ಕನ್ನಡಪ್ರಭ ವಾರ್ತೆ ಜಮಖಂಡಿ

ನಗರದ ಒಟ್ಟು 5 ನ್ಯಾಯಾಲಯಗಳಲ್ಲಿ ಶನಿವಾರ ಆಯೋಜಿಸಿದ್ದ ಲೋಕ ಅದಾಲತ್‌ ಕಾರ್ಯಕ್ರಮದಲ್ಲಿ 890 ವಿವಿಧ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎ.ಪಿ.ಕುಲಕರ್ಣಿ ತಿಳಿಸಿದ್ದಾರೆ.

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಬಾಗಲಕೋಟೆ ಜಮಖಂಡಿ ಮಹಮದ್‌ ಇಮ್ಥಿಯಾಜ್‌ ಅಹಮದ್‌ ಇವರ ನ್ಯಾಯಾಲಯದಲ್ಲಿ 61 ಪ್ರಕರಣಗಳು ಪ್ರಧಾನ ಹಿರಿಯ ಸಿವಿಲ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಶ್ರೀಕಾಂತ ವೈದ್ಯ ಇವರ ನ್ಯಾಯಾಲಯದಲ್ಲಿ 21 ಪ್ರಕರಣಗಳು, ಜೆಎಂಎಫ್‌ಸಿ ಮತ್ತು ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶ ಶ್ರೀಕಾಂತ ರವೀಂದ್ರ ಇವರ ನ್ಯಾಯಾಲಯದಲ್ಲಿ 33 ಪ್ರಕರಣಗಳು, ಜೆಎಂಎಫ್‌ಸಿ ಮತ್ತು ಪ್ರಧಾನ ಸಿವಿಲ್‌ ನ್ಯಾಯಾಧೀಶ ಬಸವರಾಜ ಇವರ ನ್ಯಾಯಾಲಯದಲ್ಲಿ 525 ಪ್ರಕರಣಗಳು ಹಾಗೂ ಜೆಎಂಎಫ್‌ಸಿ ಮತ್ತು ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶೆ ಶ್ರೀದೇವಿ ಇವರ ನ್ಯಾಯಾಲಯದಲ್ಲಿ 250 ಪ್ರಕರಣಗಳು ಸೇರಿ ಒಟ್ಟು 980 ವಿವಿಧ ಇತ್ಯರ್ಥವಾಗಿವೆ ಎಂದು ತಿಳಿಸಿದ್ದಾರೆ.

ಸುಖಾಂತ್ಯ: ಸುಮಾ ನಾಡಗೌಡ ಹಾಗೂ ಸುಹಾಸ್‌ ನಾಡಗೌಡ ದಂಪತಿಗಳ ವಿವಾಹ ವಿಚ್ಛೇದನ ಪ್ರಕರಣ ಸುಖಾಂತ್ಯ ಗೊಂಡಿದ್ದು, ದಂಪತಿಗಳಿಬ್ಬರು ಸಹ ಬಾಳುವೆ ನಡೆಸಲು ಒಪ್ಪಿಕೊಂಡಿದ್ದಾರೆ, ಪ್ರಧಾನ ಸಿವಿಲ್‌ ನ್ಯಾಯಾಧೀಶ ಬಸವರಾಜ ಅವರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ನ್ಯಾಯಾಧೀಶರ ಮಾರ್ಗದರ್ಶನದಲ್ಲಿ ಪ್ರಕರಣ ಸುಖಾಂತ್ಯವಾಗಿದೆ ಎಂದು ನ್ಯಾಯವಾದಿಗಳ ಸಂಘದ ಜಂಟಿ ಕಾರ್ಯದರ್ಶಿ ಸಂಗಮೇಶ ಅಂಬಿ ತಿಳಿಸಿದ್ದಾರೆ.