ಶೇಂಗಾ ಬೆಳೆ ಹಾನಿಗೆ ಪರಿಹಾರ ನೀಡಿ

KannadaprabhaNewsNetwork |  
Published : Aug 12, 2024, 12:46 AM IST
ಫೋಟೋ 11ಪಿವಿಡಿ3.11ಪಿವಿಡಿ4ಪಾವಗಡ,ಕಾಡಂದಿಗಳ ದಾಳಿಯಿಂದ 3ಎಕರೆ ಜಮೀನಿನಲ್ಲಿ ಶೇಂಗಾ ಬೆಳೆ ಪೂರಾ ನಷ್ಟ,ಎಕರೆಗೆ 50ರಿಂದ 1ಲಕ್ಷ ಪರಿಹಾರ ಕಲ್ಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಒತ್ತಾಯ | Kannada Prabha

ಸಾರಾಂಶ

ಶೇಂಗಾ ಬೆಳೆ ಹಾನಿಗೆ ಪರಿಹಾರ ನೀಡಿ

ಕನ್ನಡಪ್ರಭ ವಾರ್ತೆ ಪಾವಗಡ

ಕಾಡು ಪ್ರಾಣಿಗಳ ದಾಳಿಯಿಂದ ಶೇಂಗಾ ಹಾನಿಯಾಗಿದ್ದು, ರೈತನಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ದೊಡ್ಡಹಟ್ಟಿ ಪೂಜಾರಪ್ಪ ಒತ್ತಾಯಿಸಿದರು.ತಾಲೂಕಿನ ಕಸಬಾ ವ್ಯಾಪ್ತಿಯ ಗುಂಡ್ಲಹಳ್ಳಿ ಗ್ರಾಮದ ಸರ್ವೇ ನಂ.105ರಲ್ಲಿ 5 ಎಕರೆ ಜಮೀನಿದ್ದು, ವ್ಯವಸಾಯದ ಸಲುವಾಗಿ ಎಕರೆಗೆ 40 ಸಾವಿರ ಖರ್ಚು ಮಾಡಿ ಮೂರು ಕ್ವಿಂಟಾಲ್‌ ಶೇಂಗಾ ಬೀಜ ಬಿತ್ತನೆ ಮಾಡಲಾಗಿತ್ತು. ಬೆಳೆ ಫಸಲಿಗೆ ಬರುವ ಹಂತದಲ್ಲಿತ್ತು. ಮೂರು ಎಕರೆ ಜಮೀನಿನಲ್ಲಿ ಆ.10ರಂದು ರಾತ್ರಿ ನಾಲ್ಕೈದು ಕಾಡುಹಂದಿಗಳ ಗುಂಪು ಜಮೀನಿಗೆ ಲಗ್ಗೆಯಿಟ್ಟು ನೆಲೆಗಡಲೆ ಕಿತ್ತೆಸೆದು ಹಾನಿ ಮಾಡಿವೆ. ಇದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದರು.

ರೈತ ಮುಖಂಡರಾದ ಸದಾಶಿವಪ್ಪ, ಈರಣ್ಣ, ಹನುಮಂತಪ್ಪ ಡಂಡೋಪಾಳ್ಯದ ರಾಮಾಂಜಿನಪ್ಪ, ಕರಿಯಪ್ಪ ರಾಮಾಂಜಿನೇಯ, ನರಸಿಂಹಪ್ಪ, ಜಿ.ಹನುಮಂತರಾಯ, ನಾಗರಾಜಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ 25 ಪುಸ್ತಕಗಳ ಲೋಕಾರ್ಪಣೆ, ಬೆರಗು ಪ್ರಶಸ್ತಿ ಪ್ರದಾನ
ಯಶಸ್ಸು ನೆತ್ತಿಗೆರಬಾರದು