ಸವಿತಾ ಸಮಾಜದ ಮಕ್ಕಳು ಶಿಕ್ಷಣದಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆ-ಪಠಾಣ

KannadaprabhaNewsNetwork |  
Published : Feb 04, 2026, 02:30 AM IST
ಸವಣೂರಿನಲ್ಲಿ ಸವಿತಾ ಮಹರ್ಷಿಗಳ ಜಯಂತ್ಯುತ್ಸವ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ಮಕ್ಬೂಲ್ ಅಹ್ಮದ ಪಠಾಣ ಉದ್ಘಾಟಿಸಿದರು. | Kannada Prabha

ಸಾರಾಂಶ

ಸವಿತಾ ಸಮಾಜದ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಮಕ್ಬೂಲ್ ಅಹ್ಮದ ಪಠಾಣ ಹೇಳಿದರು.

ಸವಣೂರು: ಸವಿತಾ ಸಮಾಜದ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಮಕ್ಬೂಲ್ ಅಹ್ಮದ ಪಠಾಣ ಹೇಳಿದರು.ಪಟ್ಟಣದ ಡಾ.ವಿ.ಕೃ. ಗೋಕಾಕ ಸಾಂಸ್ಕೃತಿಕ ಭವನದಲ್ಲಿ ತಾಲೂಕು ಆಡಳಿತ ಹಾಗೂ ಜಿಲ್ಲಾ ಹಾಗೂ ತಾಲೂಕು ಸವಿತಾ ಸಮಾಜ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ ಸವಿತಾ ಮಹರ್ಷಿಗಳ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಈ ಹಿಂದೆ ತಾಲೂಕುಗಳಲ್ಲಿ ಸಣ್ಣ-ಸಣ್ಣ ಸಮಾಜದ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ದೊರಕುತ್ತಿರಲಿಲ್ಲ. ದೊಡ್ಡ ಸಮಾಜದ ಮಕ್ಕಳೇ ಶೈಕ್ಷಣಿಕ ರಂಗದಲ್ಲಿ ಮುನ್ನಡೆಯಲ್ಲಿದ್ದರು. ಆದರೆ ಇಂದಿನ ದಿನಗಳಲ್ಲಿ ಸಣ್ಣ ಸಮಾಜಗಳ ಮಕ್ಕಳಲ್ಲಿಯೂ ಓದುವ ಆಸಕ್ತಿ, ಶಕ್ತಿ ಮತ್ತು ಸಾಧನೆಯ ಮನೋಭಾವ ಹೆಚ್ಚಾಗಿದೆ. ಮನಸ್ಸು ಮಾಡಿದರೆ ಯಾವುದೇ ಮಗು ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬಹುದು ಎಂಬುದಕ್ಕೆ ಸವಿತಾ ಸಮಾಜದ ಮಕ್ಕಳು ಜೀವಂತ ಮಾದರಿಯಾಗಿದ್ದಾರೆ ಎಂದು ಪ್ರಶಂಸಿಸಿದರು.ಸವಿತಾ ಸಮಾಜದ ಬಂಧುಗಳ ಮನವಿ ಹಿನ್ನೆಲೆಯಲ್ಲಿ, ಶಾಸಕರು ನೀಡಿದ್ದ ಭರವಸೆಯಂತೆ ತಾಯಿ ಜಮಲಮ್ಮ ದೇವಿ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕಾಗಿ 25 ಲಕ್ಷ ರು. ಅನುದಾನ ಮಂಜೂರು ಮಾಡಲಾಗಿದೆ. ಅತಿ ಶೀಘ್ರದಲ್ಲೇ ಶಾಸಕರು ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ. ಸವಣೂರು ಪಟ್ಟಣದ ಅನೇಕ ಸಣ್ಣ ಸಮುದಾಯಗಳ ಋಣ ಶಾಸಕರ ಮೇಲಿದೆ. ಆ ಋಣವನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂಬ ಭರವಸೆಯನ್ನೂ ಅವರು ವ್ಯಕ್ತಪಡಿಸಿದರು.

ತಹಸೀಲ್ದಾರ ರವಿಕುಮಾರ್ ಕೊರವರ, ಪಂಚ ಗ್ಯಾರಂಟಿ ಅಧ್ಯಕ್ಷ ಸುಭಾಸ್ ಮಜ್ಜಗಿ, ಸವಿತಾ ಸಮಾಜದ ಕುರಿತು ಮಾತನಾಡಿದರು. ತಾಲೂಕು ಅಧ್ಯಕ್ಷ ಏಕನಾಥ ಭಜಂತ್ರಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕತ್ತೆಪಲ್ಲಿಯ ಶಿಕ್ಷಕಿ ಕಾವ್ಯಾ ಪ್ರಸಾದ ಸವಿತಾ ಮಹರ್ಷಿಗಳ ಕುರಿತು ಉಪನ್ಯಾಸ ನೀಡಿದರು.ಸವಿತಾ ಸಮಾಜ ಸಂಘದ ಜಿಲ್ಲಾಧ್ಯಕ್ಷ ಗುರುರಾಜ.ಕೆ ಸಂಘ ನಡೆದು ಬಂದ ದಾರಿ ಹಾಗೂ ಸಮಾಜ ಸಂಘಟನೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ಸಮಾರಂಭದನ್ವಯ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಹಾಗೂ ಪದವಿಯಲ್ಲಿ ಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಹಾಗೂ ಹಿರಿಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಮಲಮ್ಮದೇವಿ ದೇವಸ್ಥಾನ ಕಮಿಟಿ ಆಧ್ಯಕ್ಷ ಮಿನ್ನಲಪ್ಪ ಆರ್. ಕರ್ನೂಲ್, ಸವಿತಾ ಸಮಾಜ ಸಂಘದ ಗದಗ ಜಿಲ್ಲಾಧ್ಯಕ್ಷ ಕೃಷ್ಣ ಹಡಪದ, ಧಾರವಾಡ ಜಿಲ್ಲಾಧ್ಯಕ್ಷ ಕೃಷ್ಣ ಉಪ್ಪೇರ, ಹುಬ್ಬಳ್ಳಿ ನಗರದ ಅಧ್ಯಕ್ಷ ಪಾಂಡುರಂಗ ಬಿ. ಮುಷ್ಟಿಪಲ್ಲಿ, ಹಾವೇರಿ ಜಿಲ್ಲೆಯ ಪದಾಧಿಕಾರಿಗಳಾದ ಎಲ್ಲಪ್ಪ ಜಿ. ಸುಗೂರ, ಕೃಷ್ಣ ವೆಲ್ಕೂರ, ಹಾವೇರಿ ತಾಲೂಕಾಧ್ಯಕ್ಷ ಪ್ರಸಾದ ಜಿ. ಕತ್ತೆಪಲ್ಲಿ, ಬ್ಯಾಡಗಿ ತಾಲೂಕಾಧ್ಯಕ್ಷ ಸೋಮಣ್ಣ ಕರ್ನೂಲ್, ರಾಣಿಬೆನ್ನೂರು ತಾಲೂಕಾಧ್ಯಕ್ಷ ನಾಗರಾಜ್ ಬಿ. ರಾಯಚೂರ, ರಟ್ಟಿಹಳ್ಳಿ ತಾಲೂಕಾಧ್ಯಕ್ಷ ಶ್ರೀನಿವಾಸ್ ಜಿ. ವಲ್ಲೂರ, ಸವಣೂರ ಗೌರವಾಧ್ಯಕ್ಷ ನರಸಪ್ಪ ವಿ. ಪುಡೂರ ಇದ್ದರು.

ವಿಶೇಷ ಮೆರವಣಿಗೆ: ಸವಿತಾ ಮಹರ್ಷಿಗಳವರ ಜಯಂತ್ಯುತ್ಸವದ ಪ್ರಯುಕ್ತ ವಿವಿಧ ವಾದ್ಯ ವೈಭವಗಳೊಂದಿಗೆ ಸವಿತಾ ಮಹರ್ಷಿಗಳವರ ಭಾವಚಿತ್ರವನ್ನು ವಿಶೇಷವಾಗಿ ಅಲಂಕರಿಸಿದ ಸಾರೊಟದಲ್ಲಿ ಪ್ರತಿಷ್ಠಾಪಿಸಿ ಭವ್ಯ ಮೆರವಣಿಗೆ ಕೈಗೊಳ್ಳಲಾಯಿತು. ಪಟ್ಟಣದ ಭರಮಲಿಂಗೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣಿಗೆಗೆ ತಹಶೀಲ್ದಾರ ರವಿಕುಮಾರ್ ಕೊರವರ ಅವರು ಚಾಲನೆ ನೀಡಿದರು. ಮುಖ್ಯ ಮಾರುಕಟ್ಟೆ ರಸ್ತೆ, ಸಿಂಪಿಗಲ್ಲಿ ಮಾರ್ಗವಾಗಿ ಹಳೆ ಕೋರ್ಟ್ ವೃತ್ತದಿಂದ ಹೊರಟ ಭವಯ ಮೆರವಣಿಗೆ ವಿ.ಕೃ ಗೋಕಾಕ ಭವನಕ್ಕೆ ಸಮಾರೋಪಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌