ಕನ್ನಡಪ್ರಭ ವಾರ್ತೆ ಲಿಂಗಸುಗೂರು
ಶ್ರೀ ಸಾಯಿ ವಿದ್ಯಾಪೀಠ ಶಿಕ್ಷಣ ಸಂಸ್ಥೆ ಯಣ್ಣಿ ವಡಿಗೇರಿ ಸಂಚಾಲಿತ ಪಟ್ಟಣದ ಸರ್.ಎಂ. ವಿಶ್ವೇಶ್ವರಯ್ಯ ವಾಣಿಜ್ಯ, ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯವು ದ್ವೀತಿಯ ಪಿಯುಸಿ ವಾರ್ಷೀಕ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಕಾಲೇಜು ವಿದ್ಯಾರ್ಥಿಗಳು ಶೇ.100ರಷ್ಟು ಫಲಿತಾಂಶ ಪಡೆದು ತೇರ್ಗಡೆಯಾಗಿದ್ದಾರೆ. ಕಾಲೇಜು ಫಲಿತಾಂಶವು ರಾಜ್ಯಕ್ಕೆ 11ನೇ ಸ್ಥಾನ ಪಡೆದಿದೆ ಎಂದು ಕಾಲೇಜಿನ ಆಡಳಿತಾಧಿಕಾರಿ ರಮೇಶ ತೆಗ್ಗಿನಮನಿ ತಿಳಿಸಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಜ್ಞಾನ ವಿಭಾಗದಲ್ಲಿ ಪ್ರವೀಣ್ ಕುಮಾರ್ ಬಸವರಾಜ್ 588 ಅಂಕ ಪಡೆದು ತಾಲೂಕಿಗೆ ಪ್ರಥಮ, ಜಿಲ್ಲೆಗೆ ದ್ವೀತಿಯ, ರಾಜ್ಯಕ್ಕೆ 11ನೇ ಸ್ಥಾನ ಪಡೆದಿದ್ದಾನೆ. ಶರಣಬಸವ ಶಿವಪ್ಪ 587 ಅಂಕ ಪಡೆದು ತಾಲೂಕಿಗೆ ದ್ವಿತೀಯ, ಜಿಲ್ಲೆಗೆ ತೃತೀಯ, ರಾಜ್ಯಕ್ಕೆ 12ನೇ ಸ್ಥಾನ ಪಡೆದಿದ್ದಾನೆ. ಕಲಾ ವಿಭಾಗದಲ್ಲಿ ರಶ್ಮಿ ಕಾಳಪ್ಪ ಬಡಿಗೇರ 579 ಅಂಕ ಪಡೆದು ಪ್ರಥಮ, ಯಲ್ಲಪ್ಪ ಪರಮಣ್ಣ 574 ಅಂಕ ಪಡೆದು ದ್ವಿತೀಯ, ವಾಣಿಜ್ಯ ವಿಭಾಗದಲ್ಲಿ ಚೇತನ್ ಆಂಜನೇಯ ನಾಯ್ಕ 561 ಅಂಕಗಳನ್ನು ಪ್ರಥಮ, ರಾಧಿಕಾ ಆದಪ್ಪ 551 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕನ್ನಡ ಭಾಷೆಯಲ್ಲಿ ಓರ್ವ ವಿದ್ಯಾರ್ಥಿ 100 ಅಂಕ, ಪಡೆದರೆ, ಭೌತಶಾಸ್ತ್ರದಲ್ಲಿ ಇರ್ವರು ವಿದ್ಯಾರ್ಥಿಗಳು 100 ಅಂಕ, ರಸಾಯನಶಾಸ್ತ್ರದ ಮೂವರು ವಿದ್ಯಾರ್ಥಿಗಳು 100 ಅಂಕ, ಜೀವಶಾಸ್ತ್ರದಲ್ಲಿ ಐದು ವಿದ್ಯಾರ್ಥಿಗಳು 100 ಅಂಕ ಪಡೆದಿದ್ದಾರೆ. ಗಣಿತ ವಿಷಯದಲ್ಲಿ 06 ವಿದ್ಯಾರ್ಥಿಗಳು 100 ಅಂಕ ಪಡೆದರೆ ಹಾಗೂ ಇತಿಹಾಸ ವಿಭಾಗದಲ್ಲಿ ಒಬ್ಬ ಒರ್ವ ವಿದ್ಯಾರ್ಥಿ 100 ಅಂಕ ಪಡೆದಿದ್ದಾನೆ.ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಂಸ್ಥೆಯು ಸೇವಾಪರತೆ ಕಾರ್ಯದಕ್ಷತೆಯೊಂದಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನ ಕಾಲೇಜು ಪರಿಚಯಿಸಿದ ಕೀರ್ತಿ ನಮ್ಮ ಸಂಸ್ಥೆಯದ್ದಾಗಿದೆ. ವಿಜ್ಞಾನ ವಿಭಾಗದಲ್ಲಿ ಶೇ.100 ವಾಣಿಜ್ಯ ವಿಭಾಗದಲ್ಲಿ ಶೇ.90 ವಿದ್ಯಾರ್ಥಿಗಳ ಕಲಾ ವಿಭಾಗದಲ್ಲಿ 95ರಷ್ಟು ಫಲಿತಾಂಶ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದು ವಿದ್ಯಾರ್ಥಿಗಳ ಸಾಧನೆ ಹರ್ಷ ತಂದಿದೆ ಎಂದರು.