ಡೆಂಘೀ ನಿರ್ಮೂಲನೆಗೆ ಸಾರ್ವಜನಿಕರಿಗೆ ಅರಿವು ಅಗತ್ಯ: ಈಶ್ವರ

KannadaprabhaNewsNetwork | Published : Jul 16, 2024 12:32 AM

ಸಾರಾಂಶ

ಡೆಂಘೀ ನಿರ್ಮೂಲನೆಗೆ ಮನೆಯಲ್ಲಿ ಸುತ್ತಮುತ್ತಲಿನ ಪರಿಸರದಲ್ಲಿ ನಿಂತ ನೀರನ್ನು ತೆರವುಗೊಳಿಸಬೇಕು. ಹಗಲು ವೇಳೆ ಈಡೀಸ್ ಈಜಿಪ್ಟಿ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಜ್ವರ ಬರುತ್ತದೆ. ನಾಗರಿಕರು ಮುನ್ನೆಚ್ಚರಿಕೆ ವಹಿಸಿದರೆ ಜ್ವರ ಬರದಂತೆ ತಡೆಯಬಹುದು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಡೆಂಘೀ ಬಗ್ಗೆ ಸಾರ್ವಜನಿಕರಲ್ಲಿ ಅರಿವಿನ ಜಾಗೃತಿ ಮೂಡಿಸಿದರೆ ಮಾತ್ರ ರೋಗ ತಡೆಗಟ್ಟಲು ಸಾಧ್ಯ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಈಶ್ವರ ತಿಳಿಸಿದರು.

ತಾಲೂಕಿನ ಕರಡಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ದೊಡ್ಡಯಗಟಿ ಹಾಗೂ ಗ್ರಾಪಂನಿಂದ ವೈದ್ಯಾಧಿಕಾರಿ ನಾರಾಯಣ ಮಾರ್ಗದರ್ಶನದಲ್ಲಿ ನಡೆದ ಡೆಂಘೀ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡೆಂಘೀ ನಿರ್ಮೂಲನೆಗೆ ಮನೆಯಲ್ಲಿ ಸುತ್ತಮುತ್ತಲಿನ ಪರಿಸರದಲ್ಲಿ ನಿಂತ ನೀರನ್ನು ತೆರವುಗೊಳಿಸಬೇಕು. ಹಗಲು ವೇಳೆ ಈಡೀಸ್ ಈಜಿಪ್ಟಿ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಜ್ವರ ಬರುತ್ತದೆ. ನಾಗರಿಕರು ಮುನ್ನೆಚ್ಚರಿಕೆ ವಹಿಸಿದರೆ ಜ್ವರ ಬರದಂತೆ ತಡೆಯಬಹುದು ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಪಿಡಿಒ ವಿಜಯಲಕ್ಷ್ಮಿ, ಶಾಲಾ ಶಿಕ್ಷಕರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸದಸ್ಯರು ಇದ್ದರು.

ಡೆಂಘೀ ಜ್ವರ ವಿದ್ಯಾರ್ಥಿಗಳಿಂದ ಬೀದಿ ನಾಟಕದ ಮೂಲಕ ಜಾಗೃತಿ

ಭಾರತೀನಗರ:

ಕೇಂಬ್ರಿಡ್ಜ್ ಶಾಲೆ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಬೀದಿ ನಾಟಕದ ಮೂಲಕ ಡೆಂಘೀ ಜ್ವರದ ಬಗ್ಗೆ ಅರಿವು ಮೂಡಿಸಿದರು.

ಶಾಲೆಯ ನೂರಾರು ವಿದ್ಯಾರ್ಥಿಗಳು ಮದ್ದೂರು-ಮಳವಳ್ಳಿ ಹೆದ್ದಾರಿಯ ಮೂಲಕ ಡೆಂಘೀ ಜ್ವರವನ್ನು ತಡೆಗಟ್ಟಲು ಸಾರ್ವಜನಿಕರು ಸಹಕರಿಸುವಂತೆ ಘೋಷಣೆ ಕೂಗುತ್ತ ಜಾಗೃತಿ ಮೂಡಿಸಿದರು.

ಹಲಗೂರು ವೃತ್ತದ ರಂಗೋಲಿ ಕಾಂಪ್ಲೆಕ್ಸ್ ಮುಂಭಾಗ ವಿದ್ಯಾರ್ಥಿಗಳು ಸೊಳ್ಳೆಗಳ ನಿಯಂತ್ರಣವನ್ನು ಹೇಗೆ ಮಾಡಬೇಕು. ಡೆಂಘೀ ಜ್ವರ ತಡೆಗಟ್ಟುವುದು, ಜ್ವರ ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಕಾಲಕ್ಕೆ ಚಿಕಿತ್ಸೆ ಪಡೆಯುವುದರ ಬಗ್ಗೆ ಬೀದಿ ನಾಟಕದ ಮೂಲಕ ತಿಳಿಸಿಕೊಟ್ಟರು.

ಶಾಲೆ ಮುಖ್ಯಸ್ಥೆ ನಾಗರತ್ನ ಬಲ್ಲೇಗೌಡ, ಮುಖ್ಯಶಿಕ್ಷಕಿ ಆಯೆಷಾ ಮಾತನಾಡಿದರು. ಇದೇ ವೇಳೆ ಶಾಲೆ ಸಂಸ್ಥಾಪಕ ಅಧ್ಯಕ್ಷ ಎ.ಟಿ.ಬಲ್ಲೇಗೌಡ, ಶಿಕ್ಷಕರಾದ ನವೀನ್, ಕರುಣಾಮೂರ್ತಿ, ತಾರಾ, ವಿಶ್ವ, ನಟರಾಜು, ನಿರ್ಮಲ, ಲೀಲಾವತಿ, ದಿವ್ಯ, ಮಂಜುನಾಥ್, ಮೀನಾಕ್ಷಿ, ಆಶಾ, ಸಿದ್ದರಾಮು, ಗೌತಮಿ, ನೇತ್ರಾವತಿ ಸೇರಿದಂತೆ ಹಲವರಿದ್ದರು.

Share this article