ಪ್ರತಿ ರೈತರಿಗೆ ₹ 50 ಸಾವಿರ ಪರಿಹಾರ ನೀಡಿ

KannadaprabhaNewsNetwork |  
Published : Nov 29, 2026, 02:30 AM IST
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರಗೆ ಮನವಿ ಸಲ್ಲಿಸಿದ ರೈತ ಮುಖಂಡರು. | Kannada Prabha

ಸಾರಾಂಶ

ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಪ್ರತಿ ರೈತರಿಗೆ ₹ 50 ಸಾವಿರ ಪರಿಹಾರ ನೀಡಬೇಕು.

ಹುಬ್ಬಳ್ಳಿ:

ರೈತರಿಗೆ ಬರಪರಿಹಾರ ನೀಡಬೇಕು. ಫಸಲ್‌ ಬಿಮಾ ಯೋಜನೆಯ ವಿಮಾ ಹಣ ಬಿಡುಗಡೆ ಮಾಡಬೇಕು. ಪ್ರತಿ ತಾಲೂಕಿನಲ್ಲಿ ಮೇವು ಬ್ಯಾಂಕ್‌ ತೆರೆಯಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ರತ್ನ ಭಾರತ ರೈತ ಸಮಾಜವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದೆ.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಭೇಟಿಯಾದ ರೈತರ ನಿಯೋಗವೂ, ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಪ್ರತಿ ರೈತರಿಗೆ ₹ 50 ಸಾವಿರ ಪರಿಹಾರ ನೀಡಬೇಕು. ಕೇವಲ ₹ 2500 ಕೊಟ್ಟರೆ ಏನಿದರ್ಥ? ಎಂದು ಪ್ರಶ್ನಿಸಿದ ನಿಯೋಗವು, ರೈತರು ತುಂಬಿದ ಫಸಲ್‌ ಬಿಮಾ ಯೋಜನೆಯ ರಾಜ್ಯ ಸರ್ಕಾರದ ಪಾಲಿನ ₹ 1680 ಕೋಟಿ ಪ್ರೀಮಿಯಮ್ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಿ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು.

ಮಳೆ ಕೊರತೆಯಿಂದ ಜಾನುವಾರುಗಳಿಗೆ ಮೇವಿನ ಸಮಸ್ಯೆಯೂ ಎದುರಾಗಿದ್ದು ಪ್ರತಿ ತಾಲೂಕಿನ ಹೋಬಳಿ ಮಟ್ಟದಲ್ಲಿ "ಮೇವು ಬ್ಯಾಂಕ್ " ತೆರೆಯಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು. ಬೆಳೆ ಸಾಲ ಪಾವತಿಸುವಂತೆ ಬ್ಯಾಂಕಿನವರ ರೈತರಿಗೆ ನೋಟಿಸ್‌ ನೀಡಬಾರದು. ಕೂಡಲೇ ರೈತರ ಸಂಪೂರ್ಣ ಬೆಳೆ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ. ತಮ್ಮದು ರೈತಪರ ಸರ್ಕಾರ. ರೈತರಿಗೆ ಅನುಕೂಲವಾಗುವಂತೆ ಕ್ರಮಕೈಗೊಳ್ಳಲಿದ್ದು ನಿಮ್ಮೊಂದಿಗೆ ಇದ್ದೇವೆಂದು ಭರವಸೆ ನೀಡಿದರು.

ಮನವಿ ಸಲ್ಲಿಕೆ ವೇಳೆ ರತ್ನ ಭಾರತ ರೈತ ಸಮಾಜದ ಉಪಾಧ್ಯಕ್ಷ ಹೇಮನಗೌಡ ಬಸನಗೌಡ್ರ, ಸಿ.ಎಂ. ಕಟಗಿ, ಶಂಕರಗೌಡ ನಿಜಲಿಂಗನಗೌಡ್ರ, ರವೀಂದ್ರ ಶಿವಳ್ಳಿ, ಮೋದಿನ ಕಿಲ್ಲೆದಾರ, ರಾಜು ಮಲ್ಲಿಗವಾಡ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅವಕಾಶವನ್ನು ಬಳಸಿಕೊಳ್ಳುವ ಚಾಕಚಕ್ಯತೆ ವಿದ್ಯಾರ್ಥಿಗಳಲ್ಲಿರಬೇಕು: ಕ್ಯಾ. ಚೌಟ
ಆನೆ ದಾಳಿ ಸಮಸ್ಯೆ: ರಾಮಲಿಂಗ ರೆಡ್ಡಿ ಜೊತೆ ಕೋಟ ಚರ್ಚೆ