ಕೃಷಿ ಮೇಳಗಳಲ್ಲಿ ರೈತರಿಗೆ ಮಾಹಿತಿ ಮಹಾಪೂರ ಹರಿಸಿ

KannadaprabhaNewsNetwork | Published : Jan 14, 2024 1:31 AM

ಸಾರಾಂಶ

ದೇಶದಲ್ಲಿಂದು ರೈತ ಸಮುದಾಯ ಸಂಕಷ್ಟ ಹಾಗೂ ಸಂಕ್ರಾಂತಿಯ ಸ್ಥಿತಿಯಲ್ಲಿದೆ. ಇವರಿಗೆ ಕೃಷಿ ಮೇಳಗಳು ಸಹಕಾರ, ಸಹಾಯ ನೀಡುವಂತೆ ಆಗಬೇಕು ಎಂದು ಹೊಸನಗರದಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ಧಾರೆ.

ಕನ್ನಡಪ್ರಭ ವಾರ್ತೆ ಹೊಸನಗರ

ದೇಶದಲ್ಲಿಂದು ರೈತ ಸಮುದಾಯ ಸಂಕಷ್ಟ ಹಾಗೂ ಸಂಕ್ರಾಂತಿಯ ಸ್ಥಿತಿಯಲ್ಲಿದೆ. ಇವರಿಗೆ ಕೃಷಿ ಮೇಳಗಳು ಸಹಕಾರ, ಸಹಾಯ ನೀಡುವಂತೆ ಆಗಬೇಕು ಎಂದು ಶಾಸಕ ಆರಗಜ್ಞಾನೇಂದ್ರ ಹೇಳಿದರು.

ಪಟ್ಟಣದ ನೆಹರು ಮೈದಾನದಲ್ಲಿ ಜೆಸಿಐ ಡೈಮಂಡ್ ಹಾಗೂ ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ನಾಲ್ಕನೇ ಕೃಷಿಮೇಳ ಸುಗ್ಗಿಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ದರ ದೊರಕುತ್ತಿಲ್ಲ. ಇದರ ಮೇಲೆ ಬೆಳೆನಷ್ಟ, ರೋಗಬಾಧೆ, ಹವಾಮಾನದ ವೈಪರಿತ್ಯದಂಥ ಕಾಟಗಳಿಂದ ರೈತರ ಬದುಕು ಮೂರಾಬಟ್ಟೆ ಆಗಿದೆ ಎಂದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಅಡಕೆಗೆ ಎಲೆಚುಕ್ಕಿ ರೋಗ ಬಾಧಿಸುತ್ತಿದೆ. ಮಲೆನಾಡಿನಲ್ಲಿ ರೋಗ ಉಲ್ಬಣಗೊಂಡು ರೈತರು ನೆಮ್ಮದಿ ಕಳೆದುಕೊಂಡಿದ್ದಾರೆ. ಎಲೆಚುಕ್ಕಿ ರೋಗ ಬಾಧೆಗೆ ಈ ಕೂಡಲೆ ಔಷಧಿ ಕಂಡುಹಿಡಿಯಬೇಕಾಗಿದೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಅಡಕೆ ಬೆಳೆಯ ವಿಸ್ತರಣೆಯ ಪ್ರಮಾಣ ಅತ್ಯಧಿಕವಾಗಿ ಹೆಚ್ಚುತ್ತಿದೆ. ಏಕಬೆಳೆ ಬೇಡ. ಮಿಶ್ರಬೆಳೆ ಮಾಡುವುದರಿಂದ ಒಂದಲ್ಲ ಒಂದರಲ್ಲಿ ಅಧಿಕ ಲಾಭ ದೊರೆಯಬಹುದು ಎಂದರು.ಡಿಸಿಸಿ ಬ್ಯಾಂಕ್‍ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಮಾತನಾಡಿ, ರೈತಪರ ಸಂಘಟನೆಗಳು. ಸಹಕಾರ ವ್ಯವಸ್ಥೆಗಳು ರೈತರ ಸಮಸ್ಯೆಗಳತ್ತ ಹೆಚ್ಚು ಚಿಂತನೆ ನಡೆಸಬೇಕು. ಸಹಕಾರ ಬ್ಯಾಂಕ್‍ಗಳು ಕೇವಲ ಸಾಲ ಕೂಡುವುದನ್ನಷ್ಟ ಕೆಲಸ ಮಾಡದೆ ರೈತ ಸಮುದಾಯಗಳ ದನಿಯಾಗಿ ಕೆಲಸ ಮಾಡಬೇಕು ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜಿ.ಎನ್. ಸುಧೀರ್ ಗೌಡ, ಷಡಕ್ಷರಿ, ಎಂ.ಎಂ. ಪರಮೇಶ್, ತುಂಗಾ ಅಡಕೆ ಮಂಡಿ ಅಧ್ಯಕ್ಷ ದುಮ್ಮಾ ವಿನಯ್‍ಕುಮಾರ್, ಮಾಮ್ಕೋಸ್‌ ನಿರ್ದೇಶಕ ಕೆ.ವಿ. ಕೃಷ್ಣಮೂರ್ತಿ, ಶಿಮುಲ್ ನಿರ್ದೇಶಕ ವಿದ್ಯಾಧರ ರಾವ್, ಕೀಳಂಬಿ ಮೀಡಿಯಾ ಲ್ಯಾಬ್ ವ್ಯಪಸ್ಥಾಪಕ ಕೀಳಂಬಿ ರಾಜೇಶ್‍ಇದ್ದರು.ಅರೆಮನೆ ವಿನಾಯಕ ನಿರೂಪಿಸಿದರು. ಜೆಸಿಐ ಅಧ್ಯಕ್ಷ ಮಧುಸೂಧನ್ ನಾವುಡ ಸ್ವಾಗತಿಸಿದರು. ಸಂದೀಪ್ ವಂದಿಸಿದರು. ಅನಂತರ ಗಂಗಾವತಿ ಪ್ರಾಣೇಶ್ ಮತ್ತು ತಂಡದವರಿಂದ ನಗೆಹಬ್ಬ ಕಾರ್ಯಕ್ರಮ ನಡೆಯಿತು.

ಕೃಷಿ ಮೇಳದಲ್ಲಿ ವಿವಿಧ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಮಣ್ಣು ಪರೀಕ್ಷೆ ಕೇಂದ್ರ, ಆಹಾರ ಸ್ಟಾಲ್‍ಗಳು, ನೂತನ ತಂತ್ರಜ್ಞಾನದ ಉಪಕರಣ ಕೇಂದ್ರಗಳು ಹೆಚ್ಚು ಜನರ ಗಮನ ಸೆಳೆದವು.

- - - -133ಚ್‍ಒಎಸ್1ಪಿ: ಹೊಸನಗರ ಪಟ್ಟಣದಲ್ಲಿ ನಡೆದ ಕೃಷಿಮೇಳವನ್ನು ಶಾಸಕ ಆರಗಜ್ಞಾನೇಂದ್ರ ಉದ್ಘಾಟಿಸಿದರು. ಶಾಸಕ ಗೋಪಾಲಕೃಷ್ಣ ಬೇಳೂರು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಇದ್ದರು.

Share this article