ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿದ್ದು, ಈಗ ಯಾಕೆ ಪಿಎಸ್‌ಆರ್ ಜಾರಿ ಮಾಡಿದರು?. ಇದು ರಾಷ್ಟ್ರೀಯ ಭದ್ರತೆಗೆ ಆಂತಕ ಒಡ್ಡಲಿದ್ದು, ಕೇಂದ್ರದಿಂದ ನಡೆಯುತ್ತಿರುವ ಎಸ್‌ಐಆರ್ ಕಾರ್ಯಕ್ಕೆ ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಸರ್ಕಾರ ಹೀಗೆ ಮಾಡುತ್ತಿದೆ. ತಕ್ಷಣ ರಾಜ್ಯದಲ್ಲಿ ಶಾಶ್ವತ ರಹವಾಸಿ ಪ್ರಮಾಣಪತ್ರ ನೀಡುವುದನ್ನು ಕೈ ಬಿಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದವರು ಎಚ್ಚರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಕಾಂಗ್ರೆಸ್ ಸಮಸ್ಯೆ ಮಾಡುತ್ತಿದೆ. ಆದರೆ ಜನರು ಇದರ ಬಗ್ಗೆ ಕಿವಿಗೊಡದೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.ಜಿಲ್ಲೆಯಲ್ಲಿ ಈ ಬಾರಿ ಮಳೆಯಾಗಿಲ್ಲ, ಹಳ್ಳಿಗಳಲ್ಲಿ ರೈತರ ಸಮಸ್ಯೆಯಾಗಿದೆ. ಮಳೆಯಾಗದ ಕಾರಣ ನೀರಿನ ಹಾಹಾಕಾರ ಶುರುವಾಗಿದೆ. ಬೆಂಗಳೂರಿನಲ್ಲಿರುವವರು ನೀರಾವರಿ ಮಂತ್ರಿಯಾಗಿರುವುದರಿಂದ ಇಲ್ಲಿನ ನೀರಾವರಿ ಸಮಸ್ಯೆ ಅವರಿಗೆ ತಿಳಿಯುವುದಿಲ್ಲ, ಹಾಗಾಗಿ ಈ ಭಾಗದವರಿಗೆ ಅದರಲ್ಲೂ ವಿಜಯಪುರಕ್ಕೆ ನೀರಾವರಿ ಸಚಿವಸ್ಥಾನ ನೀಡಬೇಕು. ಇಲ್ಲಿರುವ ನೀರಿನ ಸಮಸ್ಯತೆ ಬಗ್ಗೆ ಉಸ್ತುವಾರಿ ಸಚಿವರು, ಕಾಂಗ್ರೆಸ್ ಶಾಸಕರು ಸರ್ಕಾರದ ಗಮನಕ್ಕೆ ತಂದು ಇಲ್ಲಿ ನೀರು ಹರಿಸುವ ಕೆಲಸ ಮಾಡಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಈರಣ್ಣ ರಾವೂರ, ಸಾಬು ಮಾಶ್ಯಾಳ, ವಿಜಯ ಜೋಶಿ ಇದ್ದರು.