ಕನ್ನಡಪ್ರಭ ವಾರ್ತೆ ಮಂಡ್ಯ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸರಿಯಾದ ವಾದ ಮಂಡಿಸುವಲ್ಲಿ ರಾಜ್ಯಸರ್ಕಾರ ವಿಫಲವಾಗಿದೆ. ಅದರ ಪರಿಣಾಮ ಇಂತಹ ಆದೇಶ ಹೊರಬಿದಿದ್ದೆ. ಕಾಂಗ್ರೆಸ್ ಸರ್ಕಾರಕ್ಕೆ ರೈತಪರ ಕಾಳಜಿ ಇಲ್ಲ. ಕೇವಲ ಸಚಿವ ಸಂಪುಟ ರಚನೆಗಷ್ಟೇ ಆದ್ಯತೆ ನೀಡಿದೆ. ಇಲ್ಲದಿದ್ದರೆ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿ ಎದುರು ಮಂಡಿಸುತ್ತಿತ್ತು ಎಂದು ದೂರಿದ್ದಾರೆ.
ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಡ್ಯಾಂಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗುತ್ತಿದೆ. ಇದರ ಬಗ್ಗೆ ಜ್ಞಾನವಿಲ್ಲದೆ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಇಂತಹ ಆದೇಶ ಹೊರಬಿದ್ದಿದೆ. ರೈತರು ಎಷ್ಟೇ ಪ್ರತಿಭಟನೆ ನಡೆಸಿದರೂ ನಾಲೆಗೆ ನೀರು ಬಿಡಲು ನಿರ್ಲಕ್ಷ್ಯ ತೋರಲಾಗಿತ್ತು. ಆದರೆ, ತನ್ನ ಮಿತ್ರಪಕ್ಷಕ್ಕೆ ಅನುಕೂಲವಾಗಲೆಂದು ತಮಿಳುನಾಡಿಗೆ ನೀರು ಹರಿಸುವ ಮೂಲಕ ನಮ್ಮ ರೈತರಿಗೆ ಅನ್ಯಾಯ ಮಾಡಿದೆ. ಏನೇ ಇರಲಿ, ಯಾವುದೇ ಕಾರಣಕ್ಕೂ ನೀರು ಬಿಡಬಾರದು. ಇಲ್ಲದಿದ್ದರೆ ಅದರಿಂದಾಗುವ ಪರಿಣಾಮವನ್ನು ರಾಜ್ಯಸರ್ಕಾರವೇ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.