ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಸೇರಿದ ಪಕ್ಷದ ಮುಖಂಡರು,ಕಾರ್ಯಕರ್ತರು ರಾಜ್ಯ ಸರ್ಕಾರದ ಬೆಲೆ ಹೆಚ್ಚಳದ ನೀತಿ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ನಂತರ ಜಿಲ್ಲಾಡಳಿತದ ಮುಖಾಂತರ ಸಿಎಂಗೆ ಮನವಿ ಸಲ್ಲಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಪಕ್ಷದ ಮುಖಂಡರು, ಒಂದು ತಿಂಗಳ ಅವಧಿಯಲ್ಲಿ ರಾಜ್ಯ ಸರ್ಕಾರ ಹಾಲು ಮೊಸರು ಹಾಗೂ ಬಸ್ ದರಗಳ ಭಾರಿ ಏರಿಕೆ ಮಾಡಿದ್ದು ಇದರಿಂದಾಗಿ ಅಕ್ಕಿ, ಬೇಳೆ ಇತರೆ ಇತರೆ ಅಗತ್ಯ ವಸ್ತುಗಳ ಬೆಲೆಗಳೂ ಸಹ ಹಚ್ಚಳ ಗೊಂಡಿವೆ. ಇಡೀ ರಾಜ್ಯ ಅತ್ಯಂತ ಬರಗಾಲದಿಂದ ತತ್ತರಿಸುತ್ತಿರುವ ವೇಳೆ ಜನತೆಗೆ ನೆರವಾಗಬೇಕಾದ ಕೇಂದ್ರ- ರಾಜ್ಯ ಸರ್ಕಾರಗಳು ನೆರವಿಗೆ ದಾವಿಸದೇ ಹೊಣೆಗೇಡಿಯಂತೆ ವರ್ತಿಸುತ್ತಿವೆ. ಮಾತ್ರವಲ್ಲದೇ. ಗಾಯದ ಮೇಲೆ ಬರೆ ಎಳೆದು ಉಪ್ಪು ಸವರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಲ್ಲಿ ತೊಡಗಿರುವುದು ಖಂಡನೀಯ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಕೂಡಾ ಅಂತರರಾಷ್ಟ್ರೀಯ ಬೆಳೆವಣಿಗಳಿಂದಾಗಿ ಕಡಿಮೆ ಬೆಲೆಗೆ ಕಚ್ಚಾ ತೈಲ ಪಡೆದರೂ ಹೊರೆ ಇಳಿಸಲಿಲ್ಲ ಬದಲಿಗೆ ಬೆಲೆ ಏರಿಕೆಯನ್ನು ಮುಂದುವರೆಸಿದೆ.ಪೆಟ್ರೋಲ್. ಡಿಸೇಲ್ .ಗ್ಯಾಸ್ ಬೆಲೆಗಳು ಏರುತ್ತಲೇ ಇವೆ. ಸರ್ಕಾರಿ ಡೈರಿ ಉತ್ಪನ್ನಗಳ ಬೆಲೆ ಏರಿಕೆ ಮಾಡಿದ ಬೆನ್ನು ಹಿಂದೆಯೇ ಖಾಸಗೀ ಡೈರಿ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಲಾಗಿರುವುದು ಅದೇ ರೀತಿ ಸಾರ್ವಜನಿಕ ಸಾರಿಗೆ ಬಸ್ ದರ ಏರಿಕೆ ಬೆನ್ನು ಹಿಂದೆಯೇ ಖಾಸಗೀ ಬಸ್ ದರ ಏರಿಕೆ ಮಾಡಲಾಗಿದೆ. ಇದನ್ನು ಗಮನಿಸಿದರೆ. ಸರ್ಕಾರಗಳ ಮೇಲೆ ಖಾಸಗೀ ಬಂಡವಾಳದಾರರ ಒತ್ತಡ ಮತ್ತು ಅವರ ಲೂಟಿಗೆ ನೆರವು ನೀಡುವ ದುರುದ್ದೇಶ ಈ ಬೆಲೆ ಏರಿಕೆಗಳ ಹಿಂದೆ ಇರುವಂತೆ ಕಂಡುಬರುತ್ತಿದೆ. ಇನ್ನೂ ಬರಗಾಲ ವ್ಯಾಪಕ ವಾಗಿರುವುದರಿಂದ ಕಾಳಸಂತೆಕೋರರಿಗೆ ಗ್ರಾಹಕರ ಲೂಟಿ ಮಾಡಲು ರೆಕ್ಕೆ ಬಂದತ್ತಾಗಿದೆ. ಇಂತಹ ಕಾಳ ಸಂತೆ ನಿಗ್ರಹ ನಿಗ್ರಹಿಸದಿರುವ ಸರ್ಕಾರಗಳು ಕಾಳ ಸಂತ ಕೋರತನದ ಪರ ನಿಂತಿರುವುದು ಅಕ್ಷಮ್ಯವಾಗಿದೆ. ಸರ್ಕಾರಗಳ ಈ ಲೂಟಿಕೋರತನದ ಪರವಾದ ನೀತಿಗಳನ್ನು ಖಂಡಿಸಿ ಮತ್ತು ಬರಗಾಲ ಪರಿಹಾರಗಳ ಜಾರಿಗೆ ಕೂಡಲೇ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಡಿ.ಎಸ್.ಶರಣಬಸವ, ಕೆ.ಮಲ್ಲೇಶಪ್ಪ,ಬಸವಂತರಾಯ ಗೌಡ,ನರಸಣ್ಣ ನಾಯಕ,ಹನುಮಂತ ಮಡಲಗುಂಡಾ, ಗೋಕಾರಮ್ಮ, ನಿರ್ಮಲ, ನರಸಮ್ಮ,ಸುಜಾತ, ನರಸಿಂಹಲು, ಮಾರೆಪ್ಪ, ನರಸಮ್ಮ, ಮಹಾದೇವಿ ಸೇರಿ ಅನೇಕರು ಇದ್ದರು.