ಕನ್ನಡಪ್ರಭ ವಾರ್ತೆ ನಂಜನಗೂಡು
90 ಕೋಟಿ ರು. ವೆಚ್ಚದಲ್ಲಿ ದೇವನೂರು ಏತ ನೀರಾವರಿ ಯೋಜನೆಗೆ ಅನುದಾನ ತಂದಿದ್ದು, ಕೌಲಂದೆ ಭಾಗದ ಕೆರೆಗಳನ್ನು ತುಂಬಿಸಿ ಬರಡು ಭೂಮಿಯನ್ನು ಹಸಿರನ್ನಾಗಿಸಲು ಮುಂದಾಗಿದ್ದಾರೆ. ಅಲ್ಲದೆ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರದ ಪುನರುತ್ಥಾನಕ್ಕಾಗಿ 43 ಕೋಟಿ, ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಸಾಮಾನ್ಯ ಜನರ ಬೀದಿಗಳ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆಂದು 20 ಕೋಟಿ ಅನುದಾನ ತಂದಿದ್ದಾರೆ. 2006ರಲ್ಲಿ ಆರಂಭವಾಗಿ 2 ದಶಕ ಕಳೆದರೂ ಸಹ ಪೂರ್ಣಗೊಳ್ಳದ ಒಳಚರಂಡಿ ಯೋಜನೆ ನಂಜನಗೂಡು ಪಟ್ಟಣದ ಚರಂಡಿ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಲು ಮತ್ತೇ 20 ಕೋಟಿ ತಂದು ಒಳಚರಂಡಿಗೆ ಮುಕ್ತಿ ಕೊಡಿಸುವ ಸಂಕಲ್ಪ ತೋರಿದ್ದಾರೆ.
ಕಾಡು ಪ್ರಾಣಿಗಳ ಹಾವಳಿ ತಡೆಗೆ ಕ್ರಮಕಾಡಂಚಿನ ಜನತೆಯ ಸಂಕಷ್ಟಗಳನ್ನು ಅರಿಯಲು ರಾತ್ರಿ ವೇಳೆಯಲ್ಲಿ ಕಾಡಂಚಿನ ಗ್ರಾಮಗಳಿಗೆ ತೆರಳಿದ ಶಾಸಕರು ಕಾಡು ಪ್ರಾಣಿಗಳ ಹಾವಳಿಯಿಂದ ಜನತೆಯನ್ನು ರಕ್ಷಿಸಲು ಸಂಕಲ್ಪ ಮಾಡಿ ಕಾಡು ಪ್ರಾಣಿ ಹಾವಳಿ ತಡೆಗೆ ಕಾಡಿನುದ್ದಕ್ಕೂ ರೇಲೈ ಕಂಬಿ ಅಳವಡಿಸುವುದೊಂದೆ ಪರಿಹಾರ ಎಂದು ಅರ್ಥೈಸಿಕೊಂಡು ಅದಕ್ಕಾಗಿ ಸರ್ಕಾರದಿಂದ 11 ಕೋಟಿ ಹಣ ಬಿಡುಗಡೆ ಮಾಡಿಸಿ ಕಾಮಗಾರಿ ರೈಲ್ವೆ ಬ್ಯಾರಿಕೇಡ್ ಅಳವಡಿಸಿ ಮೆಸ್ ನಿರ್ಮಿಸುವ ಕಾಮಗಾರಿ ಆರಂಭಿಸಿದ್ದಾರೆ.
ಶಿಕ್ಷಣಕ್ಕೆ ಒತ್ತು: ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ ಆದಿವಾಸಿ ಜನರ ಶಿಕ್ಷಣಕ್ಕೆ ಅನುಕೂಲವಾಗಲೆಂದು ತಾಲೂಕಿನ ವೆಂಕಟಗಿರಿ ಕಾಲೋನಿ, ನಾಗಣಾಪುರ ಕಾಲೋನಿ ತಲಾ 3.5 ಕೋಟಿ ಒಟ್ಟು 7 ಕೋಟಿ ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ಬುಡಕಟ್ಟು ಆಶ್ರಮ ವಸತಿ ಶಾಲೆ ನಿರ್ಮಾಣಕ್ಕೆ ಹಸಿರು ನಿಸಾನೆ ತೋರಿದ್ದಾರೆ.
ರಾಜಕೀಯದ ಅನುಭವವಿಲ್ಲದೆಯೇ ತಂದೆಯ ಹಾದಿಯಲ್ಲಿ ಸಾಗಿ ಒಂದೇ ವರ್ಷದಲ್ಲಿ ಅನುಭವಿ ರಾಜಕಾರಣಿತಯಂತೆ ಕ್ಷೇತ್ರದ ಅಭಿವೃದ್ದಿಯಲ್ಲಿ ತೊಡಗಿರುವುದಲ್ಲದೆ. ಸದನದಲ್ಲೂ ಕೂಡ ಸಕ್ರೀಯವಾಗಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಜನಸೇವೆಯಲ್ಲಿ ತೊಡಗಿ ತಂದೆಗೆ ತಕ್ಕ ಎನಿಸಿಕೊಂಡಿದ್ದಾರೆ.