನ್ನು ಕೊಯ್ದು ರಾಕ್ಷಸಿ ಕೃತ್ಯವನ್ನು ಎಸಗಿದವರು ಮತ್ತು ನಂಜನಗೂಡಿನಲ್ಲಿ ಗೋವಿನ ಬಾಲ ಕತ್ತರಿಸಿರುವ ಮೂಲಕ ಮನುಷ್ಯತ್ವವಿಲ್ಲದೆ ವರ್ತಿಸಿದ ಹಂತಕರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹಂತ ಹಂತವಾಗಿ ಪ್ರತಿಭಟನೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನಡೆಸಿದರು.

ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಸುಂದರ ರಾಜ್, ಚಂದ್ರಶೇಖರ ರಾವ್, ನಾರಾಯಣಸ್ವಾಮಿ, ಚಂದಕವಾಡಿ ಯೋಗೀಶ್, ಮುಖಂಡರಾದ ಪಿ.ಬಿ.ಶಾಂತಮೂರ್ತಿ ಕುಲಗಾಣ, ಮಹಾದೇವಸ್ವಾಮಿ ಬೆರಂಬಾಡಿ, ಆರ್.ಸುಂದರ್, ಬಾಲಸುಬ್ರಮಣ್ಯ, ಮಮತ, ಸರೋಜಮ್ಮ, ವನಜಾಕ್ಷಿ ಮೂಡ್ತಾ ಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ,ಜಯಸುಂದರ್, ನಟರಾಜು, ಕಾಡಳ್ಳಿ ಕುಮಾರ್,ರಂಗಸ್ವಾಮಿ ಸುದರ್ಶನ್ ಗೌಡ,ಮಂಜುನಾಥ್, ರಾಘವೇಂದ್ರ, ಚಂದ್ರಶೇಖರ್, ಮನೋಜ್ ಪಟೇಲ್ ಎಂ ಎಸ್ ಚಂದ್ರಶೇಖರ್, ಪ್ರದೀಪ್ ದೀಕ್ಷಿತ್, ವೀರೇಂದ್ರ, ಮಂಜುನಾಥ್, ಪ್ರಭುರಾಮ್, ಮಧು ಮದ್ದೂರು, ವೆಂಕಟೇಶ್, ಶಂಕರ, ಬುಲೆಟ್ ಚಂದ್ರು, ನಾಗೇಂದ್ರಬಾಬು, ಆನಂದ್ ಭಗೀರಥ, ಬಾಲರಾಜು,ಮಹೇಶ್ ಮರಿಯಾಲ, ನೂರೊಂದುಶೆಟ್ಟಿ,ರಮೇಶ್ ಆಟೋ ರಮೇಶ್, ದಯಾನಿಧಿ ಚಂದ್ರು, ಸುದರ್ಶನ್ ಆಳ್ವಾ, ಪ್ರಕಾಶ್, ನಂದೀಶ್, ಪೃಥ್ವಿ, ಕಿರಣ್, ಪ್ರವೀಣ್, ಮಂಜು ಭಾಗವಹಿಸಿದ್ದರು.

PREV

Recommended Stories

ಅನನ್ಯಾ ಭಟ್‌ ನಾಪತ್ತೆ ಆಗಿದ್ದಾಳೆಂಬ ಪ್ರಕರಣಕ್ಕೆ ಬಹುದೊಡ್ಡ ತಿರುವು ..!
ಧರ್ಮಸ್ಥಳ : ಬುರುಡೆ ಕೇಸ್‌ನಲ್ಲಿ ಉತ್ತರ ಸಿಗದ ಪ್ರಶ್ನೆಗಳು