ರಾಂಪುರ, ಓಬಳಾಪುರ, ಪಕ್ಕುರ್ತಿ, ಕೊಂಡಾಪುರ, ಎನ್.ಆರ್.ಕೆ.ಪುರ, ಜಂಬಲ ಮಲ್ಕಿ ಮತ್ತಿತರ ಗ್ರಾಮಗಳ ರೈತರ ಧರಣಿ ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು ತಾಲೂಕಿನ ರಾಂಪುರ ಹಾಗೂ ಕೋನಸಾಗರ ಬೆಸ್ಕಾಂ ಕಚೇರಿ ಆವರಣದಲ್ಲಿ ತ್ರೀಫೇಸ್ ವಿದ್ಯುತ್ ಸರಬರಾಜಿಗೆ ಆಗ್ರಹಿಸಿ ರೈತರು ಕಳೆದೆರಡು ದಿನಗಳಿಂದ ಪ್ರತಿಭಟನೆ ನಡೆಸಿದ್ದಾರೆ. ರಾಂಪುರ ಬೆಸ್ಕಾಂ ಕಚೇರಿ ಆವರಣದಲ್ಲಿ ಬುಧವಾರ ರಾತ್ರಿ ದಿಢೀರ್ ನಡೆಸಿದ ಪ್ರತಿಭಟನೆ ಗುರುವಾರವೂ ಮುಂದುವರೆಸಿ ಏಳು ಗಂಟೆ ತ್ರೀಫೇಸ್ ವಿದ್ಯುತ್ ಸರಬರಾಜಿಗೆ ಆಗ್ರಹಿಸಿ ಪ್ರತಿಭಟಿಸಿದರು. ರಾಂಪುರ, ಓಬಳಾಪುರ, ಪಕ್ಕುರ್ತಿ, ಕೊಂಡಾಪುರ, ಎನ್.ಆರ್ .ಕೆ.ಪುರ, ಜಂಬಲ ಮಲ್ಕಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಬುಧವಾರ ತಡ ರಾತ್ರಿಯವರೆಗೂ ಪ್ರತಿಭಟನೆ ನಡೆಸಿದ್ದಲ್ಲದೆ ಗುರುವಾರ ಬೆಳಿಗ್ಗೆಯೂ ಪ್ರತಿಭಟಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಕೋನಸಾಗರ ಗ್ರಾಮದ ಬೆಸ್ಕಾಂ ಕಚೇರಿ ಆವರಣದಲ್ಲಿ ಶುಕ್ರವಾರ ನೂರಾರು ರೈತರು ಬೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಮಳೆ ಇಲ್ಲದೆ ಬೆಳೆ ಇಲ್ಲದಾಗಿದ್ದು ವಿದ್ಯುತ್ ನಂಬಿಕೊಂಡು ನೀರಾವರಿ ಪ್ರದೇಶದಲ್ಲಿ ಬೆಳೆ ನಾಟಿ ಮಾಡಿದ್ದೇವೆ. ವಿದ್ಯುತ್ ಕಡಿತದಿಂದಾಗಿ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಿಲ್ಲದಾಗಿದೆ. ಬೆಳೆಗೆಳಲ್ಲಾ ಒಣಗುತ್ತಿವೆ. ಹಾಗಾಗಿ ನಮಗೆ ನಿರಂತರ ಏಳು ಗಂಟೆ ವಿದ್ಯುತ್ ಸರಬರಾಜು ಮಾಡಬೇಕು. ಜತೆಗೆ ತೋಟದ ಮನೆಗಳಿಗೆ ನಿರಂತರ ಜ್ಯೋತಿ ಅಡಿಯಲ್ಲಿ ವಿದ್ಯುತ್ ಸರಬರಾಜು ಮಾಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ರಾಂಪುರ ಬೆಸ್ಕಾಂ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರಾದ ತಿಮ್ಲಾಪುರ ರಾಮರೆಡ್ಡಿ, ಎನ್ ಆರ್ ಕೆ ಪುರ ಯರ್ರಿಸ್ವಾಮಿ, ರಾಂಪುರ ಶಿವಾರೆಡ್ಡಿ, ರಾಜು, ರಾಜುಸ್ವಾಮಿ, ಕೊಂಡಾಪುರ ಲೋಕೇಶ ರೆಡ್ಡಿ, ನವೀನ್ ಕುಮಾರ್, ರಾಮರೆಡ್ಡಿ, ಓಬಳಾಪುರ ಹರೀಶ, ಭೀಮರೆಡ್ಡಿ, ಉಮೇಶ,ಬಸವರಾಜಪ್ಪ, ಭೀಮ, ಪಕ್ಕುರ್ತಿ ಪರಮೇಶಪ್ಪ, ಕರಡಿ ಹಳ್ಳಿ ಶಿವರುದ್ರಪ್ಪ ಇದ್ದರು. ಕೋನಸಾಗರ ಬೆಸ್ಕಾಂ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಎಸ್.ಮೇಘನಾಥರೆಡ್ಡಿ,ಟಿ.ಎಂ. ಬಸವರಾಜ,ಕೆ.ಜಿ. ಶಿವಾನಂದ, ಟಿ.ಸುರೇಶ, ಅಂಜಿನಪ್ಪ, ಪಿ.ಟಿ. ತಿಮ್ಮಪ್ಪ, ಈರಣ್ಣ, ರಮೇಶ, ಮಲ್ಲಿಕಾರ್ಜುನ, ಟಿ.ಪಾಲಯ್ಯ, ಎಂ.ನಾಗರಾಜ, ವೀರೇಶ, ಟಿ.ಚಂದ್ರಣ್ಣ, ಯರ್ರಿಸ್ವಾಮಿ, ಕೆ.ಆರ್.ಶಿವಣ್ಣ, ಕೃಷ್ಣಪ್ಪ,ಬೆಸ್ಕಾಂ ಎಸ್ಒಗಳಾದ ಅಬೇದುಲ್ಲಾ, ಚಂದ್ರಕಾಂತ್, ಪಿ.ಎಸ್ ಐ ಪಾಂಡು ರಂಗಪ್ಪ ಇದ್ದರು. ಚಿತ್ರ