ಕನ್ನಡಪ್ರಭ ಗೌರಿಬಿದನೂರು
ಆರ್ ಡಿಪಿಆರ್ 95, ಆಹಾರ ಇಲಾಖೆ 26, ಕಂದಾಯ ಇಲಾಖೆ 77, ಶಾಸಕರ ಕಚೇರಿಗೆ 50 ಒಟ್ಟು 248 ಅರ್ಜಿಗಳು ಬಂದಿದ್ದವು.
ಇದೇ ವೇಳೆಯಲ್ಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ಹೋಬಳಿ ಮಟ್ಟದ ಕುಂದುಕೊರತೆಗಳ ಸಭೆ ಆಯೋಜನೆಯಿಂದ ಬಡವರಿಗೆ ವರದಾನವಾಗಲಿದೆ, ವಿನಾಕಾರಣ ನಗರದ ತಹಸೀಲ್ದಾರ್ ಕಚೇರಿಗೆ ಅಲೆದಾಟ ತಪ್ಪಿದಂತೆ ಆಗುತ್ತದೆ, ಹೋಬಳಿ ಮಟ್ಟದ ಅಧಿಕಾರಿಗಳು ರೈತರಿಗೆ ವಿನಾಕಾರಣ ಕೆಲಸ ಮಾಡದಂತೆ ತಡೆಯುವುದು ಖಾತೆ, ಜಮೀನು, ಸರ್ವೇ, ಕಂದಾಯ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ಸೂಚಿಸಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.ನಗರಗೆರೆ ಹೋಬಳಿಯಲ್ಲಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿ ಕೆಲಸಗಳನ್ನು ನಾನು ಬಗೆಹರಿಸಿದ್ದೇನೆ, ಇನ್ನಷ್ಟು ಕಾಮಗಾರಿಗಳನ್ನು ಪೂರೈಸಲು ಬದ್ಧನಾಗಿದ್ದೇನೆ ಎಂದರು.
ಕುಂದುಕೊರತೆ ಸಭೆಯಲ್ಲಿ ಅನೇಕ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲಾಯಿತು. ಇದೇ ವೇಳೆಯಲ್ಲಿ ಸವಲತ್ತುಗಳನ್ನು ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಹೇಶ್.ಎಸ್.ಪತ್ರಿ, ಇಒ ಹೊನ್ನಯ್ಯ, ಪಶು ಇಲಾಖೆ ಅಧಿಕಾರಿ ಮಾರುತಿ ರೆಡ್ಡಿ, ಕೃಷಿ ನಿರ್ದೇಶಕ ಮೋಹನ್, ಕೆಎಚ್‌ಪಿ ಫೌಂಡೇಷನ್ ಕಾರ್ಯನಿರ್ವಹಕ ಶ್ರೀನಿವಾಸಗೌಡ, ಮುಖಂಡರಾದ ನಾಗೇಂದ್ರ.ಜಿ., ಆರ್.ಆರ್.ರೆಡ್ಡಿ, ರಾಮಚಂದ್ರ ರೆಡ್ಡಿ , ಮಂಜುನಾಥ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.