ಕನ್ನಡಪ್ರಭ ವಾರ್ತೆ ವಿಜಯಪುರ
ಹೋರಾಟದ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸದಿದ್ದರೇ ನ.5 ರಂದು 1 ಗಂಟೆಗೆ ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವ ಎಚ್ಚರಿಕೆಯನ್ನು ರೈತ ಭಾರತ ಪಕ್ಷ ನೀಡಿದೆ. ಈ ಕುರಿತು ಹೆಸ್ಕಾಂ ಅಧೀಕ್ಷಕ ಅಭಿಯಂತರ ಮೂಲಕ ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಿಗೆ ಮಂಗಳವಾರ ಮನವಿ ಸಲ್ಲಿಸಿ ಕಚೇರಿಗೆ ಬೀಗ ಜಡಿಯುವ ಎಚ್ಚರಿಕೆ ನೀಡಿತ್ತು. ರೈತ ಭಾರತ ಪಕ್ಷವು ಈಗಾಗಲೇ ಹಲವಾರು ಬಾರಿ ವಿದ್ಯುತ್ ಇಲಾಖೆಗೆ ಮನವಿ ಮಾಡಿ ಹೋರಾಟಗಳನ್ನು ಮಾಡಿದ್ದರೂ ಇಲಾಖೆಯಿಂದ ಯಾವುದೇ ಸ್ಪಂದನೆ ದೊರೆಯದ ಕಾರಣ ಇಲಾಖೆಯ ವಿರುದ್ಧ ಉಗ್ರ ಹೋರಾಟಕ್ಕೆ ರೈತ ಭಾರತ ಪಕ್ಷ ಮುಂದಾಗಿದೆ.ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ, ಸೈಯದ್ ಯಾಸಿನ್ ಗುಲ್ಬರ್ಗ, ಹರೀಶ್ ಕುಲಕರ್ಣಿ, ರಾಜು ಅಳ್ಳಗಿ, ಹಾರುಣ್ ಶೇಕ್, ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಅಧ್ಯಕ್ಷ ವಿನೋದ್ ಖೇಡ್ ಹಾಗೂ ಜಿಲ್ಲಾ ಸಮಿತಿಯ ಅಶೋಕ್ ವಾಲಿಕರ್, ಪರಶುರಾಮ್ ಗಾಯಕ್ವಾಡ್, ಅಂಬಣ್ಣ ಗುನ್ನಾಪುರ್, ಸಂತೋಷ್ ಕಲಗುಡಿ, ಸಂಜು ಬೆಳ್ಳನ್ನವರ್, ಸೌಮ್ಯ ನಾರಾಯಣಕರ್, ವಿಟ್ಟಲ್ ಕರಿಗಾರ್, ಶ್ರೀಶೈಲ್ ಜೋಗುರ್, ಲಘುಮಣ್ಣ ಹಿಪ್ಪರಗಿ ಸೇರಿದಂತೆ ಹಾಗೂ ಇತರರು ಉಪಸ್ಥಿತರಿದ್ದರು.ಸ್ಥಳಕ್ಕೆ ಹೆಸ್ಕಾಂ ಎಂಡಿ, ಜಿಎಂ ತಾಂತ್ರಿಕ, ಜಿಎಂ ಅಡ್ಮಿನ್, ಆರ್ಥಿಕ ಸಲಹೆಗಾರರು, ಅಧೀಕ್ಷಕ ಅಭಿಯಂತರರು ಹೆಸ್ಕಾಂ ಆರ್‌ಎಪಿಡಿಆರ್‌ಪಿ ಮತ್ತು ಮುಖ್ಯ ವಿದ್ಯುತ್ ಪರ್ವೀಕ್ಷಕರು ಬರುವವರೆಗೆ ಹೋರಾಟ ನಿಲ್ಲಿಸುವುದಿಲ್ಲ.
-ಮಲ್ಲಿಕಾರ್ಜುನ ಕೆಂಗನಾಳ, ರಾಜ್ಯಾಧ್ಯಕ್ಷರು, ರೈತ ಭಾರತ ಪಕ್ಷ.