ಗಂಟೆಯಲ್ಲೇ ಪ್ರಜಾಸೇವೆ ಆಂದೋಲನ ಸಭೆ ಅಂತ್ಯ

KannadaprabhaNewsNetwork |  
Published : Sep 13, 2026, 01:45 AM IST
ಗಂಟೆಯಲ್ಲೇ ಪ್ರಜಾ ಸೇವೆ ಆಂದೋಲನ ಸಭೆ ಅಂತ್ಯ | Kannada Prabha

ಸಾರಾಂಶ

ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಡೆದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ತೆರಕಣಾಂಬಿ ಹೋಬಳಿ ವ್ಯಾಪ್ತಿಯ ಸಾರ್ವಜನಿಕರ ಅಹವಾಲು ಕೇವಲ ೧ ಗಂಟೆಯಲ್ಲೇ ಮುಕ್ತಾಯವಾಯಿತು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ನಡೆದ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ತೆರಕಣಾಂಬಿ ಹೋಬಳಿ ವ್ಯಾಪ್ತಿಯ ಸಾರ್ವಜನಿಕರ ಅಹವಾಲು ಕೇವಲ ೧ ಗಂಟೆಯಲ್ಲೇ ಮುಕ್ತಾಯವಾಯಿತು.

ತೆರಕಣಾಂಬಿ ಗ್ರಾಮದ ಡಾ.ಬಾಬು ಜಗಜೀವನರಾಂ ಭವನದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯತ್‌ ಏರ್ಪಡಿಸಿದ್ದ ಪ್ರಜಾ ಸೇವೆ ಆಂದೋಲನದಲ್ಲಿ ೪೫ಕ್ಕೂ ಅರ್ಜಿಗಳು ಸ್ವೀಕೃತಗೊಂಡಿವೆ.

ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಅಧ್ಯಕ್ಷತೆಯಲ್ಲಿ ನಡೆದ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನದಲ್ಲಿ ಸಾರ್ವಜನಿಕರ ಸಮಸ್ಯೆಗಲ್ಲಿ ಪ್ರಮುಖವಾಗಿ ಕೆರೆಗೆ ನೀರು,ವಿದ್ಯುತ್‌ ಸಮಸ್ಯೆ,ಕಾಡು ಪ್ರಾಣಿಗಳ ಹಾವಳಿ,ಮೇವು,ಬರ ಪರಿಹಾರ ಕುರಿತು ಸಭೆಯಲ್ಲಿದ್ದ ರೈತರು ಮಾತನಾಡಿದರು.

ರೈತರ ಸಮಸ್ಯೆ ಆಲಿಸಿದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಮಾತನಾಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಕನಸಿನ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಜಾ ಸೇವೆ ಆಂದೋಲನ ಜನರ ಬಾಗಲಿಗೆ ಸೇವೆ ಒದಗಿಸುವ ಉದ್ದೇಶ ಎಂದರು.

ಬರ ತಾಲೂಕು ಎಂದು ಈಗಾಗಲೇ ರಾಜ್ಯ ಸರ್ಕಾರ ಘೋಷಿಸಿದೆ.ಬರದಿಂದ ೧೮ ಸಾವಿರ ಕೋಟಿ ನಷ್ಟವಾಗಿದೆ.ಬರದ ಸಂಬಂಧ ಚರ್ಚಿಸಲು ಬರುವ ಸೆ.೨೧ ರಿಂದ ಅಧಿವೇಶನ ನಡೆಯಲಿದ್ದು,ಬರ ಪರಿಹಾರ ತೀರ್ಮಾನವಾಗಲಿದೆ ಎಂದರು.

ಮಳೆ ಕೊರತೆಯಿಂದ ವಿದ್ಯುತ್‌ ಸಮಸ್ಯೆ ತಲೆ ದೋರಿದೆ.ವಿದ್ಯುತ್‌ ಸಮಸ್ಯೆ ನಮ್ಮ ತಾಲೂಕಿನ ಸಮಸ್ಯೆಯಲ್ಲ.ರಾಜ್ಯದ ಸಮಸ್ಯೆಯಾಗಿದ್ದು,ಈ ಸಮಸ್ಯೆಗೆ ಪರಿಹಾರ ರಾಜ್ಯ ಸರ್ಕಾರ ಪರಿಹಾರ ನೀಡಲಿದೆ ರೈತರು ಕೂಡ ಸಹಕರಿಸಿ ಎಂದು ಮನವಿ ಮಾಡಿದರು.

ಸಚಿವರ ಜತೆ ಚರ್ಚೆ:

ಆಲಂಬೂರು ೧,೨,೩ ಮತ್ತು ೪ ನೇ ಹಂತದ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಬರುವ ಸೆ.೧೯ ರಂದು ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದ ಪ್ರಜಾ ಸೇವೆ ಆಂದೋಲನ ನಡೆಯಲಿದ್ದು,ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಲಾಗುವುದು.೪ ನೇ ಹಂತದ ಕೆರೆಗಳಿಗೆ ನೀರು ತುಂಬಿಸಬೇಕು ಎಂಬುದು ನನ್ನ ಆಗ್ರಹ.ಹೆಚ್ಚುವರಿ ಮೋಟರ್‌ ಖರೀದಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಪ್ರಜಾಸೇವೆ ಆಂದೋಲನ ಜನರ ಸಮಸ್ಯೆಗೆ ಪರಿಹಾರ-ಶಾಸಕ:

ಜನರ ಸಮಸ್ಯೆ ಪರಿಹಾರ ಕೊಡಲು ಪ್ರಜಾ ಸೇವೆ ಆಂದೋಲನ ರಾಜ್ಯ ಸರ್ಕಾರ ಜಾರಿಗೆ ತಂದಿದ್ದು,ಜನರ ಸಮಸ್ಯೆ ಆಲಿಸಿ ಪರಿಹರಿಸಲು ಪ್ರಯತ್ನಿಸುವುದಾಗಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

ಪ್ರಜಾಸೇವೆ ಆಂದೋಲನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ, ಜನರ ಸಮಸ್ಯೆಗಳಿವೆ.ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸಲು ಸಾಧ್ಯವಿಲ್ಲ.ಕ್ರಮ ಬದ್ದ ಹಾಗೂ ನಿಯಮಾನುಸಾರ ಇರುವ ಸಮಸ್ಯೆಗಳಿಗೆ ತಾಲೂಕು ಆಡಳಿತ ಬಗೆಹರಿಸಲಿದೆ ಎಂದರು.

ರೈತರಿಗೆ ಸಾಗುವಳಿ,ರಸ್ತೆ,ನೀರು,ನಿವೇಶನ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಮುಟ್ಟಿಸಿ ಹಾಗೂ ಒತ್ತಡ ಹೇರಿ ಪರಿಹಾರ ಕಂಡು ಕಂಡು ಹಿಡಿಯುವ ಕೆಲಸ ಮಾಡುವುದು ನನ್ನ ಕೆಲಸವಾಗಿದ್ದು,ಈ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.

೪ನೇ ಹಂತದ ಕೆರೆಗಳಿಗೆ ಪೈಪ್‌ಲೈನ್‌ನೊಂದೇ ಪರಿಹಾರ:

ತಾಲೂಕಿನ ೩ ಮತ್ತು ೪ ನೇ ಹಂತದ ಕೆರೆಗಳಿಗೆ ನೀರು ತುಂಬಿಸುವ ಪ್ರಯತ್ನ ನಡೆಯುತ್ತಿದೆ.೪ ನೇ ಹಂತದ ಕೆರೆಗಳಿಗೆ ಪೈಪ್‌ ಲೈನ್‌ ಮೂಲಕ ನೀರು ಹರಿದರೆ ಮಾತ್ರ ಪರಿಹಾರ ಸಿಗುತ್ತದೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

೪ನೇ ಹಂತದ ಕೆರೆಗಳಲ್ಲಿ ಬಸವನ ಕಟ್ಟೆಗೆ ಬರುವ ವೇಳೆಗೆ ೩ ನೇ ಹಂತದ ಕೆರೆಗಳಿಗೆ ನೀರು ಬಿಡಲಾಗುತ್ತಿದೆ. ೪ ನೇ ಹಂತದ ನೀರಿದ್ದ ನಾಲ್ಕು ಕೆರೆಗಳು ಒಣಗುತ್ತಿದೆ. ೨ನೇ ಹಂತದ ಕಾಳನಹುಂಡಿ ಕೆರೆಗೆ ನೀರಿಲ್ಲದೆ ಕುಡಿವ ನೀರಿಗೂ ತೊಂದರೆ ಎಂದು ಬೇಡಿಕೆ ಬಂದಿದೆ ಎಂದರು.

೧೧೦ ಕೆರೆ,ಕಟ್ಟೆಗಳ ಯೋಜನೆಯಲ್ಲಿ ೪೭೫ ಕೋಟಿ ಅನುದಾನದಲ್ಲಿ ಹುತ್ತೂರು ಕೆರೆಯಿಂದ ಮುಂದಿನ ಕೆರೆಗಳಿಗೆ ಪೈಪ್‌ ಲೈನ್‌ ಹಾಕಿದರೆ ಮಾತ್ರ ಕೆರೆಗಳಿಗೆ ನೀರು ತುಂಬಲು ಸಾದ್ಯ.ಪೈಪ್‌ ಲೈನ್‌ ಕಾಮಗಾರಿ ಆರಂಭ ಶೀಘ್ರದಲ್ಲೇ ಆಗಲಿದೆ ಎಂದು ಸಮಜಾಯಿಸಿ ನೀಡಿದರು.

ಪ್ರಜಾಸೇವೆ ಆಂದೋಲನದಲ್ಲಿ ತಹಸೀಲ್ದಾರ್‌ ಎಂ.ಎಸ್.ತನ್ಮಯ್‌,ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಷಣ್ಮುಗಂ, ತಾಲೂಕು ಮಟ್ಟದ ಅಧಿಕಾರಿಗಳು, ಹೋಬಳಿ ವ್ಯಾಪ್ತಿಯ ಸಾರ್ವಜನಿಕರು, ರೈತ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿ ನಂಬಿ ಬದುಕುತ್ತಿರುವ ರೈತರಿಗೆ ನ್ಯಾಯ ಒದಗಿಸಿ: ರಮೇಶ್‌ ಬಂಡಿಸಿದ್ದೇಗೌಡ
ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ಸಮಸ್ಯೆ ಹೊತ್ತು ನನ್ನ ಬಳಿ ಬರುತ್ತಿದ್ದಾರೆ: ಎಚ್‌.ಟಿ.ಮಂಜು