ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಸೌಲಭ್ಯ ಕಲ್ಪಿಸಿ: ಭೀಮಪ್ಪ ಲಾಳಿ

KannadaprabhaNewsNetwork |  
Published : Apr 19, 2025, 12:31 AM IST
ಫೋಟೋವಿವರ- (18ಎಂಎಂಎಚ್‌1) ಮರಿಯಮ್ಮನಹಳ್ಳಿ ಸಮೀಪದ ಡಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ವ್ಯಾಸನಕೆರೆ ಗ್ರಾಮದ ಕೆರೆಯಲ್ಲಿ ನರೇಗಾ ಕೂಲಿ ಕಾರ್ಮಿಕರ ಜಾಬ್‌ ಕಾರ್ಡ್ ಪರಿಷ್ಕರಣ ಅಭಿಮಾನ ಕಾರ್ಯಕ್ರಮದಲ್ಲಿ ಜಿ.ಪಂ. ಉಪಕಾರ್ಯದರ್ಶಿ ಭೀಮಪ್ಪಲಾಳಿ ಮಾತನಾಡಿದರು | Kannada Prabha

ಸಾರಾಂಶ

ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜಾಬ್ ಕಾರ್ಡಗಳ ಪರಿಷ್ಕರಣೆ ಅಭಿಯಾನ ಕೈಗೊಳ್ಳಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ, ನರೇಗಾ ಸಿಬ್ಬಂದಿ ಮತ್ತು ಕಾಯಕ ಬಂಧುಗಳಿಗೆ ಸೂಚಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ

ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜಾಬ್ ಕಾರ್ಡಗಳ ಪರಿಷ್ಕರಣೆ ಅಭಿಯಾನ ಕೈಗೊಳ್ಳಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ, ನರೇಗಾ ಸಿಬ್ಬಂದಿ ಮತ್ತು ಕಾಯಕ ಬಂಧುಗಳಿಗೆ ಸೂಚಿಸಲಾಗಿದೆ ಎಂದು ಜಿಪಂ ಉಪಕಾರ್ಯದರ್ಶಿ ಭೀಮಪ್ಪ ಲಾಳಿ ತಿಳಿಸಿದರು.

ಇಲ್ಲಿಗೆ ಸಮೀಪದ ಡಣಾಪುರ ಗ್ರಾಪಂ ವ್ಯಾಪ್ತಿಯ ವ್ಯಾಸನಕೆರೆ ಗ್ರಾಮದ ಕೆರೆಯಲ್ಲಿ ನರೇಗಾ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಕುಡಿಯುವ ನೀರು, ನೆರಳು ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಕಾಮಗಾರಿ ಸ್ಥಳಗಳಲ್ಲಿ ನಿರಂತರವಾಗಿರಬೇಕು. ನರೇಗಾ ಜಾಬ್ ಕಾರ್ಡ್‌ ಪರಿಷ್ಕರಣೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜಾಬ್ ಕಾರ್ಡಗಳ ಪರಿಷ್ಕರಣೆ ಅಭಿಯಾನ ಕೈಗೊಳ್ಳಲು ಈಗಾಗಲೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ, ನರೇಗಾ ಸಿಬ್ಬಂದಿ ಮತ್ತು ಕಾಯಕ ಬಂಧುಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ನರೇಗಾ ಕಾಮಗಾರಿ ಸ್ಥಳದಲ್ಲಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದ್ದು, ಇದರ ಸದುಪಯೋಗವನ್ನು ಡಣಾಪುರ ನರೇಗಾ ಕೂಲಿ ಕಾರ್ಮಿಕರು ಪಡೆದುಕೊಳ್ಳಲು ಮುಂದಾಗಬೇಕು. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಂದರು.ಆರೋಗ್ಯ ಅಭಿಯಾನದಲ್ಲಿ 170 ನರೇಗಾ ಕೂಲಿ ಕಾರ್ಮಿಕರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಎಚ್ ಪಿಗಳನ್ನು ಪರೀಕ್ಷೆನಡೆಸಿ ಔಷಧಿ ವಿತರಿಸಲಾಯಿತು.

ಈ ಸಂದರ್ಭ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿಕಾಂತ್, ಸಹಾಯಕ ನಿರ್ದೇಶಕಿ ಶಮಿಮ್ ಬಾನು (ಗ್ರಾ.ಉ). ಎಡಿಪಿಸಿಗಳಾದ ಬಸವರಾಜ್, ತಾಂತ್ರಿಕ ಸಂಯೋಜಕ ಶ್ರೀಕಾಂತ್ ಸಂಯೋಜಕ ಎಚ್. ನಾಗರಾಜ, ತಾಂತ್ರಿಕ ಸಹಾಯಕ ಅನಂದ್ ಕುಮಾರ್, ಡಾ. ಮಂಜುಳ ವಿಶಾಲಾಕ್ಷಿ, ಪಿಡಿಓಗಳಾದ ಮನ್ಸೂರ್, ಗಂಗಾಧರ, ಹನುಮಂತಪ್ಪ, ವಾಸುಕಿ, ಕಾರ್ಯದರ್ಶಿಗಳಾದ ಕನಕಪ್ಪ, ನಾಗರಾಜ, ಆರೋಗ್ಯ ಇಲಾಖೆಯ ಸಿಬ್ಬಂದಿ, ಗ್ರಾಪಂ ಸಿಬ್ಬಂದಿ, ಕೂಲಿ ಕಾರ್ಮಿಕರು, ಕಾಯಕ ಬಂಧುಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು