ಉತ್ತಮ ಚಿಕಿತ್ಸೆ ನೀಡುವುದೇ ವೈದ್ಯರ ಮಹತ್ವದ ಜವಾಬ್ದಾರಿ-ಶಾಸಕ ಡಾ. ಲಮಾಣಿ

KannadaprabhaNewsNetwork |  
Published : Jul 06, 2025, 11:48 PM IST
ಪೋಟೊ-೬ ಎಸ್.ಎಚ್.ಟಿ. ೧ಕೆ-ಶಾಸಕ ಡಾ. ಚಂದ್ರು ಕೆ. ಲಮಾಣಿ ರಾಷ್ಟಿçÃಯ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು. | Kannada Prabha

ಸಾರಾಂಶ

ಬಡವರ ಧ್ವನಿಯಾಗಿ ಮತ್ತು ಆರೋಗ್ಯವಂತ ದೇಶದ ನಿರ್ಮಾಣ ಮಾಡುವಲ್ಲಿ ವೈದ್ಯರ ಪಾತ್ರ ಮಹತ್ವದ್ದಾಗಿದೆ. ವೈದ್ಯವೃತ್ತಿಯನ್ನು ದೇವರ ಸೇವೆ ಎಂದು ಭಾವಿಸಬೇಕು. ಸದ್ಯದ ಸ್ಥಿತಿಗತಿ ಅವಲೋಕಿಸಿದಲ್ಲಿ ವೈದ್ಯರ ಸೇವೆ ಅತ್ಯಂತ ಪ್ರಮುಖ. ಆದರೆ, ಪ್ರಸ್ತುತ ಕಾಲಘಟ್ಟದಲ್ಲಿ ಸೇವಾ ಮನೋಭಾವ ಮರೀಚಿಕೆಯಾಗುತ್ತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಕಳವಳ ವ್ಯಕ್ತಪಡಿಸಿದರು.

ಶಿರಹಟ್ಟಿ: ಬಡವರ ಧ್ವನಿಯಾಗಿ ಮತ್ತು ಆರೋಗ್ಯವಂತ ದೇಶದ ನಿರ್ಮಾಣ ಮಾಡುವಲ್ಲಿ ವೈದ್ಯರ ಪಾತ್ರ ಮಹತ್ವದ್ದಾಗಿದೆ. ವೈದ್ಯವೃತ್ತಿಯನ್ನು ದೇವರ ಸೇವೆ ಎಂದು ಭಾವಿಸಬೇಕು. ಸದ್ಯದ ಸ್ಥಿತಿಗತಿ ಅವಲೋಕಿಸಿದಲ್ಲಿ ವೈದ್ಯರ ಸೇವೆ ಅತ್ಯಂತ ಪ್ರಮುಖ. ಆದರೆ, ಪ್ರಸ್ತುತ ಕಾಲಘಟ್ಟದಲ್ಲಿ ಸೇವಾ ಮನೋಭಾವ ಮರೀಚಿಕೆಯಾಗುತ್ತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಕಳವಳ ವ್ಯಕ್ತಪಡಿಸಿದರು. ಶಿರಹಟ್ಟಿ- ಲಕ್ಷ್ಮೇಶ್ವರ ತಾಲೂಕು ವೈದ್ಯರ ಸಂಘದ ವತಿಯಿಂದ ತಾಲೂಕಿನ ಕಡಕೋಳ ಗ್ರಾಮದ ಕಪ್ಪತ್ತಗುಡ್ಡ ಸೆರಗಿನಲ್ಲಿರುವ ಬಸವಯೋಗಾಶ್ರಮ ಮತ್ತು ನಿಸರ್ಗ ಚಿಕಿತ್ಸಾಲಯ ಬಸವ ಬೆಟ್ಟದಲ್ಲಿ ಏರ್ಪಡಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ವೈದ್ಯೋ ನಾರಾಯಣೋ ಹರಿ ಎಂಬಂತೆ ರೋಗಿಗಳ ಪಾಲಿಗೆ ದೇವರ ಸಮಾನವಾಗಿರುವ ವೈದ್ಯರು ಹಗಲಿರುಳೆನ್ನದೇ ಸೇವೆಯಲ್ಲಿ ತೊಡಗಿರುತ್ತಾರೆ. ಅವರ ಸೇವೆ ಅತ್ಯಂತ ಪವಿತ್ರವಾದುದು. ವೈದ್ಯರು ರೋಗಿಗಳ ರೋಗ ನಿವಾರಣೆಗೆಂದೇ ತಮ್ಮ ಜೀವವನ್ನು ಸಮರ್ಪಿಸಿಕೊಳ್ಳುತ್ತಾರೆ. ರೋಗಿಗಳು ಶೀಘ್ರಗತಿಯಲ್ಲಿ ಗುಣಮುಖರಾಗಲಿ, ಅವರ ಆರೋಗ್ಯ ಸುಸ್ಥಿತಿಯಲ್ಲಿರಲಿ, ತನ್ಮೂಲಕ ಸಾಮಾಜಿಕ ಜೀವನ ಗುಣ ಮೌಲ್ಯವು ಉತ್ತಮಗೊಳ್ಳಲಿ ಎಂದು ಶ್ರಮಿಸುತ್ತಾರೆ ಎಂದು ಹೇಳಿದರು.

ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಅನೇಕರು ತಮ್ಮ ಪ್ರಾಣ ಒತ್ತೆಯಿಟ್ಟು ರೋಗಿಗಳನ್ನು ಗುಣಪಡಿಸಿದ್ದಾರೆ. ಸಾರ್ವಜನಿಕರು ವೈದ್ಯರ ಮತ್ತು ಆಸ್ಪತ್ರೆಯೊಂದಿಗೆ ಸಹಕಾರದೊಂದಿಗೆ ನಡೆದುಕೊಳ್ಳಬೇಕು. ಸುರಕ್ಷಿತ ಆರೋಗ್ಯಕ್ಕಾಗಿ ವೈದ್ಯರು ನೀಡುವ ಯಾವುದೇ ಸಲಹೆ, ಮಾರ್ಗದರ್ಶನವನ್ನು ರೋಗಿಗಳು ಪಾಲಿಸುವುದು ಮುಖ್ಯವಾಗಿರುತ್ತದೆ ಎಂದರು. ಒತ್ತಡದ ಜೀವನ ಶೈಲಿ, ಆಹಾರ, ನೀರು ಹಾಗೂ ಪರಿಸರವು ಕಲುಷಿತಗೊಂಡಂತೆ ನಮ್ಮ ಆರೋಗ್ಯದಲ್ಲಿ ಸಮಸ್ಯೆಗಳು ಹೆಚ್ಚುತ್ತವೆ. ಆಪಘಾತ, ದುಶ್ಚಟಗಳಿಂದ ಆನಾರೋಗ್ಯವು ಕಾಡುತ್ತಿದೆ. ಹೀಗಾಗಿ ವೈದ್ಯರ ಸೇವೆ, ಆಸ್ಪತ್ರೆಗಳ ತುರ್ತು ಸೇವೆ, ಸೌಲಭ್ಯಗಳು ಪ್ರತಿಯೊಬ್ಬರಿಗೂ ಲಭಿಸುವುದು ಕಷ್ಟವಾಗುತ್ತಿದೆ. ಅದಕ್ಕಾಗಿ ಉತ್ತಮ ಆರೋಗ್ಯಕ್ಕಾಗಿ ಮುನ್ನೆಚ್ಚರಿಕೆ ಕ್ರಮಗಳೂ ಕೂಡ ಅಗತ್ಯವಾಗಿವೆ ಎಂದು ತಿಳಿಸಿದರು. ವೈದ್ಯರು ರೋಗಿಗಳ ಆರೋಗ್ಯ ಮತ್ತು ಸಾಮಾಜಿಕ ಮನಸ್ಥಿತಿ ಅರ್ಥ ಮಾಡಿಕೊಂಡು ಚಿಕಿತ್ಸೆ ನೀಡಬೇಕು. ರೋಗಿಗಳ ಸಂತೃಪ್ತಿಯೇ ವೈದ್ಯರ ತೃಪ್ತಿಯ ಮೂಲವಾಗಬೇಕು. ಹೊಸ ವಿಷಯಗಳ ಅದ್ಯಯನ ವೈದ್ಯರ ಜ್ಞಾನ ಹೆಚ್ಚಿಸುತ್ತದೆ. ಸರಳತೆ ಮತ್ತು ಕೃತಜ್ಞತಾ ಮನೋಭಾವ ಜೀವನದಲ್ಲಿ ಯಶಸ್ಸನ್ನು ತಂದುಕೊಡುತ್ತದೆ ಎಂದರು. ಶಿರಹಟ್ಟಿ- ಲಕ್ಷ್ಮೇಶ್ವರ ತಾಲೂಕು ಐಎಂಎ ಅಧ್ಯಕ್ಷ ಡಾ. ಪಿ.ಡಿ. ತೋಟದ ಅಧ್ಯಕ್ಷತೆವಹಿಸಿ ಮಾತನಾಡಿ, ರೋಗಿಗಳ ಜೀವ ಉಳಿಸುವುದಷ್ಟೇ ಅಲ್ಲ ಬದುಕಿನ ಭರವಸೆಯೂ ಆಗಿರುವ ವೈದ್ಯರನ್ನು ಗೌರವಿಸಲು ವೈದ್ಯರ ದಿನಾಚರಣೆಯು ಅತ್ಯುತ್ತಮ ಮಾರ್ಗವಾಗಬಲ್ಲದು. ಪ್ರಪಂಚದ ವಿವಿಧ ದೇಶಗಳಲ್ಲಿ ಬೇರೆ ಬೇರೆ ದಿನಗಳಂದು ವೈದ್ಯರ ದಿನ ಆಚರಿಸಲಾಗುತ್ತಿದೆ. ಭಾರತದಲ್ಲಿ ಖ್ಯಾತ ವೈದ್ಯ ಡಾ. ಬಿಧನ್ ಚಂದ್ರ ರಾಯ್ ಅವರ ನೆನಪಿಗಾಗಿ ಪ್ರತಿ ವರ್ಷ ಜುಲೈ ೧ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಬಸವ ಯೋಗಾಶ್ರಮದ ಗುರುಮಾತೆ ಓಂಕಾರೇಶ್ವರಿ ಮಾತಾಜಿ ಇದ್ದರು. ಡಾ. ಆಶಾ ಪಿ. ತೋಟದ, ಡಾ. ಜಿ.ವಿ. ಸಜ್ಜನರ, ಡಾ. ಡಿ.ಡಿ. ಬಡೇಖಾನ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ. ಸುಭಾಸ ದೈಗೊಂಡ, ಜಂಟಿ ತಾಲೂಕು ವೈದ್ಯರ ಸಂಘದ ಅಧ್ಯಕ್ಷ ಡಾ. ಎಮ್.ಸಿ. ಪ್ರಭುಗೌಡರ, ಕಾರ್ಯದರ್ಶಿ ಡಾ. ಪವನ ಟಿ. ಮಹೇಂದ್ರಕರ, ಡಾ. ಸುನೀಲ ಬುರಬುರೆ, ಡಾ. ಪ್ರಸಾದ ಮಹೇಂದ್ರಕರ, ಡಾ. ವಿರುಪಾಕ್ಷಗೌಡ ಪಾಟೀಲ, ಡಾ. ಬಸವರಾಜ ಗೋನಾಳ, ಡಾ. ಸಂದೀಪ ಕಪ್ಪತ್ತನವರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!