ಮಾವು, ಟೊಮೋಟೊಗೆ ಕೆಜಿಗೆ ₹15 ಬೆಂಬಲ ಬೆಲೆ ನೀಡಿ

KannadaprabhaNewsNetwork |  
Published : Jun 22, 2025, 01:18 AM ISTUpdated : Jun 22, 2025, 12:42 PM IST
೨೧ಕೆಎಲ್‌ಆರ್-೧ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ಮಾವು, ಟೊಮೋಟೊ ಬೆಳೆಗಾರರ ರಕ್ಷಣೆಗೆ ನಿಲ್ಲದ ಸರ್ಕಾರಕ್ಕೆ ಭಾವಪೂರ್ವಕ ಶ್ರದ್ದಾಂಜಲಿ ಅರ್ಪಿಸಿ ಪ್ರತಿ ಕೆ.ಜಿಗೆ ೧೫ ರೂ ಬೆಂಬಲ ಬೆಲೆ ಘೋಷಣೆ ಮಾಡುವಂತೆ ರೈತ ಸಂಘದಿಂದ ಉಚಿತ ಮಾವು, ಟೊಮೋಟೊ ಹಂಚುವ ರಾಜ್ಯ ಹೆದ್ದಾರಿ ರೋಜಾರ್‌ನಹಳ್ಳಿ ಗೇಟ್ ಬಂದ್ ಮಾಡಿ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿಸಲ್ಲಿಸಿದರು. | Kannada Prabha

ಸಾರಾಂಶ

  ಪ್ರತಿ ಕೆ.ಜಿಗೆ 15 ರು. ಬೆಂಬಲ ಬೆಲೆ ಘೋಷಣೆ ಮಾಡುವಂತೆ ರೈತ ಸಂಘದಿಂದ ಉಚಿತ ಮಾವು, ಟೊಮೋಟೊ ಹಂಚುವ ರಾಜ್ಯ ಹೆದ್ದಾರಿ ರೋಜಾರ್‌ನಹಳ್ಳಿ ಗೇಟ್ ಬಂದ್ ಮಾಡಿ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿ ಒತ್ತಾಯಿಸಿದರು.

  ಶ್ರೀನಿವಾಸಪುರ : ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ಮಾವು, ಟೊಮೋಟೊ ಬೆಳೆಗಾರರ ರಕ್ಷಣೆಗೆ ನಿಲ್ಲದ ಸರ್ಕಾರಕ್ಕೆ ಭಾವಪೂರ್ವಕ ಶ್ರದ್ದಾಂಜಲಿ ಅರ್ಪಿಸಿ ಪ್ರತಿ ಕೆ.ಜಿಗೆ ೧೫ ರು. ಬೆಂಬಲ ಬೆಲೆ ಘೋಷಣೆ ಮಾಡುವಂತೆ ರೈತ ಸಂಘದಿಂದ ಉಚಿತ ಮಾವು, ಟೊಮೋಟೊ ಹಂಚುವ ರಾಜ್ಯ ಹೆದ್ದಾರಿ ರೋಜಾರ್‌ನಹಳ್ಳಿ ಗೇಟ್ ಬಂದ್ ಮಾಡಿ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿ ಒತ್ತಾಯಿಸಿದರು. 

24 ಗಂಟೆಯಲ್ಲಿ ಮಾವು ಟೊಮೋಟೊಗೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರ ರಕ್ಷಣೆ ಮಾಡದೆ ಇದ್ದರೆ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡುವ ಜೊತೆಗೆ ಕೋಲಾರ ಜಿಲ್ಲೆಯ ಹಾಲು ತರಕಾರಿಗಳನ್ನು ರಾಜಕಾರಣಿಗಳ ಮನೆಗಳಿಗೆ ಸ್ಥಗಿತಗೊಳಿಸುವ ಹೋರಾಟದ ಎಚ್ಚರಿಕೆಯನ್ನು ಸರ್ಕಾರಗಳಿಗೆ ರಾಜ್ಯ ಮುಖಂಡ ಬಂಗವಾದಿ ನಾಗರಾಜ್‌ಗೌಡ ರೈತ ವಿರೋದಿಯ ಸರ್ಕಾರಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು. 

ಜಿಲ್ಲೆಯ ಉಸ್ತುವಾರಿ ಸಚಿವರು ಮಾವು ಟೊಮೋಟೊ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುತ್ತಾರೆ ಎಂಬ ನೀರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರಿಗೆ ನಿರಾಸೆ ಮೂಡಿಸಿರುವ ಉಸ್ತುವಾರಿ ಸಚಿವರೇ ಬೆಂಬಲ ಬೆಲೆ ಘೋಷಣೆ ಮಾಡದೇ ಕೋಲಾರ ಜಿಲ್ಲೆಗೆ ಕಾಲಿಟ್ಟರೆ ಎಲ್ಲಾ ಕಾರ್ಯಕ್ರಮಗಳಲ್ಲಿ ಗೋಬ್ಯಾಕ್ ರೈತ ವಿರೋಧಿ ಸಚಿವರೇ ಎಂಬ ರೈತ ಹೋರಾಟಕ್ಕೆ ಕರೆಕೊಡುವ ಜೊತೆಗೆ ಕೆ.ಡಿ.ಪಿ ಸಭೆಯನ್ನು ನಡೆಸಲು ಬಂದರೆ ಕಪ್ಪು ಬಾವುಟ ಪ್ರದರ್ಶನ ಮಾಡುವ ಎಚ್ಚರಿಕೆಯನ್ನು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ನೀಡಿದರು. 

ಜಿಲ್ಲೆಯ ರೈತರು ಕಾಂಗ್ರೆಸ್ ಸರ್ಕಾರಕ್ಕೆ ಏನೂ ದ್ರೋಹ ಮಾಡಿದ್ದಾರೆ. ಸಚಿವರೇ ಸ್ಥಳಿಯ ಜನಪ್ರತಿನಿದಿಗಳೇ? ಕನಿಷ್ಠ ಸೌಜನ್ಯಕ್ಕಾದರೂ ಮಾವು ಟೊಮೋಟೊ ಬೆಳೆಗಾರರ ಸಮಸ್ಯೆ ಆಲಿಸದೆ ಇರುವುದಕ್ಕೆ ನೀವು ಕಿವುಡರಾ, ಕುರುಡರಾ? ಇಲ್ಲವೇ ಮಾತು ಬಾರದ ಮೂಗರಾ? ಎಂದು ತಿಳಿಯದಾಗಿದೆ. ಒಟ್ಟಾರೆಯಾಗಿ ಅಪಘಾತವಾಗಿ ಕೋಮಸ್ಥಿತಿಯಲ್ಲಿರುವ ರೋಗಿಯಂತಾಗಿದ್ದೀರಾ ಎಂದು ಪ್ರಶ್ನೆ ಮಾಡಿದರು. 

ರೈತರ ಪರಿಸ್ಥಿತಿ ಜಿಲ್ಲೆಯ ನಾಡಿಮಿಡಿತವಿಲ್ಲದ ನಿಮಗೇಕೆ ಕೋಲಾರ ಉಸ್ತುವಾರಿ? ಸಮರ್ಪಕವಾಗಿ ನಿರ್ವಹಣೆ ಮಾಡಲು ಯೋಗ್ಯತೆ ಇಲ್ಲದಿದ್ದರೆ ಬದಲಾವಣೆ ಮಾಡಿಕೊಂಡು ಬೇರೆಯವರಿಗೆ ಅವಕಾಶ ಕೊಡಿ ಅದನ್ನು ಬಿಟ್ಟು, ನಾನೇ ರಾಜ ನಾನೇ ಮಂತ್ರಿ ಎಂದು ತಮಗೆ ಇಷ್ಟ ಬಂದಾಗ ಪೋಲಿಸ್ ಸರ್ಪಗಾವಲಿನಲ್ಲಿ ಸಭೆಗೆ ಬಂದು ನಾಲ್ಕು ಮಾತು ಅಧಿಕಾರಿಗಳ ವಿರುದ್ದ ಮಾತನಾಡಿ ನಾಪತ್ತೆ ಆಗುವ ರೈತರ ಶಾಪ ತಟ್ಟುವ ಕಾಲ ದೂರವಿಲ್ಲವೆಂದರು 

.ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಸುಧೀಂದ್ರ, ಟೊಮೋಟೊ, ಮಾವು ಬೆಳೆಗಾರರ ಸಮಸ್ಯೆ ಬಗೆಹರಿಸಲು ವಿಶೇಷ ತಂಡ ರಚನೆ ಮಾಡಿ ಬೆಳೆ ಹಾಗೂ ಬೆಲೆ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದು ಸರ್ಕಾರಕ್ಕೆ ಕಳುಹಿಸುವ ಜೊತೆಗೆ ಆಂದ್ರದಿಂದ ಮಾವು ಖರೀದಿ ಮಾಡಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವ ಭರವಸೆ ನೀಡಿದರು.

 ತಾಲೂಕಾದ್ಯಕ್ಷ ತರ್‍ನಹಳ್ಳಿ ಆಂಜಿನಪ್ಪ, ಈಕಂಬಳ್ಳಿ ಮಂಜುನಾಥ್, ದ್ಯಾವಂಡಹಳ್ಳಿ ರಾಜೇಂದ್ರ, ಆಲವಾಟಿ ಶಿವ, ಕದರಿನತ್ತ ಅಪ್ಪೋಜಿರಾವ್, ಶೇಕ್‌ಶಪಿವುಲ್ಲಾ, ಮಂಗಸಂದ್ರ ತಿಮ್ಮಣ್ಣ, ಆನಂದ್‌ರೆಡ್ಡಿ, ಪುತ್ತೇರಿ ರಾಜು, ಗೀರೀಶ್, ಸುಪ್ರೀಂಚಲ, ನಾಗರಾಜ. ಗೋವಿಂದ ಪ್ಪ. ಮುನಿರಾಜು, ಶೈಲಜ, ಶೋಭ ರತ್ನಮ್ಮ , ಚೌಡಮ್ಮ, ಸುಗುಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ