ಆನಂದೂರಿನ ಜಯಣ್ಣಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ

KannadaprabhaNewsNetwork |  
Published : Jul 12, 2026, 03:00 AM IST
10ಎಚ್ಎಸ್ಎನ್10 : ರಾಮನಾಥಪುರ ಹೋಬಳಿ ಅನಂದೂರು ಗ್ರಾಮದ ಕಲಾವಿದ ಜಯಣ್ಣ ಅವರಿಗೆ ಕರ್ನಾಟಕ ಸಾಧಕ ಪ್ರಶಸ್ತಿ ನೀಡಿರುವುದು.  | Kannada Prabha

ಸಾರಾಂಶ

ರಾಮನಾಥಪುರ: ಹೋಬಳಿಯ ಅನಂದೂರು ಗ್ರಾಮದ ರಂಗ ಕಲಾವಿದರಾದ ಎ. ಆರ್‌. ಜಯಣ್ಣ ಅವರಿಗೆ ಬೆಂಗಳೂರು ಕಲಾಕ್ಷೇತ್ರದ ಪ್ರಸಿದ್ಧ ಚಿತ್ರಸಂತೆ ವೇದಿಕೆ ವತಿಯಿಂದ ಕರ್ನಾಟಕ ಸಾಧಕ ಪ್ರಶಸ್ತಿ ನೀಡಿದ್ದಾರೆ. ರಾಮನಾಥಪುರ ಹೋಬಳಿಯ ಆನಂದೂರು ಗ್ರಾಮದಲ್ಲಿ ರಾಮಶೆಟ್ಟಿ ಮತ್ತು ಮರಿಯಮ್ಮ ಇವರ ಸುಪುತ್ರರಾದ ಜಯಣ್ಣ ಎ . ಆರ್‌ ಅವರು ಗ್ರಾಮೀಣ ಪ್ರದೇಶದಲ್ಲಿ ಜನಿಸಿ ಬಹುತೇಕ ಕಲಾರಂಗಭೂಮಿಯಲ್ಲಿ ಕಲೆಯೇ ಜೀವನದ ಅಂತಿಮ ಎಂದು ಬದುಕನ್ನು ಕಟ್ಟಿದ ಒಬ್ಬ ಮಹಾನ್ ಕಲಾವಿದರಾದ ಇವರು ಪೌರಾಣಿಕ ನಾಟಕಗಳಲ್ಲಿ ನಿರ್ದೇಶಕರಾಗಿ 60ಕ್ಕೂ ಹೆಚ್ಚು ನಾಟಕ ಪ್ರದರ್ಶನವನ್ನು ಮಂಡಿಸಿದ್ದಾರೆ.

ರಾಮನಾಥಪುರ: ಹೋಬಳಿಯ ಅನಂದೂರು ಗ್ರಾಮದ ರಂಗ ಕಲಾವಿದರಾದ ಎ. ಆರ್‌. ಜಯಣ್ಣ ಅವರಿಗೆ ಬೆಂಗಳೂರು ಕಲಾಕ್ಷೇತ್ರದ ಪ್ರಸಿದ್ಧ ಚಿತ್ರಸಂತೆ ವೇದಿಕೆ ವತಿಯಿಂದ ಕರ್ನಾಟಕ ಸಾಧಕ ಪ್ರಶಸ್ತಿ ನೀಡಿದ್ದಾರೆ. ರಾಮನಾಥಪುರ ಹೋಬಳಿಯ ಆನಂದೂರು ಗ್ರಾಮದಲ್ಲಿ ರಾಮಶೆಟ್ಟಿ ಮತ್ತು ಮರಿಯಮ್ಮ ಇವರ ಸುಪುತ್ರರಾದ ಜಯಣ್ಣ ಎ . ಆರ್‌ ಅವರು ಗ್ರಾಮೀಣ ಪ್ರದೇಶದಲ್ಲಿ ಜನಿಸಿ ಬಹುತೇಕ ಕಲಾರಂಗಭೂಮಿಯಲ್ಲಿ ಕಲೆಯೇ ಜೀವನದ ಅಂತಿಮ ಎಂದು ಬದುಕನ್ನು ಕಟ್ಟಿದ ಒಬ್ಬ ಮಹಾನ್ ಕಲಾವಿದರಾದ ಇವರು ಪೌರಾಣಿಕ ನಾಟಕಗಳಲ್ಲಿ ನಿರ್ದೇಶಕರಾಗಿ 60ಕ್ಕೂ ಹೆಚ್ಚು ನಾಟಕ ಪ್ರದರ್ಶನವನ್ನು ಮಂಡಿಸಿದ್ದಾರೆ. ಇವರ ಕಲೆಯ ಬಗ್ಗೆ ಆಸಕ್ತಿ ಮತ್ತು ಅಭಿಮಾನವನ್ನು ಗುರುತಿಸಿ ಬೆಂಗಳೂರಿನ ಕಲಾಕ್ಷೇತ್ರದ ಅಧೀನದಲ್ಲಿರುವ ಪ್ರಸಿದ್ಧ ‘ಚಿತ್ರಸಂತೆ’ ಎಂಬ ವೇದಿಕೆಯಲ್ಲಿ ಇವರಿಗೆ ‘ಕರ್ನಾಟಕ ಸಾಧಕ ಪ್ರಶಸ್ತಿ’ ಮತ್ತು‘ ಹೆಮ್ಮೆಯ ಕನ್ನಡಿಗ’ ಎಂದು ಜಯಣ್ಣ ಎ ಆರ್ ಆನಂದೂರು, ನಿರ್ದೇಶಕರು (ಡ್ರಾಮ ಮಾಸ್ಟರ್‌) ಎಂದು ಈ ವೇದಿಕೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೋಕ್ ಅದಾಲತ್; ಅತ್ಯಂತ ವೇಗದ ಶಾಶ್ವತ ಪರಿಹಾರ: ನ್ಯಾಯಾಧೀಶ ಸಿದ್ದಲಿಂಗ ಪ್ರಭು
ಜನರಿಗೆ ಕಲಾಭವನ ಮುಕ್ತ ಮಾಡಲು ಹೋರಾಟ ಸಮಿತಿ