ತವರು‌ಮನೆಗೆ ಕಳುಹಿಸಲಿಲ್ಲವೆಂದು ಪಿಎಸ್ಸೈ ಪತ್ನಿ ಆತ್ಮಹತ್ಯೆ

KannadaprabhaNewsNetwork |  
Published : Apr 30, 2026, 01:15 AM IST
 | Kannada Prabha

ಸಾರಾಂಶ

ಬೀರೂರುಬೇಸಿಗೆ ರಜೆ ಹಿನ್ನೆಲೆಯಲ್ಲಿ ತವರೂರಿಗೆ ಕಳಿಸಲಿಲ್ಲ ಎಂಬ ಕಾರಣಕ್ಕೆ ನಡೆದ ಸಣ್ಣದೊಂದು ಗಲಾಟೆಗೆ ಮನನೊಂದು ಪೊಲೀಸ್ ಅಧಿಕಾರಿ ಪತ್ನಿ ನೇಣಿಗೆ ಶರಣಾದ ಘಟನೆ ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಬೀರೂರು ಪಟ್ಟಣದ ಠಾಣೆ ಪಿಎಸೈ ಡಿ.ವಿ. ತಿಪ್ಪೇಶ್ ಅವರ ಪತ್ನಿ ಪದ್ಮಾವತಿಕನ್ನಡಪ್ರಭ ವಾರ್ತೆ, ಬೀರೂರು

ಬೇಸಿಗೆ ರಜೆ ಹಿನ್ನೆಲೆಯಲ್ಲಿ ತವರೂರಿಗೆ ಕಳಿಸಲಿಲ್ಲ ಎಂಬ ಕಾರಣಕ್ಕೆ ನಡೆದ ಸಣ್ಣದೊಂದು ಗಲಾಟೆಗೆ ಮನನೊಂದು ಪೊಲೀಸ್ ಅಧಿಕಾರಿ ಪತ್ನಿ ನೇಣಿಗೆ ಶರಣಾದ ಘಟನೆ ಪಟ್ಟಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಬೀರೂರು ಪಟ್ಟಣದ ಠಾಣೆ ಪಿಎಸೈ ಡಿ.ವಿ. ತಿಪ್ಪೇಶ್ ಅವರ ಪತ್ನಿ ಪದ್ಮಾವತಿ ಎಸ್.ಜಿ (35) ನೇಣಿಕೆ ಶರಣಾದ ಮಹಿಳೆ.

ಬೀರೂರಿನ ರಾಜಾಜಿನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಇವರು ಮೂಲತಃ ಗೌರಿಬಿದನೂರಿನವರಾದ ಪದ್ಮಾವತಿ ಮತ್ತು ದಾವಣಗೆರೆ ಮೂಲದ ಶಿವನಹಳ್ಳಿ ಡಿ.ವಿ. ತಿಪ್ಪೇಶ್ 12 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಒಂದು ಹೆಣ್ಣು ಮತ್ತು ಗಂಡು ಎರಡು ಮಕ್ಕಳಿದ್ದಾರೆ. ಮಕ್ಕಳಿಗೆ ಶಾಲೆ ರಜೆಯಿದ್ದು ಊರಿಗೆ ಕಳಿಸುವಂತೆ ಪತ್ನಿ ಪಿಎಸ್ಐ ತಿಪ್ಪೇಶ್ ಗೆ ಹೇಳಿದ್ದರು.‌

ಆದರೆ, ಪತಿ ತಿಪ್ಪೇಶ್ ನೈಟ್ ಡ್ಯೂಟಿ ಇದೆ ನಾಳೆ ಹೋಗುವಂತೆ ಎಂದು ತಿಳಿಹೇಳಿದ್ದರು. ಅಷ್ಟಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿತ್ತು. ಇದೇ ವಿಚಾರದಲ್ಲಿ ದಂಪತಿಗಳ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಪತಿ ಮಕ್ಕಳನ್ನ ಊರಿಗೆ ಕಳಿಸದ್ದಕ್ಕೆ ಕೋಪಗೊಂಡ ಪದ್ಮಾವತಿ ಕಳೆದ ರಾತ್ರಿ 12 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದಾಗ ಮನೆಯ‌‌ ಮೇಲ್ಬಾಗದ ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಡರಾತ್ರಿ ಅಮ್ಮ ಮನೆಯಲ್ಲಿ ಕಾಣದಾದಾಗ ಮಕ್ಕಳು ಮೇಲಿನ ರೂಮಿನವರೆಗೂ ಹುಡುಕಿಕೊಂಡು ಬಂದಿದ್ದಾರೆ. ರೂಮಿನ ಬಾಗಿಲು ಹಾಕಿಕೊಂಡಿದ್ದರಿಂದ ಮಕ್ಕಳು ಬಾಗಿಲು ತೆಗೆಯುವಂತೆ ಕೂಗುತ್ತಿದ್ದನ್ನು ಕಂಡು ಅಕ್ಕಪಕ್ಕದ ಮನೆಯವರು ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.

ಬುಧವಾರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು.

ಕುಟುಂಬದ ಸಣ್ಣದೊಂದು ಮಾತಿನ ಚಕಮಕಿಗೆ ನೊಂದು ತನ್ನ ಜೀವವನ್ನೇ ಬಲಿಕೊಟ್ಟ ಪದ್ಮಾವತಿ ನಿರ್ಧಾರದಿಂದ ನಡೆದ ಧಾರುಣ ಘಟನೆ ಹಾಗೂ ತಾಯಿಯನ್ನು ಕಳೆದುಕೊಂಡ ಮಕ್ಕಳನ್ನು ಕಂಡು ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕರು ಮಮ್ಮುಲ ಮರುಗಿದ ದೃಶ್ಯ ಕಂಡುಬಂತು.

ಈ ಕುರಿತು ಪದ್ಮಾವತಿ ತಾಯಿ ನಾಗರತ್ನಮ್ಮ ಬೀರೂರು ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚುವರಿ ಪೋಲಿಸ್ ಅಧೀಕ್ಷಕ ಜಯಕುಮಾರ್, ತರೀಕೆರೆ ಡಿವೈಎಸ್ ಪಿ ಪರುಷರಾಮಪ್ಪ, ವೃತ್ತನಿರೀಕ್ಷಕ ಶ್ರೀಕಾಂತ್, ಪಿಎಸೈ ಗಣಪತಿ ಶೇಡ್ಗಾರ್ ಮತ್ತಿತರಿದ್ದರು.

ಕಂಬನಿ ಮಿಡಿದ ಪೋಲಿಸರು: ಬುಧವಾರ ಬೆಳಗ್ಗೆ ಪಿಎಸೈ ತಿಪ್ಪೇಶ್ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಪಟ್ಟಣ ಹಾಗೂ ಸುತ್ತಮುತ್ತಲ ಪೋಲಿಸ್ ಠಾಣೆಗೆ ಹಬ್ಬುತ್ತಿದ್ದಂತೆ ಎಲ್ಲಾ ಪಿಎಸೈಗಳು, ಪೇದೆಗಳು ಮೃತ ಪದ್ಮಾವತಿ ಶವ ನೋಡಿ ಕಂಬನಿ ಮಿಡಿಯುತ್ತಿದ್ದುದು ಕಂಡು ಬಂದರೆ, ಇಂತಹ ಮುದ್ದಾದ ಮಕ್ಕಳನ್ನು ಬಿಟ್ಟು ಸಾಯಲು ಮನಸ್ಸಾದರೂ ಹೇಗೆ ಬಂದಿತು, ಆ ಮಕ್ಕಳ ಭವಿಷ್ಯವೇನು ಎಂಬ ಮಾತು ಕೇಳಿ ಬಂತು.

29 ಬೀರೂರು 1. ಪದ್ಮಾವತಿ (35)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನರಿಗೆ ನೀರು, ಜಾನುವಾರಿಗೆ ಮೇವಿನ ಕೊರತೆಯಾದಂತೆ ಕ್ರಮವಹಿಸಿ: ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಡಿಕೆಶಿ ಸೂಚನೆ
ಅಭಿವೃದ್ಧಿ ಆಗಿಲ್ಲವೆಂದು ದಿನೇಶ ಶೆಟ್ಟಿ ಕೆಪಿಸಿಸಿಗೆ ಮನದಟ್ಟು