ಗ್ರಾಮೀಣ ಭಾಗದಲ್ಲಿ ಎಐ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡಿ: ಜ್ಯೋತಿ ಮಹಿಪಾಲ್

KannadaprabhaNewsNetwork |  
Published : Jul 18, 2025, 12:45 AM IST
16ಎಚ್‌ಪಿಟಿ3- ಹೊಸಪೇಟೆಯ ಪ್ರಿಯದರ್ಶಿನಿ ಪ್ರೈಡ್ ನಲ್ಲಿ ಬುಧವಾರ ಇನ್ನರ್ ವೀಲ್  316ರ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ರಾಷ್ಟ್ರೀಯ ಅಧ್ಯಕ್ಷೆ ಜ್ಯೋತಿ ಮಹಿಪಾಲ್ ಚಾಲನೆ ನೀಡಿದರು. | Kannada Prabha

ಸಾರಾಂಶ

ಗ್ರಾಮೀಣ ಭಾಗದಲ್ಲಿ ಎಐ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡುವ ಮೂಲಕ ಪ್ರತಿ ಶಾಲೆಯನ್ನು ಹ್ಯಾಪಿ ಶಾಲೆಯನ್ನಾಗಿ ಮಾಡಬೇಕು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಗ್ರಾಮೀಣ ಭಾಗದಲ್ಲಿ ಎಐ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡುವ ಮೂಲಕ ಪ್ರತಿ ಶಾಲೆಯನ್ನು ಹ್ಯಾಪಿ ಶಾಲೆಯನ್ನಾಗಿ ಮಾಡಬೇಕು ಎಂದು ಇನ್ನರ್ ವೀಲ್‌ನ ರಾಷ್ಟ್ರೀಯ ಅಧ್ಯಕ್ಷೆ ಜ್ಯೋತಿ ಮಹಿಪಾಲ್ ಹೇಳಿದರು.

ನಗರದ ಪ್ರಿಯದರ್ಶಿನಿ ಪ್ರೈಡ್ ನಲ್ಲಿ ಇನ್ನರ್ ವೀಲ್ 316ರ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರು ಆರೋಗ್ಯ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಬೇಕು. ಇದರೊಂದಿಗೆ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಹೆಚ್ಚಿನ ಕಾಳಜಿ ವಹಿಸುವ ಅಗತ್ಯ ಇದೆ. ಬಡ ಮಕ್ಕಳಿಗೆ ಶಿಕ್ಷಣ ನೀಡಿ, ಹೊಸ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು, ನಾವು ಸಮಾಜದಿಂದ ಏನು ಪಡೆದೆವು ಎಂಬುದಕ್ಕಿಂತ ಏನು ಕೊಡುಗೆ ನೀಡಿದ್ದೇವೆ ಎಂಬುದು ಮುಖ್ಯವಾಗಿದೆ. ಎಲ್ಲರನ್ನೂ ವಿಶ್ವಾಸದಿಂದ ಕೊಂಡೊಯ್ಯವುದೇ ನಾಯಕತ್ವ ಆಗಿದೆ. ಇದನ್ನು ಮನಗಂಡು, ಉತ್ತಮ ಕೆಲಸ ಮಾಡಿದಾಗ ಸಾರ್ವಜನಿಕವಾಗಿ ಹೊಗಳಿ ಪ್ರೋತ್ಸಾಹಿಸಬೇಕು ಎಂದರು.

ಇನ್ನರ್ ವೀಲ್ ಡಿಸ್ಟ್ರಿಕ್ಟ್ 316ರ ನಿಕಟಪೂರ್ವ ಅಧ್ಯಕ್ಷೆ ಸುಷ್ಮಾ ಪತಂಗೆ ನೂತನ ಅಧ್ಯಕ್ಷೆ ಜಯಶ್ರೀ ರಾಜಗೋಪಾಲ್ ಗೆ ಅಧಿಕಾರ ಹಸ್ತಾಂತರಿಸಿದರು. ಅಧಿಕಾರ ಸ್ವೀಕರಿಸಿದ ಜಯಶ್ರೀ ಮಾತನಾಡಿ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕಿದೆ. ಸುಂದರ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಹಿಳಾ ಸಬಲೀಕರಣ, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಉತ್ತೇಜನಕ್ಕೆ ಶ್ರಮಿಸುವೆ ಎಂದರು.

ಜಿಲ್ಲಾ ಸಮಿತಿ:

ಜಯಶ್ರೀ ರಾಜಗೋಪಾಲ್ (ಅಧ್ಯಕ್ಷೆ), ಮಂಜುಳಾ ಮುಲ್ಗಿ (ಉಪಾಧ್ಯಕ್ಷೆ), ಶೋಭಾ ಗೌಡರ್ (ಕಾರ್ಯದರ್ಶಿ), ಡಾ. ಪಾರ್ವತಿ (ಇಎಸ್ಒ), ಡಾ. ಜ್ಯೋತಿ ತೆಗಡೂರು (ಖಜಾಂಚಿ), ಡಾ. ಶ್ವೇತಾ ರೆಡ್ಡಿ (ಎಡಿಟರ್) ಡಾ. ಮಾಧವಿ ದೇವಿ ಸೇರಿದಂತೆ ಇತರರು ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭ ರೋಟರಿ ಗವರ್ನರ್ ರವೀಂದ್ರನಾಥ್, ಮಾಜಿ ಗವರ್ನರ್ ಗಳಾದ ಗೋಪಿನಾಥ್, ತಿರುಪತಿ ನಾಯ್ಡು, ಚಿತ್ರಾದೇವಿ ಬಲ್ಡೋಡಾ, ಯಶೋಧರಾ ದೇವಿ ಘೋರ್ಪಡೆ, ರತ್ನಶ್ರೀ ಕೆ. ರಾಯ, ಮಾಜಿ ಜಿಲ್ಲಾಧ್ಯಕ್ಷರಾದ ಗೀತಾ, ಸವಿತಾ ಶಿವಕುಮಾರ್, ಜ್ಯೋತಿ, ಜಯತ್ರೀ ಛೇರ್ಮನ್ ಮೇಘನಾ ಹಿರೇಮಠ, ಕ್ಲಬ್ ಅಧ್ಯಕ್ಷೆ ನೈಮಿಷಾ, ಹಿರಿಯ ಸದಸ್ಯರು ಇತರರಿದ್ದರು.

PREV

Latest Stories

ಧರ್ಮಸ್ಥಳ ಗ್ರಾಮ ಕೇಸ್‌: ಇಬ್ಬರು ಐಪಿಎಸ್‌ಗಳು ಎಸ್‌ಐಟಿಯಿಂದ ಔಟ್‌?
ಡಿಕೆಶಿಗೆ ಅಪಮಾನ ಮಾಡುವುದಕ್ಕೆ ಸಿಎಂ ಸಿದ್ದು ಸಮಾವೇಶ: ಅಶೋಕ
ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ