ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೋಗುವುದಿಲ್ಲ ಎಂದು ಶಾಸಕ ಹಾಗೂ ಮಾಜಿ ಸಚಿವ ಡಿಕೆ ಸುರೇಶ್ ಹೇಳಿಕೆ ಅಧಿಕೃತ ಆಗಬೇಕಾದರೆ ಸರ್ಕಾರದಿಂದ ಅಧಿಕೃತ ಜ್ಞಾಪನ ಹೊರಡಿಸಲಿ ಇಲ್ಲದಿದ್ದರೆ ಜೂನ್ 18ರಂದು ತಾಲೂಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹಲವಾರು ಸಂಘಟನೆ ಮುಖಂಡರು ಸರ್ವಾನುಮತದಿಂದ ತೀರ್ಮಾನಿಸಿದರು.
ಕನ್ನಡಪ್ರಭ ವಾರ್ತೆ ಕುಣಿಗಲ್
ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೋಗುವುದಿಲ್ಲ ಎಂದು ಶಾಸಕ ಹಾಗೂ ಮಾಜಿ ಸಚಿವ ಡಿಕೆ ಸುರೇಶ್ ಹೇಳಿಕೆ ಅಧಿಕೃತ ಆಗಬೇಕಾದರೆ ಸರ್ಕಾರದಿಂದ ಅಧಿಕೃತ ಜ್ಞಾಪನ ಹೊರಡಿಸಲಿ ಇಲ್ಲದಿದ್ದರೆ ಜೂನ್ 18ರಂದು ತಾಲೂಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಹಲವಾರು ಸಂಘಟನೆ ಮುಖಂಡರು ಸರ್ವಾನುಮತದಿಂದ ತೀರ್ಮಾನಿಸಿದರು. ಕುಣಿಗಲ್ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕರೆಯಲಾಗಿದ್ದ ಸಂಘ ಸಂಸ್ಥೆ ಪದಾಧಿಕಾರಿಗಳು ಹಾಗೂ ಎಲ್ಲಾ ರಾಜಕೀಯ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದರು. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಡಿ ಕೃಷ್ಣಕುಮಾರ್ ತಾಲೂಕಿನ ಎಲ್ಲಾ ಜನರಿಗೆ ಈ ಬಗ್ಗೆ ಇನ್ನೂ ಸಹ ಕಲ್ಪನೆಯಿಲ್ಲ. ಕುಣಿಗಲ್ ತಾಲೂಕಿಗೆ ಹರಿದು ಬರುವ 3.3 ಟಿಎಂಸಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಕಳೆದ ಹಲವಾರು ವರ್ಷಗಳಿಂದ ತಾಲೂಕಿನಲ್ಲಿ ನೆನೆಗುದಿಗೆ ಬಿದ್ದಿರುವ ಎಲ್ಲಾ ಹೇಮಾವತಿ ಕೆನಾಲ್ ಹಾಗೂ ಕಾಲುವೆಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಬೇಕು. ಅದೇ ರೀತಿ ಮಾಗಡಿಗೆ ನೀರು ತೆಗೆದುಕೊಂಡು ಹೋಗಲು ಈಗಾಗಲೇ ಮಾಡಿರುವ ಪೈಪ್ಲೈನ್ ಮತ್ತು ಹೀರೆಕೆರೆಗೆ ಅಳವಡಿಸಲಾಗಿರುವ ಬೃಹತ್ ನೀರು ಯಂತ್ರಗಳನ್ನು ಅಲ್ಲಿಂದ ತೆರವುಗೊಳಿಸಬೇಕು. ಈ ರೀತಿ ಯೋಜನೆಗಳನ್ನು ಮಾಡುವ ಮೂಲಕ ಶಾಸಕರು ಸ್ಪಂದಿಸಬೇಕು. ಇಲ್ಲದಿದ್ದರೆ ಹೋರಾಟಕ್ಕೆ ತಯಾರಿ ನಡೆಯಲೇ ಬೇಕಾಗುತ್ತದೆ ಎಂದರು. ಜೆಡಿಎಸ್ ತಾಲೂಕು ಅಧ್ಯಕ್ಷ ಬಿ ಏನ್ ಜಗದೀಶ್ ಮಾತನಾಡಿ ರೈತರಿಗೆ ನೀರಿನ ಲಭ್ಯತೆಯ ಬಗ್ಗೆ ಮಾಹಿತಿ ನೀಡಬೇಕು. ಮಾಗಡಿಗೆ ನೀರು ಲಭ್ಯತೆಯ ಪ್ರಮಾಣವನ್ನು ಎಲ್ಲಿಂದ ಎಂಬುದನ್ನು ತಕ್ಷಣ ಘೋಷಿಸಬೇಕು ಕುಣಿಗಲ್ ತಾಲೂಕಿನ ಎಲ್ಲಾ ಕೆರೆಗೂ ನೀರು ತುಂಬುವ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು ಎಂದರು. ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಹುಲಿಕಟ್ಟೆ ಮಾತನಾಡಿ ಲಿಂಕ್ ಕೆನಾಲ್ ಕಾಮಗಾರಿ ನಡೆಯುವುದಾದರೆ ಅದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಮೇಲ್ನೋಟಕ್ಕೆ ಸಾಬೀತಾಗುತ್ತದೆ ಕುಣಿಗಲ್ಲಿನ ನೀರಾವರಿಯ ಮೂಲಗಳು ಬಹಳ ಇದೆ. ಆದರೆ ಅಷ್ಟು ದೂರದಿಂದ ನೀರು ತರುವ ಅವಶ್ಯಕತೆ ಅದು ಪೈಪ್ ಲೈನ್ ಮೂಲಕ ಇದರಲ್ಲಿ ಅನುಮಾನಗಳು ಕಾಡಲಾರಂಭಿಸಿದೆ. ತಾಲೂಕಿನಲ್ಲಿರುವ ಶಿಂಷಾ ನದಿಯಿಂದ ಸಂಪೂರ್ಣವಾಗಿ ನೀರಿನ ಲಭ್ಯತೆ ಬಳಕೆಯನ್ನು ಮಾಡಿಕೊಂಡರೆ ಕುಣಿಗಲ್ ತಾಲೂಕಿನ ಹಲವಾರು ಹೋಬಳಿಗಳು ಪ್ರತಿ ವರ್ಷವೂ ಕೂಡ ಸಂಪೂರ್ಣ ನೀರಾವರಿಗೆ ಒಳಪಡುತ್ತವೆ ಎಂದರು. ಕೆ ಆರ್ ಎಸ್ ಪಕ್ಷದ ಜಾಣಗೆರೆ ರಘು ಮಾತನಾಡಿ ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ನೀರಿನ ಸಮಸ್ಯೆ ಜೊತೆ ಜೊತೆಯಾಗಿ ರೈತರನ್ನು ಕಾಡುತ್ತಿದೆ. ನೀರಿನ ಲಭ್ಯತೆ ಮತ್ತು ಹೋರಾಟ ಬರುವ ಹಂಚಿಕೆ ಯೋಜನೆಯ ಬಗ್ಗೆ ಸ್ಥಳೀಯ ಮುಖಂಡರಿಗೆ ಸಂಘ ಸಂಸ್ಥೆಯ ಪದಾಧಿಕಾರಿಗಳಿಗೆ ಶಾಸಕರು ಮನವರಿಕೆ ಮಾಡಿಕೊಂಡು ಅಲ್ಲಿ ವಿಫಲರಾಗಿದ್ದಾರೆ ಎಂದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕಪನಿ ಪಾಳ್ಯ ರಮೇಶ್ ಮಾತನಾಡಿ ನೀರಿನ ಹಂಚಿಕೆ ಮಾಗಡಿಗೆ ನೀಡುವುದಾದರೆ ಪ್ರತ್ಯೇಕವಾಗಿ ಹಂಚಿಕೆ ಮಾಡಬೇಕಿದೆ. ಕುಣಿಗಲ್ ಪಾಲಿನ ನೀರನ್ನು ಕಸಿದಿಯುವುದು ಸರಿಯಲ್ಲ ಮಾಗಡಿ ಕುಣಿಗಲ್ ಜನಗಳ ನಡುವೆ ರಾಜಕಾರಣಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದೆಂದರು. ಹೋರಾಟಗಾರ ಜಿಕೆ ನಾಗಣ್ಣ ಮಾತನಾಡಿ ಮಾಗಡಿಗೆ ನೀರು ತೆಗೆದುಕೊಂಡು ಹೋಗುವುದಿಲ್ಲ ಎಂದು ಕುಣಿಗಲ್ ಶಾಸಕರು ಹೇಳುವುದಾದರೆ ಆ ಭಾಗದಲ್ಲಿನ ಕಾಮಗಾರಿ ಮತ್ತು ಪೈಪ್ಲೈನ್ ಹಾಗೂ ಮೋಟಾರ್ ಗಳ ಅವಶ್ಯಕತೆ ಇಲ್ಲ. ಅವುಗಳನ್ನು ಅಲ್ಲಿಂದ ತೆರವು ಮಾಡಿ ಕೇವಲ ಜನಗಳ ದಾರಿ ತಪ್ಪಿಸುವ ಕೆಲಸ ಬೇಡ ಎಂದರು. ಈ ಸಂದರ್ಭದಲ್ಲಿ ಆ ಹಲವಾರು ಸಂಘ ಸಂಸ್ಥೆಯ ಪದಾಧಿಕಾರಿಗಳು ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.