ಮುದಗಲ್ ಮೊಹರಂಗೆ ಅಗತ್ಯ ಸೌಲಭ್ಯ ಒದಗಿಸಿ

KannadaprabhaNewsNetwork |  
Published : Jul 10, 2024, 12:40 AM IST
09ಎಂಡಿಎಲ್02 | Kannada Prabha

ಸಾರಾಂಶ

ಐತಿಹಾಸಿಕ ಮುದಗಲ್ ಮೊಹರಂನಲ್ಲಿ ಪುರಸಭೆಯಿಂದ ಕುಡಿವ ನೀರಿನ, ಸ್ವಚ್ಛತೆ, ಪಾಗಿಂಗ್ ವ್ಯವಸ್ಥೆ, ಬೀದಿ ದೀಪ, ವಿದ್ಯುತ್, ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಕ್ಕೆ ಆದ್ಯತೆ ನೀಡಬೇಕೆಂದು ಪುರಸಭೆಯ ಆಡಳಿತಾಧಿಕಾರಿ ಹಾಗೂ ಸಹಾಯಕ ಆಯುಕ್ತ ಅವಿನಾಶ ಶಿಂಧೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಆದೇಶಿಸಿದರು.

ಕನ್ನಡಪ್ರಭ ವಾರ್ತೆ ಮುದಗಲ್

ಪಟ್ಟಣದ ಐತಿಹಾಸಿಕ ಮುದಗಲ್ ಮೊಹರಂನಲ್ಲಿ ಪುರಸಭೆಯಿಂದ ಕುಡಿವ ನೀರಿನ, ಸ್ವಚ್ಛತೆ, ಪಾಗಿಂಗ್ ವ್ಯವಸ್ಥೆ, ಬೀದಿ ದೀಪ, ವಿದ್ಯುತ್, ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಕ್ಕೆ ಆದ್ಯತೆ ನೀಡಬೇಕೆಂದು ಪುರಸಭೆಯ ಆಡಳಿತಾಧಿಕಾರಿ ಹಾಗೂ ಸಹಾಯಕ ಆಯುಕ್ತ ಅವಿನಾಶ ಶಿಂಧೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಆದೇಶಿಸಿದರು.

ಪಟ್ಟಣದ ಪುರಸಭೆ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮೊಹರಂ ಹಿನ್ನೆಲೆ ಪಟ್ಟಣದಾದ್ಯಂತ ಸಮರ್ಪಕವಾಗಿ ಬೀದಿ ದೀಪಗಳನ್ನು ಅಳವಡಿಸುವುದು, ಫಾಗಿಂಗ್, ನೀರಿನ ತೊಟ್ಟಿಗಳನ್ನು ತೊಳೆದು ಬ್ಲೀಚಿಂಗ್ ಪೌಡರ್ ಸಿಂಪರಣೆ ಮಾಡುವುದು, ಪ್ರತಿ ವಾರ್ಡ್‌ನಲ್ಲಿ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವದು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಸೂಚಿಸಿದರು.

ಪಟ್ಟಣದ ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಮುಂದಾಗಿದ್ದು, 15ನೇ ಹಣಕಾಸು ಯೋಜನೆಯಡಿ ₹5ಲಕ್ಷ ಲೀಟರ್ ಸಾಮರ್ಥ್ಯದ ನೀರು ಸಂಗ್ರಹಣಾ ಟ್ಯಾಂಕ್ ನಿರ್ಮಿಸಲು ಜಿಲ್ಲಾಧಿಕಾರಿಗಳಿಗೆ ಕ್ರೀಯಾಯೋಜನೆ ತಯಾರಿಸಿ ಕಳಿಸಲಾಗಿದೆ. ಮಂಜೂರಾತಿಯಾದ ಕೂಡಲೇ ಶೀಘ್ರವೇ ತಾಂತ್ರಿಕ ಕಾರ್ಯಕ್ರಮಗಳನ್ನು ಆರಂಭಿಸಲಾಗುವುದು. ಕಸ ವಿಲೇವಾರಿಯ 5 ವಾಹನಗಳನ್ನು ನಗರಾಭಿವೃದ್ಧಿ ಕೋಶ ಸಿಬ್ಬಂದಿಯ ಜೊತೆಗೆ ದೂರವಾಣಿ ಮೂಲಕ ಮಾತನಾಡಿ ಎರಡು ತಿಂಗಳೊಳಗೆ ಆಟೋಗಳನ್ನು ತರಿಸಲಾಗುವದು ಎಂದು ತಿಳಿಸಿದರು.

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ನಬೀ ಕಂದಗಲ್ಲ, ಸದಸ್ಯರಾದ ದುರಗಪ್ಪ ಕಟ್ಟಿಮನಿ, ಹನುಮಂತ ವಾಲ್ಮೀಕಿ, ಶಿವಗ್ಯಾನಪ್ಪ, ಮಹಿಬೂಬ ಕಡ್ಡಿಪುಡಿ, ಬಾಬು ಉಪ್ಪಾರ, ಮುಖಂಡರಾದ ತಮ್ಮಣ್ಣ ಗುತ್ತೇದಾರ, ಮಹಿಬೂಬ ಬಾರಿಗಿಡ, ಕರಿಯಪ್ಪ ಯಾದವ, ನಾಗರಾಜ, ರವಿ, ಮುಜಾಕೀರ ಹುಸೇನ್, ಹಸನ್ ಕವ್ವಾ. ಶಂಕ್ರಪ್ಪಜೀಡಿ, ಖದೀರ ಪಾನವಾಲೆ ಹಾಗೂ ಸಿಬ್ಬಂದಿ ಸೇರಿದಂತೆ ಮುಂತಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''