ಪ್ರಾಮಾಣಿಕ ಸೇವೆಯಿಂದ ಜನಮನ್ನಣೆ: ಡಿಎಚ್ಒ ಡಾ.ಮಂಜುನಾಥ

KannadaprabhaNewsNetwork |  
Published : Jul 04, 2026, 02:45 AM IST
ಫೋಟೋ: 3ಜಿಎಲ್ಡಿ-1 ಗುಳೇದಗುಡ್ಡದ ಸರ್ಕಾರಿ ಆಸ್ಪತ್ರೆಯಿಂದ ಬಾದಾಮಿಗೆ ವರ್ಗಾವಣೆಯಾದ ಡಾ.ನಾಗರಾಜ ಕುರಿ ಮತ್ತು ವಯೋ ನಿವೃತ್ತಿ ಹೊಂದಿದ ಕಚೇರಿ ವ್ಯವಸ್ಥಾಪಕ ಎಸ್.ವ್ಹಿ. ಘಾಣೇಕರ ಅವರನ್ನು ಡಿ.ಎಚ್.ಓ. ಡಾ.ಮಂಜುನಾಥ ಸನ್ಮಾನಿಸಿ ಬಿಳ್ಕೋಟ್ಟರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ ಸರ್ಕಾರಿ ಸೇವೆಯಲ್ಲಿ ಯಾರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾರೋ ಅವರು ಆತ್ಮತೃಪ್ತಿ ಕಂಡುಕೊಳ್ಳುತ್ತಾರೆ. ಜೊತೆಗೆ ಅವರಿಗೆ ಸಮಾಜದಲ್ಲಿ ಮನ್ನಣೆ, ಗೌರವ ಸಿಕ್ಕೆ ಸಿಗುತ್ತದೆ ಎಂದು ಬಾಗಲಕೋಟ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಸರ್ಕಾರಿ ಸೇವೆಯಲ್ಲಿ ಯಾರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾರೋ ಅವರು ಆತ್ಮತೃಪ್ತಿ ಕಂಡುಕೊಳ್ಳುತ್ತಾರೆ. ಜೊತೆಗೆ ಅವರಿಗೆ ಸಮಾಜದಲ್ಲಿ ಮನ್ನಣೆ, ಗೌರವ ಸಿಕ್ಕೆ ಸಿಗುತ್ತದೆ ಎಂದು ಬಾಗಲಕೋಟ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ಹೇಳಿದರು. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಿಂದ ಬಾದಾಮಿ ಸರ್ಕಾರಿ ಆಸ್ಪತ್ರೆಗೆ ವರ್ಗವಾದ ಸ್ತ್ರೀರೋಗ ತಜ್ಞೆ ಡಾ.ನಾಗರಾಜ ಕುರಿ ಮತ್ತು ಸೇವಾ ನಿವೃತ್ತಿ ಹೊಂದಿದ ಕಚೇರಿ ವ್ಯವಸ್ಥಾಪಕ ಗಣೇಕರ ಅವರನ್ನು ಸನ್ಮಾನಿಸಿ ಮಾತನಾಡಿ, ಕಳೆದ 9 ವರ್ಷಗಳಿಂದ ಗುಳೇದಗುಡ್ಡದ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞ ವೈದ್ಯರಾಗಿ ಮತ್ತು ಅಸ್ಪತ್ರೆಯ ಆಡಳಿತಧಿಕಾರಿಗಳಾಗಿ ಸೇವೆ ಸಲ್ಲಿಸಿ ಈಗ ಬದಾಮಿ ಆಸ್ಪತ್ರೆಗೆ ವರ್ಗವಾಗಿದ್ದೀರಿ. ಇಲ್ಲಿನ ಸೇವಾ ಅವಧಿಯಲ್ಲಿ ತಾವು ಸಲ್ಲಿಸಿದ ಸೇವೆ ಸ್ಮರಣೀಯ. ಜಿಲ್ಲಾ ಆಸ್ಪತ್ರೆಗಿಂತ ಹೆಚ್ಚಿನ ಹೆರಿಗೆಗಳನ್ನು ತಾವು ಮಾಡಿದ ದಾಖಲೆಯಿದೆ. ತಾಲೂಕು, ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದಲೂ ಗರ್ಭೀಣಿಯರು ಬಂದು ಹೆರಿಗೆ ಮಾಡಿಸಿಕೊಂಡ ದಾಖಲೆಗಳಿವೆ. ಇಂತಹ ಸೇವೆ ಅಪರೂಪ. ವೈದ್ಯರಿಗೆ ಮಾದರಿಯಾಗಿದ್ದಿರಿ ಎಂದು ಹಾರೈಸಿದರು.ಈ ವೇಳೆ ಕಚೇರಿ ಅಧೀಕ್ಷಕ ಎಸ್.ವ್ಹಿ.ಘಾಣೇಕರರನ್ನು ಸನ್ಮಾನಿಸಲಾಯಿತು. ಡಿಎಲ್‌ಓ ಡಾ.ಶಿವನಗೌಡ ಪಾಟೀಲ, ಡಿಎಂಓ ಡಾ.ಕುಸುಮಾ ಮಾಗಿ, ಡಿಎಸ್ಓ. ಡಾ.ಕರೆಣ್ಣವರ್, ಡಾ.ಹೂವಪ್ಪ ಗಾಣಿಗೇರ, ಸ್ತ್ರೀ ರೋಗ ತಜ್ಞ ವೈದ್ಯೆ ಡಾ.ಪುಷ್ಪಾ ನಾಯಕ, ಚಿಕ್ಕ ಮಕ್ಕಳ ತಜ್ಞ ವೈದ್ಯೆ ಮತ್ತು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಕವಿತಾ ಕುರಿ, ದಂತ ವೈದ್ಯೆ ಡಾ.ಸಾವಿತ್ರಿ ಸಜ್ಜನ, ಅರವಳಿಕೆ ತಜ್ಞ ಡಾ.ಅನೀಲಕುಮಾರ ಉಕ್ಕಲಿ, ಡಾ.ಪ್ರೀತಮ, ಆಯುಷ್ಯ ವೈದ್ಯೆ ಡಾ.ಕವಿತಾ ಸಂಕ, ಐಸಿಟಿಸಿಯ ಜ್ಯೋತಿ ಮೆಣಸಿನಕಾಯಿ, ಗಂಗಾಧರ ಹಣಗಿ, ಶಿರಸಂಗಿ, ವಿದ್ಯಾ ಅಸೂಟಿ, ವಿದ್ಯಾ ಮಠ ಹಲವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಬಿ-ಜಿ ರ‍್ಯಾಮ್ ಜಿ ಸೌಲಭ್ಯ ಅರ್ಹ ಕುಟುಂಬ ಪಡೆದುಕೊಳ್ಳಲಿ: ಮೇತ್ರಿ
ಪ್ರಪಂಚದಲ್ಲಿಯೇ ಭಾರತೀಯರ ಇಂಗ್ಲಿಷ್‌ ಭಾಷೆ ಪರಿಶುದ್ಧ: ಡಾ.ದೀಪಕ ಶಿಂಧೆ