ಕನ್ನಡಪ್ರಭ ವಾರ್ತೆ ಕೋಲಾರಇತ್ತೀಚೆಗೆ ಸಿದ್ದರಾಮಯ್ಯ ಅವರು ಅಹಿಂದ ನಾಯಕ ಅನ್ನೋದಕ್ಕಿಂತ ಅಲ್ಪಸಂಖ್ಯಾತ ಸಿಎಂ ಮಾತ್ರ ಆಗಿದ್ದಾರೆ, ಜಮೀರ್ ಅಹ್ಮದ್, ತನ್ವೀರ್ ಸೇಠ್, ನಜೀರ್ ಅಹ್ಮದ್, ರಿಜ್ವಾನ್, ಹ್ಯಾರೀಸ್ ಇವರೆಲ್ಲಾ ಸೂಪರ್ ಸಿಎಂ ಗಳಾಗಿದ್ದಾರೆ ಎಂದು ಬಿಜೆಪಿಯ ಮಾಜಿ ಸಂಸದ ಮುನಿಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮುಸ್ಲಿಮರಿಗೆ ಸಿವಿಲ್ ಕಾಮಗಾರಿಗಳಲ್ಲಿ ಶೇ.೪ರಷ್ಟು ಮೀಸಲಾತಿ ನೀಡಿರುವುದಕ್ಕೆ ಖಂಡಿಸಿದರು. ಸಿಎಂ ಸಿದ್ದರಾಮಯ್ಯ ಅವರು ಕೇವಲ ಒಂದು ಸಮುದಾಯವನ್ನ ಒಲೈಕೆಗೆ ಮುಂದಾಗಿದ್ದಾರೆ ಎಂದು ಟೀಕಿಸಿದರು.
ಉಳಿದ ಅಲ್ಪಸಂಖಾತರಿಗೆ ಸೌಲಭ್ಯವಿಲ್ಲದೇವಸ್ಥಾನ ಹುಂಡಿ ಹಣವನ್ನು ಬೇರೆದಕ್ಕೆ ಬಳಸಿಕೊಳ್ಳಕಾಗುತ್ತಿದೆ, ಅಲ್ಪ ಸಂಖ್ಯಾತರು ಎಂದರೆ ಜೈನ್ ಹಾಗೂ ಕ್ರಿಶ್ಚಿಯನ್ ಸಮುದಾಯವೂ ಇದೆ, ಆದರೆ ಅವರಿಗೆ ಮಾತ್ರ ಏನು ಕೊಟ್ಟಿಲ್ಲ. ಜಮೀರ್ ಅಹ್ಮದ್, ನಜೀರ್ ಅಹ್ಮದ್ ಸೇರಿ ಹಲವು ನಾಯಕರು ಸೂಪರ್ ಸಿಎಂ ಗಳಾಗಿದ್ದು , ಸಿಎಂ ಸಿದ್ದರಾಮಯ್ಯ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದರು.
ಇಂದು ಪ್ರತಿಭಟನೆಕೋಲಾರ ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ಸರ್ಕಾರಿ ಕಚೇರಿಗಳಲ್ಲಿ ರೇಟ್ ಬೋರ್ಡ್ ಹಾಕಿದ್ರೆ ಒಳಿತು ಯಕಾಂದ್ರೆ ಬಡವರು, ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ, ರಾಜ್ಯ ಕಾಂಗ್ರೆಸ್ ಸರ್ಕಾರದ ಒಲೈಕೆ ಹಾಗು ಭ್ರಷ್ಟಚಾರ ಖಂಡಿಸಿ ಕೋಲಾರ ಜಿಲ್ಲೆಯಲ್ಲಿ ಮಾ.೨೧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಮಾಜಿ ಶಾಸಕ ಮಂಜುನಾಥ್ ಗೌಡ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನವರು ಮರ್ಡರ್ ಮಾಡಿದ್ರು ಕೇಳಲ್ಲ, ಲೂಟಿ ಮಾಡಿದ್ರು ಕೇಳುವರು ಇಲ್ಲವೆಂದು ಮಾಲೂರು ಕಾಂಗ್ರೇಸ್ ನಾಯಕರ ವಿರುದ್ದ ಆಕ್ರೋಶ ಹೊರ ಹಾಕಿದರು.ಎಂಎಲ್‌ಎಗಳು ರಾಜಕಾರಣ ಬಿಟ್ಟು, ದುಡ್ಡು ವಸೂಲಿ ಮಾಡಿ ಎಲೆಕ್ಷನ್‌ಗೆ ಖರ್ಚು ಮಾಡೋದಕ್ಕೆ ಮುಂದಾಗಿದ್ದಾರೆ. ಕೋಲಾರದಲ್ಲಿ ಅತಿಹೆಚ್ಚು ಭ್ರಷ್ಟಚಾರ ನಡೆಯುತ್ತಿದೆ, ಎಲ್ಲಾ ಇಲಾಖೆಗಳು ಲಂಚ ಎಷ್ಟೆಂದು ಲಿಸ್ಟ್ ಹಾಕಬೇಕು, ತಹಸೀಲ್ದಾರ್, ಇಒ ರವರು ತಮ್ಮ ಕಚೇರಿಗಳ ಎದುರು ಲಂಚದ ಪಟ್ಟಿ ಹಾಕಿದರೆ ಉತ್ತಮ ಎಂದು ಸಲಹೆ ನೀಡಿದರು.