ಕನ್ನಡಪ್ರಭವಾರ್ತೆ, ಚನ್ನರಾಯಪಟ್ಟಣ
ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆದ ಪ್ರಸಕ್ತ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಶಿಥಿಲಗೊಂಡಿದ್ದ ಕೊಠಡಿಗಳನ್ನು ನವೀಕರಿಸುವ ಕೆಲಸವಾಗಿದೆ. ಈವರೆಗೆ ಅಧಿಕಾರ ನಿರ್ವಹಿಸಿದ ಎಲ್ಲಾ ಅಧ್ಯಕ್ಷರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಎಲ್ಲರ ಪ್ರಶಂಸೆ ಇದೆ ಎಂದು ಹೇಳಿದರು.
ಅದೇ ರೀತಿಯಲ್ಲಿ ಫಲಿತಾಂಶವನ್ನು ಮತ್ತಷ್ಟು ಗಮನ ಸೆಳೆಯುವ ರೀತಿಯಲ್ಲಿ ತರುವುದಾದರೆ ಮುಂಬರುವ ದಿನಗಳಲ್ಲಿ ಈ ವಿದ್ಯಾಸಂಸ್ಥೆ ತನ್ನ ಗತ ವೈಭವವನ್ನು ಗಳಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಇಲ್ಲಿನ ಬೋಧನಾ ಶೈಲಿಯಲ್ಲಿ ಸುಧಾರಣೆಯಾಗಬೇಕು. ಮುಂದಿನ ಏಪ್ರಿಲ್ ನಂತರ ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರ ಅನುದಾನದಲ್ಲಿ ೫ ಲಕ್ಷ ನೀಡಲಾಗುವುದು ಎಂದು ಹೇಳಿದರು.ಸಂಸ್ಥೆಯ ಅಧ್ಯಕ್ಷ ಸಿ.ಜೆ. ಮಂಜುನಾಥ್ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಸಾವಿರ ಪುಸ್ತಕಗಳನ್ನ ಹೊಂದಿರುವ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಮಾಡುವ ಗುರಿ ಗೊಂದಲಾಗಿದೆ. ಸದ್ಯ ವಾಣಿಜ್ಯ ವಿದ್ಯಾರ್ಥಿಗಳಿಗೆ ಸಿಪಿಟಿ ಕೋಚಿಂಗ್ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ ಕೋಚಿಂಗ್ ಆರಂಭಿಸಲಾಗುವುದು. ದಾನಿಗಳ ನೆರವಿನಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದ್ದು ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಿ. ಎನ್. ಮಂಜುನಾಥ್, ಅಣತಿ ಆನಂದ್, ದೊಡ್ಡವರ ಮಂಜುನಾಥ್, ನಂಜುಂಡ ಮೈಮ್, ಅನಿಲ್ ಕುಮಾರ್, ರಮೇಶ್ ಕುಂಭಾರಹಳ್ಳಿ, ವಿ. ಜಿ. ಅಶೋಕ್, ಜಬೀಉಲ್ಲಾಬೇಗ್ ಮತ್ತಿತರರು ಇದ್ದರು.