ಯಲಬುರ್ಗಾ: ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸಲು ಪೊಲೀಸ್ ಇಲಾಖೆ ಸಿದ್ಧವಿದ್ದು, ಪೊಲೀಸ್ ಠಾಣೆಯನ್ನು ಜನಸ್ನೇಹಿಯನ್ನಾಗಿ ರೂಪಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಸಿಪಿಐ ಮೌನೇಶ್ವರ ಮಾಲಿಪಾಟೀಲ್ ಹೇಳಿದರು.
ಪಿಎಸ್ಐ ವಿಜಯ ಪ್ರತಾಪ ಮಾತನಾಡಿ, ಪೊಲೀಸರೆಂದರೆ ಜನರು ಭಯಪಡಬಾರದು. ತಮ್ಮ ಸಮಸ್ಯೆಗಳನ್ನು ನಿರ್ಭೀತಿಯಿಂದ ತಿಳಿಸಬೇಕು. ಕಾನೂನುಬಾಹಿರ ಚಟುವಟಿಕೆ ಕಂಡುಬಂದಲ್ಲಿ ಪೊಲೀಸರ ಗಮನಕ್ಕೆ ತರಬೇಕು. ಸಾರ್ವಜನಿಕರು ಮತ್ತು ಪೊಲೀಸರ ನಡುವಿನ ಉತ್ತಮ ಬಾಂಧವ್ಯದಿಂದ ಅಪರಾಧ ನಿಯಂತ್ರಣ ಹಾಗೂ ಶಾಂತಿ ಕಾಪಾಡಲು ಸಾಧ್ಯ ಎಂದರು.
ಮುಖಂಡರಾದ ವೀರಣ್ಣ ಹುಬ್ಬಳ್ಳಿ, ಶರಣಪ್ಪ ಬೆಲೇರಿ, ಸುರೇಶಗೌಡ ಶಿವನಗೌಡ, ಈಶ್ವರ ಆಟಮಾಳಗಿ, ಅಶೋಕ ಮಾಲಿಪಾಟೀಲ್ ಹಾಗೂ ರಾಜಶೇಖರ ಶ್ಯಾಗೂಟಿ ಮಾತನಾಡಿ, ತಾಲೂಕಿನಾದ್ಯಂತ ವಿಂಡ್‌ಮಿಲ್ ಮತ್ತು ಸೋಲಾರ್ ಪ್ಲಾಂಟ್‌ಗಳಿಂದ ರೈತರಿಗೆ ಆಗುತ್ತಿರುವ ತೊಂದರೆಗಳು ಹಾಗೂ ದೌರ್ಜನ್ಯಗಳ ಕುರಿತು ದೂರು ನೀಡಿ, ರೈತರ ಹಿತ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ತಾಲೂಕಿನ ವಿವಿಧೆಡೆ ನಡೆಯುತ್ತಿರುವ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕು. ಅಗತ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕುರಿ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಕಳ್ಳರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಎಎಸ್ಐ ಕಲ್ಲಪ್ಪ ತಳಕಲ್, ಗಣ್ಯರಾದ ಎಂ.ಎಫ್. ನದಾಫ್, ಬಾಬುಸಾಬ ಕುಂದಗೋಳ, ಷಣ್ಮುಖಪ್ಪ ರಾಂಪುರ, ಅಮರೇಶ ಹುಬ್ಬಳ್ಳಿ, ಬಾಬುಸಾಬ ಮಂಡಲಗೇರಿ, ಶಂಕರ ಭಾವಿಮನಿ, ಯಮನೂರಪ್ಪ ನಡಲುಮನಿ, ವಸಂತಕುಮಾರ ಭಾವಿಮನಿ, ಪಾಶುಸಾಬ ಕನಕಗಿರಿ, ಸುರೇಶ ನಡಲುಮನಿ, ಈರಪ್ಪ ಬಣಕಾರ, ಅಶೋಕ ಅರಕೇರಿ, ಶಿವಾನಂದ ಬಣಕಾರ, ಶಿವು ರಾಜೂರು, ನಾಗರಾಜ ತಲ್ಲೂರು, ಶರಣಪ್ಪ ರಾಂಪುರ, ಕಳಕಪ್ಪ ತಳವಾರ, ನಟರಾಜ ಬಿದರಿ ಹಾಗೂ ಪೊಲೀಸ್ ಸಿಬ್ಬಂದಿ ವಿಠ್ಠಲ, ರೇವಣಸಿದ್ದಪ್ಪ, ಶರಣಪ್ಪ, ಗುರುರಾಜ, ಶರಣಪ್ಪ ಕಲಕಬಂಡಿ, ಪ್ರವೀಣಕುಮಾರ ಉಪಸ್ಥಿತರಿದ್ದರು.