ಖಾಲಿ ಕೊಡಗಳೊಂದಿಗೆ ಪಪಂ ಕಚೇರಿ ಎದುರು ಪ್ರತಿಭಟನೆ

KannadaprabhaNewsNetwork |  
Published : Nov 18, 2026, 03:00 AM IST
ಲೋಕಾಪುರ | Kannada Prabha

ಸಾರಾಂಶ

ಲೋಕಾಪುರ : ಕುಡಿಯುವ ನೀರು ಪೂರೈಸುವಲ್ಲಿ ವಿಫಲವಾಗಿರುವ ಪಟ್ಟಣ ಪಂಚಾಯಿತಿ ವಿರುದ್ಧ ಪಟ್ಟಣದ ವಾರ್ಡ್‌ ನಂ.೯ರ ನಿವಾಸಿಗಳು ಮಂಗಳವಾರ ಪಟ್ಟಣ ಪಂಚಾಯಿತಿ ಕಾರ್ಯಾಲಯ ಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಕುಡಿಯುವ ನೀರು ಪೂರೈಸುವಲ್ಲಿ ವಿಫಲವಾಗಿರುವ ಪಟ್ಟಣ ಪಂಚಾಯಿತಿ ವಿರುದ್ಧ ಪಟ್ಟಣದ ವಾರ್ಡ್‌ ನಂ.೯ರ ನಿವಾಸಿಗಳು ಮಂಗಳವಾರ ಪಟ್ಟಣ ಪಂಚಾಯಿತಿ ಕಾರ್ಯಾಲಯ ಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.

ಪಟ್ಟಣ ಪಂಚಾಯಿತಿ ೯ನೇ ವಾರ್ಡಿಗೆ ಸಮರ್ಪಕ ನೀರು ಪೂರೈಕೆ ಮಾಡುತ್ತಿಲ್ಲ, ವಾರ್ಡಿನ ನಿವಾಸಿಗಳು ನೀರಿನ ಕರ ಭರಿಸುತ್ತಿದ್ದರೂ ಪಪಂ ಅಧಿಕಾರಿಗಳು ನೀರು ಪೂರೈಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು.

ಹಲವಾರು ತಿಂಗಳಿಂದ ವಾರ್ಡಿಗೆ ನೀರಿನ ಸಮಸ್ಯೆ ತಲೆದೋರಿದ್ದು, ಮುಖ್ಯಾಧಿಕಾರಿಗಳು ಹಾಗೂ ತಹಸೀಲ್ದಾರ್‌, ಮುಖ್ಯ ಇಂಜಿನಿಯರ್ ಕ್ರಮಕ್ಕೆ ಮುಂದಾಗುತ್ತಿಲ್ಲ, ಅಧಿಕಾರಿಗಳ ಈ ನಡೆಯಿಂದ ಅಲ್ಲಿನ ನಿವಾಸಿಗಳು ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ ಎಂದರು.

ಹಣ ಕೊಟ್ಟು ಟ್ಯಾಂಕರ್ ಮೂಲಕ ನೀರು ಪಡೆಯಬೇಕಾದ ಅನಿವಾರ್ಯತೆ ಉಂಟಾಗಿದೆ. ಬೇಸಿಗೆಗೂ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ತಲೆ ದೋರಿದ್ದು, ಬೇಸಿಗೆಯಲ್ಲಿ ಮತ್ತಷ್ಟು ಉಲ್ಬಣಿಸುವ ಲಕ್ಷಣಗಳು ದಟ್ಟವಾಗಿವೆ. ಕೂಡಲೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು ನೀರಿನ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಸಾರ್ವಜನಿಕರು ಒಂದುವರಿ ತಿಂಗಳಿನಿಂದ ವಾರ್ಡ್‌ ಮತ್ತು ೧೦ರಲ್ಲಿ ಕುಡಿಯುವ ನೀರು ಸರಿಯಾಗಿ ಸರಬರಾಜು ಇಲ್ಲದೆ, ವಾರ್ಡಿನ ನಿವಾಸಿಗಳು ನೀರಿಗೆ ಪರಿತಪಿಸುವಂತಾಗಿದೆ. ಕೂಡಲೇ ನೀರಿನ ಸಮಸ್ಯೆ ಬಗೆಹರಿಸಬೇಕು. ಪಟ್ಟಣ ಪಂಚಾಯಿತಿ ಇಂಜಿನಿಯರ್ ಬದಲಾವಣೆ ಮಾಡಬೇಕು, ಸರಿಯಾಗಿ ಕಾರ್ಯನಿರ್ವಹಿಸದ ಇಂಜಿನಿಯರ್ ಯಾಕೆ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರಾದ ಲಾಲಸಾಬ ತೋರಗಲ್ಲ, ಗುಲಾಬಸಾಬ ಅತ್ತಾರ, ಸೈಯದ್‌ಸಾಬ ಜೀರಗಾಳ, ವಿಠ್ಠಲ ಹಡಪದ, ಸಾದಿಕ್‌ ರಾಮದುರ್ಗ, ಇನಾಯತುಲ್ಲಾ ಜಮಾದಾರ, ಫಕ್ರದ್ದೀನ್‌ ಬೂದಿಹಾಳ, ಹುಸೇನಸಾಬ ರಾಮದುರ್ಗ, ಬೋರುಸಾಬ ತೋರಗಲ್ಲ, ಸಲೀಮಬಾಷಾ ಬೂದಿಹಾಳ, ಶೌಕತ್ ಕರ್ನಾಚಿ, ಅಲ್ಲಿಸಾಬ ಟಪಾಲದಾ, ಜಾವೀದ್‌ ಜೀರಗಾಳ, ಕಾಶೀಂಬೇಗ್‌ ಜಮಾದಾರ, ಗಣೇಶ ಭೋವಿ, ಶೀವು ಭೋವಿ, ವಸೀಮ್‌ ಅತ್ತಾರ, ಶಬ್ಬೀರ್‌ ತೋರಗಲ್ಲ, ಹಯಾತಬಾಷಾ ರಾಮದುರ್ಗ, ಅಬ್ದುಲ್‌ರೆಹಮಾನ ರಾಮದುರ್ಗ, ಸುಭಾನಿ ಜಮಾದಾರ ಹಾಗೂ ಮಹಿಳೆಯರು ಇದ್ದರು.

ವರ್ಚಗಲ್ ಕೆರೆಯಲ್ಲಿ ನೀರಿಲ್ಲದೆ ಸಮಸ್ಯೆ ಎದುರಾಗಿದೆ. ಈಗಾಗಲೇ ಮೂರು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು. ಸ್ಥಳೀಯ ವಾಟರಮನ್‌ಗೆ ಸರಿಯಾಗಿ ನೀರು ಬೀಡಲು ಸೂಚಿಸುತ್ತೇನೆ. ೨-೩ ದಿನಗಳಲ್ಲಿ ಸಮಸ್ಯೆ ಬಗೆಹರಿಸುತ್ತೇನೆ.

- ಸಾಬಣ್ಣಾ ಪೂಜೇರಿ ಪಪಂ ಮುಖ್ಯಾಧಿಕಾರಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆನೀರು ಕಾಲುವೆಗೆ ಸಿಎಂ ಶಂಕುಸ್ಥಾಪನೆ
ಪ್ರೇಯಸಿ ಬಿಟ್ಟು ಹೋಗಿದ್ದಕ್ಕೆಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ