ರೈತರಿಗೆ ನಿಗದಿತ ಅವಧಿಯಲ್ಲಿ ಸೇವೆ ಕಲ್ಪಿಸಿ

KannadaprabhaNewsNetwork |  
Published : Sep 23, 2024, 01:24 AM IST
ಫೋಟೋ 22ಪಿವಿಡಿ5ತಾಲೂಕಿನ ಅರಸೀಕೆರೆ ಎಸ್‌ಬಿಐ ಶಾಖೆಯ ವ್ಯವಸ್ಥಾಪಕ ಫಣಿಕುಮಾರ್‌ ಅವರು ಸ್ಥಳೀಯ ರೈತ ಮತ್ತು ಗ್ರಾಹಕರ ಸಮಸ್ಯೆ ಕುರಿತು ಮನವಿ ಸ್ವೀಕರಿಸಿ ಭರವಸೆ ನೀಡಿದರು.          | Kannada Prabha

ಸಾರಾಂಶ

ಪಾವಗಡ: ನಿಗದಿತ ಅವಧಿಯಲ್ಲಿ ಸೇವೆ ಕಲ್ಪಿಸುವುದರಿಂದ ರಾಷ್ಟ್ರ ಹಾಗೂ ರಾಜ್ಯದಲ್ಲಿ ಎಸ್‌ಬಿಐ ಬ್ಯಾಂಕಿಗೆ ಉತ್ತಮ ಹೆಸರಿದೆ. ಆದರೆ ತಾಲೂಕಿನ ಅರಸೀಕೆರೆ ಎಸ್‌ಬಿಐ ಶಾಖೆಯಲ್ಲಿ ಸಾರ್ವಜನಿಕರ ಕೆಲಸ ಸುಗಮವಾಗಿ ನಡೆಯುತ್ತಿಲ್ಲ ಎಂದು ಮುಖಂಡ ಮಲ್ಲೇಶಪ್ಪ ಹೇಳಿದರು.

ಪಾವಗಡ: ನಿಗದಿತ ಅವಧಿಯಲ್ಲಿ ಸೇವೆ ಕಲ್ಪಿಸುವುದರಿಂದ ರಾಷ್ಟ್ರ ಹಾಗೂ ರಾಜ್ಯದಲ್ಲಿ ಎಸ್‌ಬಿಐ ಬ್ಯಾಂಕಿಗೆ ಉತ್ತಮ ಹೆಸರಿದೆ. ಆದರೆ ತಾಲೂಕಿನ ಅರಸೀಕೆರೆ ಎಸ್‌ಬಿಐ ಶಾಖೆಯಲ್ಲಿ ಸಾರ್ವಜನಿಕರ ಕೆಲಸ ಸುಗಮವಾಗಿ ನಡೆಯುತ್ತಿಲ್ಲ ಎಂದು ಮುಖಂಡ ಮಲ್ಲೇಶಪ್ಪ ಹೇಳಿದರು.

ತಾಲೂಕಿನ ಅರಸೀಕೆರೆ ಭಾರತೀಯ ಸ್ಚೇಟ್‌ ಬ್ಯಾಂಕ್‌ಗೆ ಶನಿವಾರ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಿ ಮಾತನಾಡಿದರು. ಬ್ಯಾಂಕಿಗೆ ಬಂದ ರೈತ ಮತ್ತು ಗ್ರಾಹರಿಗೆ ನಿಗಧಿತ ಅವಧಿಯಲ್ಲಿ ಬ್ಯಾಂಕ್‌ ಸಿಬ್ಬಂದಿ ಸೇವೆ ಕಲ್ಪಿಸುತ್ತಿಲ್ಲ. ಅಲ್ಲದೇ ಅಗತ್ಯ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿದ್ದರೂ ಇದುವರೆವಿಗೂ ಎಟಿಎಂ ಕಾರ್ಡ್‌ ಸೌಲಭ್ಯ ಕಲ್ಪಿಸಿಲ್ಲ. ಬ್ಯಾಂಕಿನ ಖಾತೆಯಲ್ಲಿ ಹಣ ಪಡೆಯಲು ಎಸ್‌ಬಿಐ ಸೇವಾ ಕೇಂದ್ರದ ಮೊರೆ ಹೋಗುವ ಪರಿಸ್ಥಿತಿ ಒಂದೋದಗಿದೆ ಎಂದರು.

ರೈತರಿಗೆ ಬೆಳೆಸಾಲ ಸೌಲಭ್ಯ ಸಿಗುತ್ತಿಲ್ಲ. ವ್ಯಾಪಾರ ಹಾಗೂ ಇತರೆ ಉದ್ಯಮ ಸ್ಥಾಪನೆಗೆ ಕೇಂದ್ರದ ಮುದ್ರಾ ಯೋಜನೆಯ ಸಾಲ ಸೌಲಭ್ಯ ಸಿಗುತ್ತಿಲ್ಲ. ಬ್ಯಾಂಕ್‌ ಸಿಬ್ಬಂದಿ ಸಕಾಲದಲ್ಲಿ ಗ್ರಾಹಕ ಹಾಗೂ ಫಲಾನುಭವಿಗಳಿಗೆ ಸ್ಪಂದಿಸಿ ಕೆಲಸ ಮಾಡುವಲ್ಲಿ ಸತಾಯಿಸುತ್ತಿದ್ದಾರೆ ಎಂದರು.

ಎಸ್‌ಬಿಐ ವ್ಯವಸ್ಥಾಪಕ ಪಣೀಕುಮಾರ್‌ ಮಾತನಾಡಿ, ಖಾತೆ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಸೇವಾ ಕೇಂದ್ರ ಬಗ್ಗೆ ಮಾಹಿತಿ ಪಡೆದು ನಿಗದಿತ ಅವಧಿಯಲ್ಲಿ ಗ್ರಾಹಕರಿಗೆ ಸೇವೆ ಕಲ್ಪಿಸುವಂತೆ ಸೇವಾ ಕೇಂದ್ರದವರಿಗೆ ಸೂಚಿಸುತ್ತೇನೆ. ಅರ್ಜಿ ಸಲ್ಲಿಸಿದ್ದ ಎಲ್ಲರಿಗೂ ವಾರದೊಳಗೆ ಎಟಿಎಂ ಕಾರ್ಡ್‌ ವಿತರಿಸಲಾಗುವುದು. ವೃದ್ದ ಮತ್ತು ನಿರ್ಗತಿಕರಿಗೆ ಸರ್ಕಾರದಿಂದ ಎಸ್‌ಬಿಐ ಖಾತೆಗೆ ಬಿಡುಗಡೆಯಾಗುವ ಮಾಸಿಕ ಹಣ ಸಕಾಲದಲ್ಲಿ ಸಿಗುವಂತೆ ಹಾಗೂ ಈ ಭಾಗದ ರೈತರಿಗೆ ಬೆಳೆಸಾಲ ಮತ್ತು ಮುದ್ರಾ ಯೋಜನೆಯಲ್ಲಿ ಸಾಲ ಸೌಲಭ್ಯ ಕಲ್ಪಿಸುವ ಭರವಸೆ ವ್ಯಕ್ತಪಡಿಸಿದರು.

ಬಸವಲಿಂಗೇಶ್ವರ ಶಾಸ್ತ್ರಿ, ಗ್ರಾಪಂ ಅಧ್ಯಕ್ಷ ನಾಗರಾಜ್‌, ಮಹಾಂತೇಶ, ಆನಂದ್‌, ಶೇಖರ್‌, ಚಂದ್ರಶೇಖರ್‌ ಇದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?