ಕನ್ನಡಪ್ರಭ ವಾರ್ತೆ ಚಿಂತಾಮಣಿ
ಕೆಪಿಸಿಸಿ ರಾಜ್ಯ ಸಂಯೋಜಕ ರಾಜೀವ್‌ಗೌಡ ಕೋಟೆ ವೃತ್ತದಲ್ಲಿ ಅಳವಡಿಸಿದ್ದ ಬ್ಯಾನರ್ ಅನ್ನು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತದೆಯೆಂಬ ವಿಚಾರವಾಗಿ ಶಿಡ್ಲಘಟ್ಟ ಪೌರಾಯುಕ್ತೆ ಅಮೃತಗೌಡ ಅದನ್ನು ತೆರವು ಮಾಡಿಸಿದ್ದು ಈ ಹಿನ್ನೆಲೆಯಲ್ಲಿ ಕೋಪಗೊಂಡು ದೂರವಾಣಿ ಕರೆ ಮಾಡಿ ಏಕವಚನ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ ಪ್ರಾಣಬೆದರಿಕೆ, ಅಶ್ಲೀಲ ಶಬ್ದಗಳಿಂದ ಬೈದಿರುವುದು ಮತ್ತು ದಲಿತ ಅಧಿಕಾರಿಯನ್ನು ನಿಂದಿಸಿರುವುದನ್ನು ನಾಳೆಯೇ ಎಲ್ಲಾ ವಾರ್ಡ್‌ಗಳ ಸಮಸ್ಯೆ ತಂದು ನೀನು ಈ ತಾಲೂಕಿನಿಂದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗದೇ ತಾಲೂಕನ್ನು ಬಿಟ್ಟು ತೊಲಗುವಂತೆ ಮಾಡುತ್ತೇನೆಂದು ಹೇಳಿ ಧಮ್ಕಿ ಹಾಕಿದ್ದರು.
ಇದಕ್ಕೂ ಮುನ್ನಾ ನಗರಸಭೆಯಿಂದ ತಾಲೂಕು ಕಚೇರಿಯವರೆಗೆ ರಾಜೀವ್ ಗೌಡ ವಿರುದ್ಧ ಧಿಕ್ಕಾರಗಳನ್ನು ಕೂಗುವುದರ ಮೂಲಕ ಸಾಗಿ ಬಂದು ತಾಲೂಕು ಕಚೇರಿ ಮುಂಭಾಗದಲ್ಲಿ ಕೆಲಕಾಲ ಮೌನ ಪ್ರತಿಭಟನೆ ನಡೆಸಿದ ತಹಸೀಲ್ದಾರ್ ಸುದರ್ಶನ್ ಯಾದವ್ ಅವರಿಗೆ ಮನವಿ ಸಲ್ಲಿಸಿದರು.ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಒಂದು ವೇಳೆ ಬಂಧಿಸುವಲ್ಲಿ ವಿಫಲವಾದರೆ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಪುರಸಭೆ ಮತ್ತು ನಗರಸಭೆಯ ಸಿಬ್ಬಂದಿ ಪೌರಾಯುಕ್ತರು ದೊಡ್ಡ ಮಟ್ಟದ ಹೋರಾಟ ಹಾಗೂ ಪ್ರತಿಭಟನೆ ಮಾಡಿ ಬಿಸಿಮುಟ್ಟಿಸಲಾಗುವುದು. ಆದ್ದರಿಂದ ಸರ್ಕಾರ ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.