ರಸ್ತೆ ತಡೆದು ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರ ಆಕ್ರೋಶ

KannadaprabhaNewsNetwork |  
Published : Dec 13, 2024, 12:45 AM IST
ಪಂಚಮಸಾಲಿ ಸಮುದಾಯದವರ ಮೇಲೆ ಪೊಲೀಸ್‌ರಿಂದ ಲಾಠಿ ಪ್ರಹಾರ ನಡೆಸಿದ್ದನ್ನ ಖಂಡಿಸಿ ಮುಳಗುಂದ ಸಮೀಪದ ಸೊರಟೂರ ಗ್ರಾಮದಲ್ಲಿ ಪಂಚಮಸಾಲಿ ಸಮಾಜದಿಂದ ಗದಗ-ಶಿರಹಟ್ಟಿ ರಸ್ತೆ ತಡೆ ನಡೆಸಿ, ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಪಂಚಮಸಾಲಿಗರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ ನಡೆಸಿದ್ದರಿಂದ ಅಮಾಯಕ ಹೋರಾಟಗಾರರು ಕೈಕಾಲು ಮುರಿದುಕೊಂಡು ಮಾರಣಾಂತಿಕವಾಗಿ ನೋವು ಅನುಭವಿಸುವಂತಾಗಿದೆ

ಮುಳಗುಂದ: ಬಸವ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಆಗ್ರಹಿಸಿ ಬೆಳಗಾವಿಯ ಸುವರ್ಣ ಸೌಧದ ಎದುರಿಗೆ ಶಾಂತಿಯುತ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಸಮುದಾಯದವರ ಮೇಲೆ ಪೊಲೀಸ್‌ರಿಂದ ಲಾಠಿ ಪ್ರಹಾರ ನಡೆಸಿದ್ದನ್ನು ಖಂಡಿಸಿ ಸಮೀಪದ ಸೊರಟೂರ ಗ್ರಾಮದಲ್ಲಿ ಪಂಚಮಸಾಲಿ ಸಮಾಜದಿಂದ ಗದಗ-ಶಿರಹಟ್ಟಿ ರಸ್ತೆ ತಡೆ ನಡೆಸಿ,ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.

ಗದಗ-ಶಿರಹಟ್ಟಿ ಮುಖ್ಯ ರಸ್ತೆಯನ್ನು ಒಂದು ಗಂಟೆಗಳ ಕಾಲ ತಡೆ ನಡೆಸಿ ಟೈರ್‌ಗೆ ಬೆಂಕಿ ಹಚ್ಚಿ ಗ್ರಾಮದ ಪಂಚಮಸಾಲಿ ಸಮಾಜದ ಮುಖಂಡರು, ಹಿರಿಯರು, ಯುವಕರು ಸಿದ್ಧರಾಮಯ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದ ಹಿರಿಯ ಮುಖಂಡ ಭದ್ರೇಶ ಕುಸ್ಲಾಪೂರ ಮಾತನಾಡಿ, ಪಂಚಮಸಾಲಿಗರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ ನಡೆಸಿದ್ದರಿಂದ ಅಮಾಯಕ ಹೋರಾಟಗಾರರು ಕೈಕಾಲು ಮುರಿದುಕೊಂಡು ಮಾರಣಾಂತಿಕವಾಗಿ ನೋವು ಅನುಭವಿಸುವಂತಾಗಿದೆ. ಡಾ.ಬಿ.ಆರ್. ಅಂಬೇಡ್ಕರ ಸಂವಿಧಾನದದಲ್ಲಿ ನ್ಯಾಯ ಮತ್ತು ಪ್ರತಿಭಟನೆಯ ಹಕ್ಕು ಇದೆ.ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೋರಾಟಗಾರರ ಮನವಿ ಪಡೆಯದೇ ಶಾಂತಿಯುತ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಸಮುದಾಯದ ಮುಖಂಡರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ ನಡೆಸಿ ಸ್ವಾಮೀಜಿ, ಹೋರಾಟಗಾರರನ್ನು ಬಂಧಿಸಿ ಅವರ ಮೇಲೆ ಕೇಸ್ ದಾಖಲು ಮಾಡಿ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಕೂಡಲೇ ಬಂಧಿಸಿರುವ ಹೋರಾಟಗಾರರನ್ನು ಬಿಡುಗಡೆ ಮಾಡಿ ಎಲ್ಲರ ಮೇಲೆ ಹಾಕಿರುವ ಕೇಸ್‌ ಹಿಂದಕ್ಕೆ ಪಡೆಯಬೇಕು. ರಾಜ್ಯ ಸರ್ಕಾರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು, ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಈ ವೇಳೆ ಮಲಕಾಜಪ್ಪ ಗಿಡ್ಡಕೆಂಚಣ್ಣವರ, ಪ್ರಕಾಶ ಕಲ್ಲಗುಡಿ, ಬಸವರಾಜ ಕನ್ಯಾಳ, ಪರಶುರಾಮ ಅಂಬಲಿ, ಮಲ್ಲಪ್ಪ ಕಲಗುಡಿ, ಅಡಿವೆಪ್ಪ ಕನ್ನೂರ, ಬಸಪ್ಪ ಅಣ್ಣಿಗೇರಿ, ಈರಣ್ಣ ಬೋಳನವರ, ಮಲಕಾಜಪ್ಪ, ಶರಣಪ್ಪ ಹಳ್ಳಿ, ನಾಗರಾಜ ಜಾಮದಾರ, ಕಲ್ಲಪ್ಪ ಪಾಟೀಲ, ಯಲ್ಲಪ್ಪ ಹೂಗಾರ, ಪ್ರವೀಣ ಕನ್ನೂರ, ಚಂದು ಜಾಮದಾರ, ಈಶ್ವರಪ್ಪ ಕುಸ್ಲಾಪುರ, ಬಸಪ್ಪ ಛಬ್ಬಿ, ಈರಣ್ಣ ಕೊಟಗಿ ಸೇರಿದಂತೆ ಗ್ರಾಮದ ಮುಖಂಡರು, ಯುವಕರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ