ಸೆಪ್ಟೆಂಬರ್ 21ರಿಂದ 25ರ ವರೆಗೆ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿಭಟನೆ

KannadaprabhaNewsNetwork |  
Published : Sep 18, 2026, 02:15 AM IST
ಸೆ. 21 ರಿಂದ ನಡೆಯಲಿರುವ ಕಾಂಗೆಸ್ ಸರಕಾರದ ವಿರುದ್ದ ನಡೆಯಲಿರುವ ಪ್ರತಿಭಟನೆಯ ಪೂರ್ವಭಾವಿ ಸಬೆಯನ್ನು ಉದ್ದೇಶಿಸಿ ಬಿಜೆಪಿ ವಕ್ತಾರ ಜಗದೀಶ ನಾಯಕ ಮೊಗಟಾ ಮಾತನಾಡಿದರು. | Kannada Prabha

ಸಾರಾಂಶ

ಬಿಜೆಪಿ ಪ್ರಮುಖ ರಾಜೇಂದ್ರ ನಾಯ್ಕ ಮಾತನಾಡಿ, ರಿಯಲ್ ಎಸ್ಟೇಟ್ ಉದ್ಯಮದ ಮೂಲಕ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಮುಖ್ಯಮಂತ್ರಿಗಳು ಬಡವರ ಸಂಕಟವನ್ನು ಅರಿಯಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಅಂಕೋಲಾ: ಅಂಕೋಲಾ ಗ್ರಾಪಂ ವ್ಯಾಪ್ತಿಯಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳ ಭೂಮಿ ಹಾಗೂ ನಿವೇಶನಗಳಲ್ಲಿ ನಿಯಮಬಾಹಿರವಾಗಿ ನಿರ್ಮಿಸಲ್ಪಟ್ಟ ಕಟ್ಟಡ ಅಥವಾ ನಿವೇಶನಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಅವಕಾಶ ಇರುವುದಿಲ್ಲ ಎಂದು ಬಿಜೆಪಿ ವಕ್ತಾರ ಜಗದೀಶ ನಾಯಕ ಮೊಗಟಾ ಹೇಳಿದರು.

ಪಟ್ಟಣದ ಸೆ. 21ರಿಂದ ನಡೆಯಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಯಲಿರುವ ಪ್ರತಿಭಟನೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸೆ. 21ರಿಂದ 24ರ ವರೆಗೆ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಜನರ ಪರವಾಗಿ ಹೋರಾಟವನ್ನು ನಡೆಸಲಿದೆ ಎಂದರು.

ಸರ್ಕಾರಿ ಭೂಮಿ ಅರಣ್ಯ ಭೂಮಿ ಸರ್ಕಾರದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ಭೂಮಿಗಳಲ್ಲಿ ಈ ಹಿಂದಿನಿಂದಲೂ ವಾಸಿಸಿ ಗ್ರಾಪಂಗಳಿಗೆ ತೆರಿಗೆಯನ್ನು ಪಾವತಿಸುತ್ತಿರುವ ನಾಗರಿಕರಿಂದಲೂ ತೆರಿಗೆ ಪಡೆಯದೆ ಇರುವುದರಿಂದ ಆ ಆಸ್ತಿಗಳು ಅಕ್ರಮ ಆಸ್ತಿಗಳಾಗುವುದರಿಂದ ಸರ್ಕಾರದ ಯಾವ ಪ್ರಯೋಜನಗಳನ್ನು ಇಂತಹ ಫಲಾನುಭವಿಗಳು ಪಡೆಯಲಾರರು. ಸರ್ಕಾರ ಒಂದು ಕಡೆ ಬಡವರ ಕಣ್ಣೀರು ಒರೆಸುವ ಕೆಲಸವನ್ನು ಮಾಡಿದ ಹುನ್ನಾರ ಮಾಡಿ ಇನ್ನೊಂದೆಡೆ ಜನರನ್ನು ಒಕ್ಕಲಿಬ್ಬಿಸುವ ಕೆಲಸಕ್ಕೆ ಮುಂದಾಗಿದೆ ಎಂದರು.

ಬಿಜೆಪಿ ಪ್ರಮುಖ ರಾಜೇಂದ್ರ ನಾಯ್ಕ ಮಾತನಾಡಿ, ರಿಯಲ್ ಎಸ್ಟೇಟ್ ಉದ್ಯಮದ ಮೂಲಕ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಮುಖ್ಯಮಂತ್ರಿಗಳು ಬಡವರ ಸಂಕಟವನ್ನು ಅರಿಯಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಪ್ರಮುಖರಾದ ರಾಘು ಭಟ್ ಮಾತನಾಡಿ, ಈ ಸುತ್ತೋಲೆಯನ್ನು ನೋಡಿದ ತಕ್ಷಣ ಅತಿಕ್ರಮಣದ ಪರವಾಗಿ ಮತ್ತು ಅತಿಕ್ರಮಣದಾರದ ಪರವಾಗಿ ಹೋರಾಟ ಮತ್ತು ಹಾರಾಟಗಳನ್ನು ಮಾಡುತ್ತಿರುವವರು ಈ ವಿಚಾರದಲ್ಲಿ ಮಾತನಾಡದೆ ಇರುವ ಹುನ್ನಾರವೇನು ಎಂದು ಪ್ರಶ್ನಿಸಿದರು.

ಪ್ರಮುಖರಾದ ಸಂಜಯ್ ನಾಯಕ ಬಾವಿಕೇರಿ ಸ್ವಾಗತಿಸಿದರು. ಚಂದ್ರಕಾಂತ ನಾಯ್ಕ್ ವಂದಿಸಿದರು. ಪ್ರಮುಖರಾದ ಆರತಿ ಗೌಡ ಶ್ರೀಧರ್ ನಾಯ್ಕ, ಮಂಜುನಾಥ ಟಾಕೇಕರ್ ಪ್ರವೀಣ್ ನಾಯ್ಕ, ರಾಜೇಶ್ ನಾಯಕ್ ಮಂಕಾಳು ಗೌಡ ನಾರಾಯಣ ಹೆಗಡೆ, ಎಂ.ಎಂ. ಭಟ್, ರಾಘು ಹೆಗಡೆ, ಜಯಾ ನಾಯ್ಕ, ಅನುರಾಧಾ ನಾಯ್ಕ ಸುರೇಶ್ ನಾಯ್ಕ, ಸಂದೀಪ್ ಗಾಂವಕರ, ಮಂಗೇಶ್ ಆಗೇರ, ಜಗದೀಶ್ ತಾಂಡೆಲ್ ಹೊನ್ನಪ್ಪ ನಾಯಕ್ ಸುನಿಲ್ ನಾಯ್ಕ, ಪ್ರಜ್ವಲ್, ಸುನಿಲ್ ಸೇರಿದಂತೆ ಬಿಜೆಪಿಯ ಕಾರ್ಯಕರ್ತರುಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನರ ಅಲೆದಾಟ ತಪ್ಪಿಸಲು ಪ್ರಜಾಸೇವೆ ಆಂದೋಲನ: ಶಾಸಕ ಆರ್.ವಿ. ದೇಶಪಾಂಡೆ
ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಆತ್ಮಾವಲೋಕನ ಅಗತ್ಯ