ದೇಶವನ್ನು ಡ್ರಗ್ಸ್ ಮುಕ್ತಗೊಳಿಸಲು ಸಾರ್ವಜನಿಕರ ಸಹಕಾರ ಅಗತ್ಯ

KannadaprabhaNewsNetwork |  
Published : Aug 22, 2025, 12:00 AM IST
21ಎಚ್ಎಸ್ಎನ್8 : ಪಟ್ಟಣದಲ್ಲಿ ಡ್ರಗ್ಸ್ ಮುಕ್ತ ಭಾರತ ಆಂದೋಲ ಉದ್ಘಾಟಿಸಿದ ನಾಯಕರು. | Kannada Prabha

ಸಾರಾಂಶ

ಮದ್ಯ ಮಾರಾಟದಿಂದ ಸರ್ಕಾರಕ್ಕೆ ಅಪಾರ ಆದಾಯ ಬರುತ್ತಿದೆ. ಸರ್ಕಾರದ ನಿರ್ದೇಶನದಂತೆ ಅಬಕಾರಿ ಇಲಾಖೆ ಪ್ರತಿ ಗ್ರಾಮದ ಪ್ರತಿ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡುವುದಕ್ಕೆ ಅವಕಾಶ ಕೊಟ್ಟಿದೆ. ಇದು ಬಡವರ ಕಣ್ಣೀರಿನ ಹಣ. ಈ ಬಗ್ಗೆ ಮಾತನಾಡಿದರೆ ನನ್ನ ಸ್ಥಾನಕ್ಕೆ ಕುತ್ತು ಬರಲಿದೆ. ಆದರೂ ಅವಕಾಶ ಸಿಕ್ಕ ವೇಳೆ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತಿದ್ದೇನೆ. ಒಮ್ಮೆ ಡ್ರಗ್ಸ್‌ ಚಟಕ್ಕೆ ಒಳಗಾದವರು ಹೊರಬರುವುದು ತೀರ ಕಷ್ಟಕರ. ಆದ್ದರಿಂದ, ಪೋಷಕರು ತಮ್ಮ ಮಕ್ಕಳನ್ನು ಎಚ್ಚರದಿಂದ ಕಾಪಾಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಯುವ ಜನರ ಪಾಲಿಗೆ ಡ್ರಗ್ಸ್ ಮಾರಕವಾಗಿದ್ದು, ದೇಶವನ್ನು ಡ್ರಗ್ಸ್ ಮುಕ್ತಗೊಳಿಸಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್ ಪಾಟೀಲ್ ಹೇಳಿದರು.

ಗುರುವಾರ ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಡ್ರಗ್ಸ್ ಮುಕ್ತ ಭಾರತ ಆಂದೋಲನ ಉದ್ದೇಶಿಸಿ ಮಾತನಾಡಿ, ಮದ್ಯ ಮಾರಾಟದಿಂದ ಸರ್ಕಾರಕ್ಕೆ ಅಪಾರ ಆದಾಯ ಬರುತ್ತಿದೆ. ಸರ್ಕಾರದ ನಿರ್ದೇಶನದಂತೆ ಅಬಕಾರಿ ಇಲಾಖೆ ಪ್ರತಿ ಗ್ರಾಮದ ಪ್ರತಿ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡುವುದಕ್ಕೆ ಅವಕಾಶ ಕೊಟ್ಟಿದೆ. ಇದು ಬಡವರ ಕಣ್ಣೀರಿನ ಹಣ. ಈ ಬಗ್ಗೆ ಮಾತನಾಡಿದರೆ ನನ್ನ ಸ್ಥಾನಕ್ಕೆ ಕುತ್ತು ಬರಲಿದೆ. ಆದರೂ ಅವಕಾಶ ಸಿಕ್ಕ ವೇಳೆ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತಿದ್ದೇನೆ. ಅಮಲು ಪದಾರ್ಥಗಳು ಯುವಕರ ರಕ್ತ ಹೀರುತ್ತಿದ್ದು ಆರೋಗ್ಯವಂತ ಭಾರತ ನಿರ್ಮಾಣಕ್ಕೆ ಇದು ಅಡ್ಡಿಯಾಗಿದೆ. ಒಮ್ಮೆ ಡ್ರಗ್ಸ್‌ ಚಟಕ್ಕೆ ಒಳಗಾದವರು ಹೊರಬರುವುದು ತೀರ ಕಷ್ಟಕರ. ಆದ್ದರಿಂದ, ಪೋಷಕರು ತಮ್ಮ ಮಕ್ಕಳನ್ನು ಎಚ್ಚರದಿಂದ ಕಾಪಾಡಬೇಕು ಎಂದರು.ಹಿರಿಯ ಗಾಂಧಿವಾದಿ ಪ್ರಸನ್ನ ಮಾತನಾಡಿ, ಡ್ರಗ್ಸ್ ದೇಶದ ಅಭಿವೃದ್ಧಿಗೆ ಮಾರಕವಾಗಿದೆ, ಮದಕ ವಸ್ತುಗಳ ಚಟಕ್ಕೆ ದಾಸರಾಗುವವರಿಂದ ಕುಟುಂಬ, ದೇಶಕ್ಕೆ ಯಾವುದೇ ಉಪಯೋಗವಿಲ್ಲ. ಆದ್ದರಿಂದ, ಡ್ರಗ್ಸ್ ಬಳಕೆ ಮಾಡುವವರು ಹಾಗೂ ಪೂರೈಸುವವರ ಬಗ್ಗೆ ಸಾರ್ವಜನಿಕರು ಸಂಬಂದ ಪಟ್ಟ ಇಲಾಖೆ ಮಾಹಿತಿ ನೀಡ ಬೇಕು ಇದು ಕರ್ತವ್ಯ ಸಹ ಎಂದರು. ಡ್ರಕ್ಸ್ ಮುಕ್ತ ಭಾರತದ ಹೋರಾಟಗಾರ ಅವಿನಾಶ್ ಕಾಕಡೆ ಮಾತನಾಡಿ, ಇಂದು ದೇಶದ ಗಡಿಭಾಗದಲ್ಲಿ ಡ್ರಗ್ಸ್ ವ್ಯಸನಕ್ಕೆ ಶೇ. ೫೦ರಷ್ಟು ಯುವಕರು ಬಲಿಯಾಗಿದ್ದಾರೆ. ದೇಶದ ಅಂತರಿಕ ಶಕ್ತಿ ಕುಂದಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಶಕ್ತಿಗಳು ಈ ಕೆಲಸ ಮಾಡುತ್ತಿವೆ. ಆದ್ದರಿಂದ ಡ್ರಗ್ಸ್ ವಿರುದ್ಧ ತೀವ್ರ ಮಟ್ಟದ ಹೋರಾಟದಲ್ಲಿ ಎಲ್ಲರೂ ತೊಡಗಿಕೊಳ್ಳದಿದ್ದರೆ ದೇಶ, ರಾಜ್ಯ ಹಾಗೂ ಕುಟುಂಬದ ಸ್ವಾಸ್ಥ ಹಾಳಾಗಲಿದೆ ಎಂದರು.ಆಂದೋಲನದ ಮತ್ತೋರ್ವ ಮುಖಂಡ ಅಲಿಬಾಬ ಮಾತನಾಡಿ, ಮಕ್ಕಳಿಗೆ ಆರಂಭದಲ್ಲೆ ಉತ್ತಮ ಸಂಸ್ಕಾರ ಕಲಿಸುವುದರಿಂದ ಅಪಾಯಕಾರಿ ಚಟುವಟಿಕೆಯಲ್ಲಿ ಭಾಗವಹಿಸುವುದನ್ನು ತಪ್ಪಿಸಬಹುದು. ಇಂದು ತಮ್ಮ ಮಕ್ಕಳ ಬಗ್ಗೆ ನಿಗಾ ವಹಿಸದಿದ್ದರೆ ಮುಂದಿನ ದಿನಗಳಲ್ಲೆ ಇದರ ಪರಿಣಾಮವನ್ನು ತಾವೇ ಅನುಭವಿಸಬೇಕಾಗುತ್ತದೆ. ಮಾದಕ ವಸ್ತುಗಳ ಬಳಕೆಯ ಕುರಿತು ಎಲ್ಲ ಧರ್ಮದ ಧರ್ಮಗ್ರಂಥಗಳಲ್ಲೂ ಉಲ್ಲಂಘಿಸಲಾಗಿದೆ. ಮಾದಕ ವ್ಯಸನ ಯಾರಿಗೂ ಒಳ್ಳೆಯದಲ್ಲ ಎಂದರು. ಕಾರ್ಯಕ್ರಮದ ಆಯೋಜಕ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್, ಡಿವೈಎಸ್‌ಪಿ ಪ್ರಮೋದ್‌ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಾರದ ಗುರುಮೂರ್ತಿ, ಡಾ ನವೀನ್ ಚಂದ್ರ ಶೆಟ್ಟಿ, ಮಹೆಬೂಬ್ ಷಾಷ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ