ಪಿಯು ಫಲಿತಾಂಶ: ರಾಮನಗರ ಜಿಲ್ಲೆಗೆ 19ನೇ ಸ್ಥಾನ

KannadaprabhaNewsNetwork | Published : Apr 9, 2025 12:33 AM

ಸಾರಾಂಶ

ರಾಮನಗರ: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು ರಾಮನಗರ ಜಿಲ್ಲೆ ಶೇ. 69.71ರಷ್ಟು ಫಲಿತಾಂಶದೊಂದಿಗೆ ರಾಜ್ಯದಲ್ಲಿ 19ನೇ ಸ್ಥಾನ ಅಲಂಕರಿಸಿದೆ.

ರಾಮನಗರ: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು ರಾಮನಗರ ಜಿಲ್ಲೆ ಶೇ. 69.71ರಷ್ಟು ಫಲಿತಾಂಶದೊಂದಿಗೆ ರಾಜ್ಯದಲ್ಲಿ 19ನೇ ಸ್ಥಾನ ಅಲಂಕರಿಸಿದೆ.

2022ರಲ್ಲಿ ಶೇ.60.22ರಷ್ಟು ಫಲಿತಾಂಶದೊಂದಿಗೆ 25ನೇ ಸ್ಥಾನ ಅಲಂಕರಿಸಿದರೆ, 2023ನೇ ಸಾಲಿನಲ್ಲಿ ಶೇ.78.12ರಷ್ಟು ಅಂಕಗಳೊಂದಿಗೆ 17ನೇ ಸ್ಥಾನದಲ್ಲಿತ್ತು. 2024ನೇ ಸಾಲಿಗೆ(ಶೇ 83.58) 2025ರಲ್ಲಿ ಹೋಲಿಸಿದರೆ 2025ರಲ್ಲಿ (ಶೇ.69.71) ಶೇ.13.87ರಷ್ಟು ಕಡಿಮೆ ಫಲಿತಾಂಶ ಜಿಲ್ಲೆ ಪಡೆದುಕೊಂಡಿದೆ.

ಹೊಸದಾಗಿ ಪರೀಕ್ಷೆ ಬರೆದ 7538 ವಿದ್ಯಾರ್ಥಿಗಳ ಪೈಕಿ 5255 (ಶೇ 69.71) ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಖಾಸಗಿ ಅಭ್ಯರ್ಥಿಗಳು ಶೇ 26.94 ಹಾಗೂ ಪುನರಾವರ್ತಿತ ಅಭ್ಯರ್ಥಿಗಳು ಶೇ 13.89ರಷ್ಟು ತೇರ್ಗಡೆಯಾಗಿದ್ದಾರೆ.

ಬಾಲಕಿಯರ ಮೇಲುಗೈ:

ಪ್ರತಿ ಬಾರಿಯಂತೆ ಈ ಬಾರಿಯೂ ಜಿಲ್ಲೆಯಲ್ಲಿ ಉತ್ತೀರ್ಣರಾಗಿರುವವರ ಪೈಕಿ ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪರೀಕ್ಷೆ ಬರೆದ 4,826 ಬಾಲಕಿಯರ ಪೈಕಿ 3,353 (ಶೇ.69.48) ಹಾಗೂ 3,533 ಬಾಲಕರ ಪೈಕಿ 2,048 (ಶೇ.57.97) ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಇದರಲ್ಲಿ 5181 ಮಂದಿ ಆಂಗ್ಲ ಭಾಷೆಯಲ್ಲಿ ಪರೀಕ್ಷೆ ಬರೆದಿದ್ದು 3759 ಉತ್ತೀರ್ಣರಾಗಿ ಶೇ.72.55 ಫಲಿತಾಂಶ ದಾಖಲು ಮಾಡಿದ್ದಾರೆ. 3178 ಮಂದಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆದಿದ್ದು 1642 ಮಂದಿ ಮಾತ್ರ ಉತೀರ್ಣರಾಗಿ ಶೇ.51.67 ಫಲಿತಾಂಶ ದಾಖಲು ಮಾಡಿದ್ದಾರೆ.

ವಿಜ್ಞಾನ ವಿದ್ಯಾರ್ಥಿಗಳು ಮುಂದು:

ವಿಜ್ಞಾನ ವಿಭಾಗದಲ್ಲಿ ಜಿಲ್ಲೆಯಲ್ಲಿ ಒಟ್ಟು 2,639 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 1983 ಮಂದಿ ಪಾಸಾಗುವ ಮೂಲಕ ಶೇ.78.46 ರಷ್ಟು ಫಲಿತಾಂಶ ದಾಖಲು ಮಾಡಿದ್ದಾರೆ. ಈ ಮೂಲಕ ವಿಜ್ಞಾನ ವಿಭಾಗ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಇದರಲ್ಲಿ 1022 ಬಾಲಕರ ಪೈಕಿ 759 ಮಂದಿ ಉತ್ತೀರ್ಣರಾಗುವ ಮೂಲಕ ಶೇ.74.27 ರಷ್ಟು ಫಲಿತಾಂಶ ದಾಖಲು ಮಾಡಿದ್ದಾರೆ. 1617 ಬಾಲಕಿಯರಲ್ಲಿ 1224 ಮಂದಿ ಉತ್ತೀರ್ಣರಾಗಿ ಶೇ.75.7 ಫಲಿತಾಂಶ ದಾಖಲು ಮಾಡಿದ್ದಾರೆ.

ಕಲಾ ವಿಭಾಗದಲ್ಲಿ 1,951 ಮಂದಿ ಪರೀಕ್ಷೆ ತೆಗೆದುಕೊಂಡಿದ್ದು ಇದರಲ್ಲಿ 905 ಮಂದಿಯಷ್ಟೇ ಉತ್ತೀರ್ಣರಾಗಿದ್ದಾರೆ. ಆ ಮೂಲಕ ಶೇ.51.71ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಇದರಲ್ಲಿ 879ಮಂದಿ ಬಾಲಕರು ಪರೀಕ್ಷೆ ತೆಗೆದುಕೊಂಡಿದ್ದು 314 ಮಂದಿ ಮಾತ್ರ ಉತ್ತೀರ್ಣರಾಗಿದ್ದಾರೆ. 1072 ಬಾಲಕಿಯರು ಪರೀಕ್ಷೆ ತೆಗೆದುಕೊಂಡಿದ್ದು 591 ಮಂದಿ ಮಾತ್ರ ಉತ್ತೀರ್ಣರಾಗದ್ದಾರೆ. ಕಲಾವಿಭಾಗ ಈ ಬಾರಿ ಜಿಲ್ಲೆಯಲ್ಲಿ ಪಿಯುಸಿ ಫಲಿತಾಂಶದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಯಲ್ಲಿ ಒಟ್ಟು 3769 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 2,513 ಮಂದಿ ಪಾಸಾಗುವ ಮೂಲಕ ಶೇ.71.52ರಷ್ಟು ಫಲಿತಾಂಶ ದಾಖಲು ಮಾಡಿದೆ. ಆ ಮೂಲಕ ವಾಣಿಜ್ಯ ವಿಭಾಗ ಎರಡನೇ ಸ್ಥಾನ ಪಡೆದುಕೊಂಡಿದೆ.

ಇದರಲ್ಲಿ 1632 ಮಂದಿ ಬಾಲಕರ ಪೈಕಿ 975 ಮಂದಿ ಉತ್ತೀರ್ಣರಾಗುವ ಮೂಲಕ ಶೇ.59.74ರಷ್ಟು ಫಲಿತಾಂಶ ದಾಖಲಿಸಿದರೆ, 2137 ಹುಡುಗಿಯರು ಪರೀಕ್ಷೆ ಬರೆದಿದ್ದು 1538 ಮಂದಿ ಉತ್ತೀರ್ಣರಾಗಿ ಶೇ.71.97ಫಲಿತಾಂಶ ದಾಖಲು ಮಾಡಿದ್ದಾರೆ.

ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳ ಮೇಲುಗೈ:

ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಿಂತ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ 5181 ವಿದ್ಯಾರ್ಥಿಗಳಲ್ಲಿ 3,759 ಹಾಗೂ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದ 3178 ವಿದ್ಯಾರ್ಥಿಗಳಲ್ಲಿ 1642 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಮಾಧ್ಯಮ ವಾರು ಫಲಿತಾಂಶ:

ಕನ್ನಡ ಭಾಷೆಯಲ್ಲಿ ಮೂರು ವಿಭಾಗಗಳು ಸೇರಿ ಒಟ್ಟು 3178 ಮಂದಿ ಪರೀಕ್ಷೆ ಬರೆದಿದ್ದು, ಇದರಲ್ಲಿ 1642 ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ಆ ಮೂಲಕ ಶೇ. 51.67ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲಿ 5181 ಮಂದಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 3759 ಮಂದಿ ಉತ್ತೀರ್ಣರಾಗಿ ಶೇ.72.55ರಷ್ಟು ಫಲಿತಾಂಶ ದಾಖಲಿಸಿದ್ದಾರೆ.

ಬಾಕ್ಸ್‌...............

ಅತೀ ಹೆಚ್ಚು ಅಂಕಗಳು:

ಮಾಗಡಿ ಬಿಜಿಎಸ್‌ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸ್ವರೂಪ್ 593 ಅಂಕ ಪಡೆಯುವ ಮೂಲಕ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯಾಗಿದ್ದಾನೆ. ಇದೇ ವಿಭಾಗದಲ್ಲಿ ರಾಮನಗರ ಬಿಜಿಎಸ್ ಕಾಲೇಜಿನ ವಿದ್ಯಾರ್ಥಿನಿ ಚೇತನ್ಯ 592 ಅಂಕ ಪಡೆದುಕೊಂಡಿದ್ದಾರೆ. ಮಾಗಡಿ ಬಿಜಿಎಸ್ ಕಾಲೇಜಿನ ಹರ್ಷಿತಾ ಎಂಬ 592 ಅಂಕ ಪಡೆದುಕೊಂಡಿದ್ದಾರೆ.

ಕಲಾವಿಭಾಗದಲ್ಲಿ ಮಾಗಡಿ ಬಿಜಿಎಸ್ ಪಿಯು ಕಾಲೇಜಿನ ಕಲಾವಿಭಾಗದ ವಿ.ಸಿ. ಗಗನಾ 585 ಅಂಕ ಪಡೆಯುವ ಮೂಲಕ ಕಲಾವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇದೇ ಕಾಲೇಜಿನ ಸಿ.ಜಿ. ಚಂದನ್ 584 ಅಂಕ ಪಡೆದಿದ್ದಾರೆ. ಇದೇ ಕಾಲೇಜಿನ ತುಂಗಾ 583 ಅಂಕ ಪಡೆದುಕೊಂಡಿದ್ದಾರೆ. ಆಮೂಲಕ ಕಲಾ ವಿಭಾಗದ ಮೊದಲ ಮೂರು ಸ್ಥಾನಗಳು ಮಾಗಡಿ ಬಿಜಿಎಸ್ ಕಾಲೇಜಿನ ವಿದ್ಯಾರ್ಥಿಗಳೇ ಪಡೆದುಕೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ರಾಮನಗರದ ಯೂನಿವರ್ಸಲ್ ಕಾಲೇಜಿನ ಎಚ್.ಎಂ.ತಾರುಣ್ಯ 590 ಅಂಕ ಪಡೆದು ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ. ಇದೇ ಕಾಲೇಜಿನ ತೇಜಸ್ವಿನಿ 589 ಹಾಗೂ ಮಾಗಡಿ ಬಿಜಿಎಸ್ ಕಾಲೇಜಿನ ಮಹಮ್ಮದ್ ಅಲಿ ಜಾಫರ್ 588 ಅಂಕಪಡೆದುಕೊಂಡಿದ್ದಾರೆ.

ಬಾಕ್ಸ್‌.............

ಶೂನ್ಯ ಸಂಪಾದನೆ ಇಲ್ಲ : ಇನ್ನು ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ಪೈಕಿ ಯಾವೊಂದು ಕಾಲೇಜು ಸಹ ಶೂನ್ಯ ಫಲಿತಾಂಶ ಪಡೆದುಕೊಂಡಿಲ್ಲ.

ಬಾಕ್ಸ್................

ದ್ವಿತೀಯ ಪಿಯು ವಿಷಯವಾರು ಫಲಿತಾಂಶ ವಿಷಯ ಹಾಜರಾದವರು ಉತ್ತೀರ್ಣರಾದವರು ಶೇಕಡಾ ಫಲಿತಾಂಶವಿಜ್ಞಾನ 2507 1967 78.46ವಾಣಿಜ್ಯ 3458 2473 71.52ಕಲಾ 1573 815 51.81

ಕೋಟ್ ........

ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಮನಗರ ಜಿಲ್ಲೆಗೆ ಶೇ.69.71ರಷ್ಟು ಫಲಿತಾಂಶ ಪಡೆದುಕೊಂಡಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ಫಲಿತಾಂಶ ಕಡಿಮೆಯಾಗಿದೆ.

-ನಾಗಮ್ಮ, ಉಪ ನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ, ರಾಮನಗರ

8ಕೆಆರ್ ಎಂಎನ್ 1.ಜೆಪಿಜಿ

ವಿಜ್ಞಾನ ವಿಭಾಗದಲ್ಲಿ ರಾಮನಗರ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ರಾಮನಗರದ ಯೂನಿವರ್ಸಲ್ ಕಾಲೇಜಿನ ಎಚ್.ಎಂ.ತಾರುಣ್ಯ.

Share this article