ಬೀದರ್: ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಬಂಧನ ಖಂಡಿಸಿ ಶುಕ್ರವಾರ ಬೀದರ್‌ನಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು.
ರ್‍ಯಾಲಿಯುದ್ದಕ್ಕೂ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂಬಂಧ ರಾಜ್ಯಪಾಲರಿಗೆ ಬರೆದ ಮನವಿ ಅಪರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಕ್ಷದ ವಿಭಾಗೀಯ ಪ್ರಮುಖ ಈಶ್ವರಸಿಂಗ್ ಠಾಕೂರ, ಗುರುನಾಥ ಜ್ಯಾಂತಿಕರ್, ನಗರ ಅಧ್ಯಕ್ಷ ಶಶಿ ಹೋಸಳ್ಳಿ, ಪೀರಪ್ಪ ಯರನಳ್ಳಿ, ಕಿರಣ ಪಾಟೀಲ್, ಗುರುನಾಥ ರಾಜಗೀರಾ, ಸಂಗಮೇಶ ನಾಸಿಗಾರ, ವೀರು ದಿಗ್ವಾಲ, ಸ್ವಾಮಿದಾಸ ಕೆಂಪೆನೋರ ಸೇರಿದಂತೆ ಇನ್ನಿತರರು ಇದ್ದರು.