ಬೆಳೆ ವಿಮೆ ವಂಚಿತರಿಗೆ ಕೂಡಲೇ ನ್ಯಾಯಯುತ ಪರಿಹಾರ ನೀಡಿ

KannadaprabhaNewsNetwork |  
Published : Nov 14, 2026, 01:30 AM IST
ಫೊಟೊ 13 ಟಿಟಿಎಚ್ 01: ಬೆಳೆ ವಿಮೆಯಿಂದ ವಂಚಿತರಾಗಿರುವ ರೈತರಿಗೆ ಕೂಡಲೇ ನ್ಯಾಯಯುತ ಪರಿಹಾರವನ್ನು ಒದಗಿಸುವಂತೆ ಆಗ್ರಹಿಸಿ ಆಗುಂಬೆ ಹೋಬಳಿ ಹೆಗ್ಗೋಡು ಗ್ರಾಮಪಂಚಾಯ್ತಿ ಎದುರು ರೈತರು ಪ್ರತಿಭಟನೆ ನಡೆಸಿ ರಾಜಸ್ವ ನಿರೀಕ್ಷಕ ಸುಧೀರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯ್ತು.  | Kannada Prabha

ಸಾರಾಂಶ

Provide fair compensation immediately to those deprived of crop insurance.

-ಹೆಗ್ಗೋಡು ಗ್ರಾಪಂ ಎದುರು ರೈತರ ಪ್ರತಿಭಟನೆ । ಕಂದಾಯ ಅಧಿಕಾರಿ ಮೂಲಕ ಡಿಸಿಗೆ ಮನವಿಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಬೆಳೆ ವಿಮೆಯಿಂದ ವಂಚಿತರಾದ ರೈತರಿಗೆ ಕೂಡಲೇ ನ್ಯಾಯಯುತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಆಗುಂಬೆ ಹೋಬಳಿ ಹೆಗ್ಗೋಡು ಗ್ರಾಮ ಪಂಚಾಯಿತಿ ಎದುರು ರೈತರು ಪ್ರತಿಭಟನೆ ನಡೆಸಿ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮುಖಂಡರು, ಪ್ರಕೃತಿ ವಿಕೋಪ, ಕಾಡು ಪ್ರಾಣಿಗಳ ಹಾವಳಿ ಮುಂತಾದ ಕಾರಣಗಳಿಂದ ತಾಲೂಕಿನ ರೈತರು ಅತ್ಯಂತ ಸಂಕಷ್ಟದ ಸ್ಥಿತಿಯನ್ನು ಎದುರಿಸುವಂತಾಗಿದೆ. ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಗಳು ನಾಶವಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅಧಿಕಾರಿಗಳು ರೈತರ ನೆರವಿಗೆ ಬಾರದೇ ನಿರ್ಲಕ್ಷ್ಯ ತೋರಿದ ಕಾರಣ ಹಾಗೂ ವಿಮಾ ಕಂಪನಿಗಳ ಬೇಜವಾಬ್ದಾರಿಯಿಂದ ಬೆಳೆ ವಿಮೆಯ ಪರಿಹಾರದ ವಿತರಣೆಯಲ್ಲಿ ರೈತರು ವಂಚಿತರಾಗಿದ್ದಾರೆ ಎಂದೂ ಆರೋಪಿಸಿದರು.

ಬೆಳೆ ವಿಮೆ ಹಂಚಿಕೆಯಲ್ಲಿ ತಾರತಮ್ಯ ನಡೆದಿದ್ದು ಅಕ್ಕಪಕ್ಕದ ಗ್ರಾಮಗಳಲ್ಲಿ ಭಾರಿ ಮೊತ್ತದ ವಂಚನೆ ನಡೆದಿದೆ.

ನಿಯಮದಂತೆ ವಿಮಾ ಕಂಪನಿಯ ಕಂತುಗಳನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಿದ್ದರೂ ಹಾನಿಯ ಪ್ರಮಾಣಕ್ಕೆ ತಕ್ಕಂತೆ ಪರಿಹಾರ ದೊರೆತಿಲ್ಲ. ಅನೇಕ ಗ್ರಾಪಂಗಳಲ್ಲಿ ರೈತರಿಗೆ ಅತ್ಯಂತ ನಗಣ್ಯ ಮೊತ್ತದ ಪರಿಹಾರ ಬಂದಿದ್ದು ರೈತರನ್ನು ವಂಚಿಸಲಾಗಿದೆ. ಇಂತಹ ಪ್ರಕರಣಗಳ ಪರಿಶೀಲನೆ ನಡೆಸಿ ಸೂಕ್ತವಾದ ಹೆಚ್ಚುವರಿ ಪರಿಹಾರವನ್ನು ನೀಡುವಂತೆಯೂ ಆಗ್ರಹಿಸಿದರು.

ಬೆಳೆ ವಿಮೆ ಮಾಹಿತಿ ಬಹಿರಂಗಪಡಿಸಿ: ಬೆಳೆ ವಿಮೆ ಲೆಕ್ಕಾಚಾರದ ಮಾಹಿತಿಯನ್ನು ಬಹಿರಂಗ ಪಡಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು, ಯಾವ ಆಧಾರದ ಮೇಲೆ ತಂತ್ರಜ್ಞಾನ ಅಥವಾ ಮಾನದಂಡ ಬಳಸಿ ಪರಿಹಾರ ನಿಗದಿಪಡಿಸಲಾಗಿದೆ. ಈ ಲೆಕ್ಕಾಚಾರದ ಪೂರ್ಣ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಪಡಿಸುವಂತೆಯೂ ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮಳೆ ಮಾಪನ ಕೇಂದ್ರಗಳ ವೈಫಲ್ಯದ ಪರಿಣಾಮ ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೀಡಾಗಿರುವ ರೈತರು ನಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ಜೊತೆಗೆ ವಿಮಾ ಕಂಪೆನಿಯವರೊಂದಿಗೆ ಮಾತನಾಡಿ ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದರು.

ಪ್ರತಿಭಟನೆಯಲ್ಲಿ ಸಸಿಗೊಳ್ಳಿ ರವೀಂದ್ರ, ಭಾರತೀಶ್, ಬಾಳೇಹಳ್ಳಿ ಪ್ರಭಾಕರ್, ಚಂದವಳ್ಳಿ ಸೋಮಶೇಕರ್, ಚಕ್ಕೋಡಬೈಲು ರಾಘವೇಂದ್ರ, ಮಳಲಿಕೊಪ್ಪ ಗುರು, ಚಕ್ಕೋಡಬೈಲು ಕೃಷ್ಣಮೂರ್ತಿ ಇದ್ದರು.

-----------------

ಫೊಟೊ 13 ಟಿಟಿಎಚ್ 01

ಬೆಳೆ ವಿಮೆಯಿಂದ ವಂಚಿತರಾಗಿರುವ ರೈತರಿಗೆ ಕೂಡಲೇ ನ್ಯಾಯಯುತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಆಗುಂಬೆ ಹೋಬಳಿ ಹೆಗ್ಗೋಡು ಗ್ರಾಮ ಪಂಚಾಯಿತಿ ಎದುರು ರೈತರು ಪ್ರತಿಭಟನೆ ನಡೆಸಿ ರಾಜಸ್ವ ನಿರೀಕ್ಷಕ ಸುಧೀರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ